ಅಹ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಎದುರಾಳಿಗೆ 234 ರನ್ಗಳ ಸಾಧಾರಣ ಗುರಿ ನೀಡಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ಕೇವಲ 43 ರನ್ಗಳಿಸುವಷ್ಟರಲ್ಲಿ ನಾಯಕ ರೋಹಿತ್ ಶರ್ಮಾ(5), ರಿಷಭ್ಪಂತ್ (18) ಮತ್ತು ವಿರಾಟ್ ಕೊಹ್ಲಿ(18) ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದಾದ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ 4ನೇ ವಿಕೆಟ್ ಜೊತೆಯಾಟದಲ್ಲಿ 91 ರನ್ಗಳ ಜೊತೆಯಾಟ ನೀಡಿದರು. 48 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 49 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಾಹುಲ್ 2 ರನ್ ಕದಿಯುವ ಯತ್ನದಲ್ಲಿ ರನ್ಔಟ್ ಆದರು.
ರಾಹುಲ್ ವಿಕೆಟ್ ಪತನದೊಂದಿಗೆ ಭಾರತದ ಬೃಹತ್ ಮೊತ್ತದ ಕನಸು ಕೂಡ ನುಚ್ಚುನೂರಾಯಿತು. ಸೂರ್ಯಕುಮಾರ್ ಯಾದವ್ 83 ಎಸೆತಗಳಲ್ಲಿ 5 ಬೌಂಡರಿ ಸಹಿತ 64, ವಾಷಿಂಗ್ಟನ್ ಸುಂದರ್ 41 ಎಸೆತಗಳಲ್ಲಿ 24 , ದೀಪಕ್ ಹೂಡ 25 ಎಸೆತಗಳಲ್ಲಿ 29, ಚಹಲ್ ಅಜೇಯ 11 ರನ್ಗಳಿಸಿದರು.
ವಿಂಡೀಸ್ ಪರ ಅಲ್ಜಾರಿ ಜೋಶಫ್ 36ಕ್ಕೆ2, ಒಡೆನ್ ಸ್ಮಿತ್ 29ಕ್ಕೆ 2, ಕೆಮರ್ ರೋಚ್, ಅಲೆನ್, ಹೋಲ್ಡರ್ ಮತ್ತು ಹೊಸೇನ್ ತಲಾ ಒಂದು ವಿಕೆಟ್ ಪಡೆದು ಭಾರತವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು.
ಇದನ್ನೂ ಓದಿ:ನಾಯಕತ್ವದಲ್ಲಿ ಧೋನಿ ಮಾರ್ಗ ಅನುಸರಿಸಿ ವಿಫಲರಾದ ರೋಹಿತ್ ಶರ್ಮಾ