ತಿರುವನಂತಪುರಂ: ಟಿ20 ವಿಶ್ವಕಪ್ನ ಟ್ರಯಲ್ ರನ್ ಆಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಕೇರಳದ ತಿರುವನಂತಪುರಂನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳು ವಿಶ್ವಕಪ್ ಗುರಿಯಾಗಿಸಿಕೊಂಡು ತಂಡದ ಸಂಯೋಜನೆಗಾಗಿ ಉತ್ತಮ ಪ್ರದರ್ಶನ ನೀಡುವುದು ಮಹತ್ವದ್ದಾಗಿದೆ. ಉಭಯ ತಂಡಗಳು 20 ಪಂದ್ಯಗಳಲ್ಲಿ ಈವರೆಗೂ ಸೆಣಸಾಡಿದ್ದು, ಭಾರತ 11 ರಲ್ಲಿ ಗೆಲುವು ಕಂಡರೆ, ಆಫ್ರಿಕಾ 8 ರಲ್ಲಿ ವಿಜಯ ಸಾಧಿಸಿದೆ.
-
🚨 Team News 🚨
— BCCI (@BCCI) September 28, 2022 " class="align-text-top noRightClick twitterSection" data="
A look at #TeamIndia's Playing XI for the first #INDvSA T20I 🔽
Follow the match ▶️ https://t.co/L93S9jMHcv pic.twitter.com/Uay6kuQJbE
">🚨 Team News 🚨
— BCCI (@BCCI) September 28, 2022
A look at #TeamIndia's Playing XI for the first #INDvSA T20I 🔽
Follow the match ▶️ https://t.co/L93S9jMHcv pic.twitter.com/Uay6kuQJbE🚨 Team News 🚨
— BCCI (@BCCI) September 28, 2022
A look at #TeamIndia's Playing XI for the first #INDvSA T20I 🔽
Follow the match ▶️ https://t.co/L93S9jMHcv pic.twitter.com/Uay6kuQJbE
ಭಾರತ ತಂಡವನ್ನು ಪರಿಷ್ಕರಿಸಲಾಗಿದ್ದು, ಕೊರೊನಾ ಪೀಡಿತ ಮೊಹಮದ್ ಶಮಿ ಬದಲಾಗಿ ಉಮೇಶ್ ಯಾದವ್, ಗಾಯಗೊಂಡಿರುವ ದೀಪಕ್ ಹೂಡಾ ಜಾಗಕ್ಕೆ ಶ್ರೇಯಸ್ ಅಯ್ಯರ್ರನ್ನು ಸೇರಿಸಿಕೊಳ್ಳಲಾಗಿದೆ. ವಿಶ್ವಕಪ್ ದೃಷ್ಟಿಯಿಂದ ಹಾರ್ದಿಕ್ ಪಾಂಡ್ಯಾ, ಭುವನೇಶ್ವರ್ ಕುಮಾರ್ಗೆ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಆಲ್ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
-
🚨 Toss Update🚨@ImRo45 has won the toss & #TeamIndia have elected to bowl against South Africa in the 1⃣st @mastercardindia #INDvSA T20I.
— BCCI (@BCCI) September 28, 2022 " class="align-text-top noRightClick twitterSection" data="
Follow the match ▶️ https://t.co/L93S9jMHcv pic.twitter.com/z67H1zqdMy
">🚨 Toss Update🚨@ImRo45 has won the toss & #TeamIndia have elected to bowl against South Africa in the 1⃣st @mastercardindia #INDvSA T20I.
— BCCI (@BCCI) September 28, 2022
Follow the match ▶️ https://t.co/L93S9jMHcv pic.twitter.com/z67H1zqdMy🚨 Toss Update🚨@ImRo45 has won the toss & #TeamIndia have elected to bowl against South Africa in the 1⃣st @mastercardindia #INDvSA T20I.
— BCCI (@BCCI) September 28, 2022
Follow the match ▶️ https://t.co/L93S9jMHcv pic.twitter.com/z67H1zqdMy
ಭಾರತ ತಂಡದಲ್ಲಿ ಬದಲಾವಣೆ: ವಿಶ್ರಾಂತಿ ಪಡೆದಿರುವ ಹಾರ್ದಿಕ್ ಪಾಂಡ್ಯಾ, ಭುವನವೇಶ್ವರ್ ಬದಲಾಗಿ ರಿಷಬ್ ಪಂತ್, ಅರ್ಷದೀಪ್ ಆಡಿದರೆ, ಜಸ್ಪ್ರೀತ್ ಬೂಮ್ರಾ, ಯಜುವೇಂದ್ರ ಚಹಲ್ ಬದಲಿಗೆ ದೀಪಕ್ ಚಹರ್ ಮತ್ತು ರವಿಚಂದ್ರನ್ ಅಶ್ವಿನ್ ಕಣಕ್ಕಿಳಿಯಲಿದ್ದಾರೆ.
ತಂಡಗಳು ಇಂತಿವೆ - ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹರ್, ಅರ್ಷದೀಪ್ ಸಿಂಗ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ.