ETV Bharat / sports

2ನೇ ಸಲ ರೋಡ್​​ ಸೇಫ್ಟಿ ವರ್ಲ್ಡ್​ ಸಿರೀಸ್​ ಗೆದ್ದ ಇಂಡಿಯಾ ಲೆಜೆಂಡ್ಸ್.. ಲಂಕಾ ಲೆಜೆಂಡ್ಸ್​ಗೆ ನಿರಾಸೆ - Sri Lanka Legends

ರಸ್ತೆ ಸುರಕ್ಷತೆಯ ಅರಿವು ಮೂಡಿಸಲು ನಡೆದ ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​ ಮತ್ತೊಮ್ಮೆ ಇಂಡಿಯಾ ಲೆಜೆಂಡ್ಸ್​ ಪಾಲಾಯಿತು. ಹಾಲಿ ಚಾಂಪಿಯನ್ನರ ಆಟದ ಮುಂದೆ ಶ್ರೀಲಂಕಾ ಲೆಜೆಂಡ್ಸ್ ಮಂಡಿಯೂರಿತು.

india-legends-clinch-road-safety-world-series
ರೋಡ್​​ ಸೇಫ್ಟಿ ವರ್ಲ್ಡ್​ ಸಿರೀಸ್​ ಗೆದ್ದ ಇಂಡಿಯಾ ಲೆಜೆಂಡ್ಸ್
author img

By

Published : Oct 2, 2022, 2:55 PM IST

ರಾಯ್‌ಪುರ (ಛತ್ತೀಸ್‌ಗಢ): ನಮನ್ ಓಜಾ ಸಿಡಿಸಿದ ಭರ್ಜರಿ ಅಜೇಯ ಶತಕ, ವಿನಯ್ ಕುಮಾರ್ ಆಲ್​ರೌಂಡ್​ ಆಟ ಮತ್ತು ಅಭಿಮನ್ಯು ಮಿಥುನ್ ಮಾರಕ ಬೌಲಿಂಗ್​ ನೆರವಿನಿಂದ ಶ್ರೀಲಂಕಾ ಲೆಜೆಂಡ್ಸ್ ಸೋಲಿಸಿ 2 ನೇ ಬಾರಿಗೆ ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.

ಶನಿವಾರ ರಾಯ್‌ಪುರದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಭಾರತ ಲೆಜೆಂಡ್ಸ್​ 20 ಓವರ್​ಗಳಲ್ಲಿ 6 ವಿಕೆಟ್​ಗೆ 195 ರನ್ ಗಳಿಸಿತು. ಶ್ರೀಲಂಕಾ ಲೆಜೆಂಡ್ಸ್​ 18.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 162 ರನ್​ ಮಾತ್ರ ಗಳಿಸಿ, 33 ರನ್​ಗಳಿಂದ ಸೋಲು ಕಂಡಿತು.

ನಮನ್​ ಓಜಾ ಶೋ: ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಜೊತೆ ಇನಿಂಗ್ಸ್​ ಆರಂಭಿಸಿದ ನಮನ್ ಓಜಾ ಶ್ರೀಲಂಕಾ ಲೆಜೆಂಡ್ಸ್​ ಬೌಲರ್​ಗಳನ್ನು ಚೆಂಡಾಡಿದರು. 71 ಎಸೆತಗಳಲ್ಲಿ ಅಮೋಘ 108* ರನ್‌ ಗಳಿಸಿದರು. ಸಚಿನ್​ ಸೊನ್ನೆಗೆ ಔಟಾದರು. ವಿನಯ್​ಕುಮಾರ್​ 36, ಯುವರಾಜ್​ ಸಿಂಗ್​ 19 ರನ್​ ಬಾರಿಸಿದರು. ಶ್ರೀಲಂಕಾ ಲೆಜೆಂಡ್ಸ್​ ಪರವಾಗಿ ನುವಾನ್ ಕುಲಶೇಖರ 3, ಇಸುರು ಉದಾನಾ 2 ವಿಕೆಟ್​ ಪಡೆದರು.

ಬೃಹತ್​ ಮೊತ್ತದ ಗುರಿ ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್​ ಸತತವಾಗಿ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. ಕೆಳ ಕ್ರಮಾಂಕದಲ್ಲಿ ಸಿಡಿದ ಇಶಾನ್ ಜಯರತ್ನೆ 51 ರನ್​ ಗಳಿಸಿ ಪ್ರತಿರೋಧ ಒಡ್ಡಿದರು. ಮಾರಕ ಬೌಲಿಂಗ್​ ದಾಳಿ ಮಾಡಿದ ಕನ್ನಡಿಗ ವಿನಯ್ ಕುಮಾರ್ 3 ವಿಕೆಟ್​ ಕಿತ್ತರೆ, ಅಭಿಮನ್ಯು ಮಿಥುನ್ 2 ವಿಕೆಟ್​ ಪಡೆದರು.

ದಿಗ್ಗಜ ಆಟಗಾರರಾದ ದಿಲ್ಶನ್ ಮುನವೀರ (8), ಸನತ್ ಜಯಸೂರ್ಯ (5), ನಾಯಕ ತಿಲಕರತ್ನೆ ದಿಲ್ಯಾನ್ (11) ಮತ್ತು ಉಪುಲ್ ತರಂಗ (10) ಸಿಡಿಯಲಿಲ್ಲ. ಕೊನೆಯಲ್ಲಿ ಶ್ರೀಲಂಕಾ ಲೆಜೆಂಡ್ಸ್​ 18.5 ಓವರ್‌ಗಳಲ್ಲಿ 162 ರನ್‌ಗಳಿಗೆ ಗಂಟುಮೂಟೆ ಕಟ್ಟಿತು.

ಓದಿ: ಬ್ಯಾಟ್​ ಕ್ರೀಸ್​ ದಾಟಿದ್ದರೂ ಔಟ್​ ನೀಡಿದ ಮೂರನೇ ಅಂಪೈರ್​... ಮಹಿಳಾ ಏಷ್ಯಾಕಪ್​ನಲ್ಲಿ ರನೌಟ್​ ವಿವಾದ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.