ದುಬೈ : ಮಳೆಯ ಕಾರಣ ಡ್ರಾನಲ್ಲಿ ಅಂತ್ಯಗೊಂಡಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಎರಡೂ ತಂಡಗಳಿಗೆ ಪಂದ್ಯದ ಸಂಭಾವನೆಯ ಶೇ.40ರಷ್ಟು ದಂಡವಾಗಿ ವಿಧಿಸಲಾಗಿದೆ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳಿಂದ ತಲಾ 2 ಅಂಕಗಳನ್ನು ಕಡಿತಗೊಳಿಸಲಾಗಿದೆ.
ಪಂದ್ಯದ ರೆಫ್ರಿ ಕ್ರಿಸ್ ಬ್ರಾಡ್ ನಿಗದಿಪಡಿಸಿದ ಸಮಯದಲ್ಲಿ 2 ಓವರ್ಗಳನ್ನು ತಡವಾಗಿ ಮಾಡಿದ್ದಕ್ಕೆ ಎರಡು ತಂಡಗಳಿಗೂ ದಂಡ ವಿಧಿಸಿದ್ದಾರೆ. ಐಸಿಸಿ ಆರ್ಟಿಕಲ್ 2.22ರ ಪ್ರಕಾರ, ಟೆಸ್ಟ್ ಪಂದ್ಯದಲ್ಲಿ ಒಂದು ಓವರ್ ತಡವಾಗಿ ಬೌಲಿಂಗ್ ಮಾಡಿದರೆ ಕನಿಷ್ಠ ಓವರ್ ದರಕ್ಕೆ ಶಿಕ್ಷೆಯಾಗಿ ಎಲ್ಲಾ ಆಟಗಾರರು ಪಂದ್ಯ ಶುಲ್ಕದ ಶೇ.20ರಷ್ಟು ದಂಡ ಪಾವತಿಸಬೇಕಾಗುತ್ತದೆ.
ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಯಮ 16.11.2ರ ಪ್ರಕಾರ, ಒಂದು ಓವರ್ ನಿಧಾನಗತಿ ಬೌಲಿಂಗ್ ಆ ತಂಡದ ಒಟ್ಟು ಅಂಕಗಳಿಂದ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಜೋ ರೂಟ್ ಮತ್ತು ವಿರಾಟ್ ಕೊಹ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದರಿಂದ ಯಾವುದೇ ಔಪಚಾರಿಕ ವಿಚಾರಣೆ ಅಗತ್ಯವಿಲ್ಲ ಎಂದು ತಿಳಿದು ಬಂದಿದೆ.
ಇದನ್ನು ಓದಿ:ICC Test Rankings: ಕೊಹ್ಲಿ ಕುಸಿತ, ಬೌಲಿಂಗ್ ರ್ಯಾಂಕಿಂಗ್ನಲ್ಲಿ ಭಾರಿ ಏರಿಕೆ ಕಂಡ ಜಸ್ಪ್ರೀತ್ ಬುಮ್ರಾ