ದುಬೈ : ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಗೆಲುವಿನ ಹೊಸ್ತಿಲಲ್ಲಿದ್ದ ಭಾರತಕ್ಕೆ ಮಳೆರಾಯ ನಿರಾಶೆ ಉಂಟು ಮಾಡಿದ್ದ. ಇದರಿಂದ 2ನೇ ಪಂದ್ಯ ಡ್ರಾಗೊಂಡಿತು. ಭಾರತ ಟೆಸ್ಟ್ ಸರಣಿಯನ್ನು 1-0 ಯಿಂದ ಕೈವಶ ಮಾಡಿಕೊಂಡರೂ, ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ನೂತನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 16 ಅಂಕಗಳಿಸಿದ್ದು, ಶೇ. 66.67 (PCT)ಗಳೊಂದಿಗೆ 2ನೇ ಸ್ಥಾನದಲ್ಲಿದೆ.
ವಿಂಡೀಸ್ ಪ್ರವಾಸ ಕೈಗೊಂಡಿರುವ ಭಾರತ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಎರಡನೇ ಟೆಸ್ಟ್‌ನಲ್ಲಿ ವಿಂಡೀಸ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ವೈಟ್ವಾಶ್ ಮಾಡುವ ಲೆಕ್ಕಚಾರದಲ್ಲಿದ್ಧ ಟೀಂ ಇಂಡಿಯಾಗೆ ವರುಣಾ ಧಯೆ ತೋರಲಿಲ್ಲ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯ ಡ್ರಾ ನಲ್ಲಿ ಅಂತ್ಯ ಕಂಡಿತ್ತು. ಕಳೆದ ವಾರ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ 4 ವಿಕೆಟ್‌ಗಳ ಭರ್ಜರಿ ಜಯಗಳಿಸಿದ ಪಾಕಿಸ್ತಾನ 12 ಅಂಕಗಳಿಂದ ಶೇ. 100 (PCT) ದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿ ಭಾರತದ ರ‍್ಯಾಂಕಿಂಗ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಇದನ್ನೂ ಓದಿ : West Indies vs India, 2nd Test: ಭಾರತ-ವೆಸ್ಟ್ ಇಂಡೀಸ್ 2ನೇ ಟೆಸ್ಟ್ ಡ್ರಾ: ಸರಣಿ ಗೆದ್ದ ಭಾರತ
ನಾಲ್ಕನೇ ಟೆಸ್ಟ್ ಗೆದ್ದು ಆಶಸ್ ಸರಣಿಯಲ್ಲಿ ಸಮಬಲ ಸಾಧಿಸುವ ಭರವಸೆಯಲ್ಲಿದ್ದ ಇಂಗ್ಲೆಂಡ್ಗೆ ಮಳೆ ಅಡ್ಡಿಯಾಗಿ ಪಂದ್ಯ ಡ್ರಾ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಈಗಾಗಲೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆಶಸ್ 4 ಟೆಸ್ಟ್ ಪಂದ್ಯಗಳು ನಡೆದಿದ್ದು, ಇಂಗ್ಲೆಂಡ್ 1 ಪಂದ್ಯ ಗೆದ್ದರೆ, ಆಸ್ಟ್ರೇಲಿಯಾ 2 ಗೆಲುವು ದಾಖಲಿಸಿದೆ. ನಾಲ್ಕನೇ ಟೆಸ್ಟ್ ಡ್ರಾ ಆದ ಕಾರಣ ಆಸ್ಟ್ರೇಲಿಯಾ ಆಶಸ್ ಕಪ್ ಅನ್ನು ತನ್ನಲೆ ಉಳಿಸಿಕೊಂಡಿದೆ. ಇನ್ನು ಅಂತಿಮ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದರೂ ಸಹ ಕೇವಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ್ಯಾಂಕಿಂಗ್ನಲ್ಲಿ ಬದಲಾವಣೆಯಾಗಲಿದ್ದು, ಆಶಸ್ ಗೆಲ್ಲುವ ಕನಸು ನನಸಾಗುವುದಿಲ್ಲ.
ಇದೀಗ ಆಸ್ಟ್ರೇಲಿಯಾ 26 ಅಂಕಗಳೊಂದಿಗೆ 54.17 (PCT) ಮತ್ತು ಇಂಗ್ಲೆಂಡ್ 14 ಅಂಕಗಳಿಂದ 29.17 (PCT) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಡ್ರಾ ಲಾಭ ಪಡೆದಿದೆ. ಏಕೆಂದರೆ 4 ಅಂಕಗಳೊಂದಿಗೆ 16.67 (PTC)ಕ್ಕೆ ಏರಿದ್ದು, ಐದನೇ ಸ್ಥಾನದಲ್ಲಿದೆ. ಪಾಕಿಸ್ತಾನ ವಿರುದ್ದ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಒಂದು ಸೋಲು ಕಂಡಿರುವ ಶ್ರೀಲಂಕಾ 6ನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಪ್ರಾರಂಭವಾದ ಹೊಸ 2023-25 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ್ಯಾಕಿಂಗ್ನಲ್ಲಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗದೆ ಗೆದ್ದ ನ್ಯೂಜಿಲ್ಯಾಂಡ್ ತಂಡ ಇನ್ನೂ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ : ವಿಶ್ವ ಟೆಸ್ಟ್ ಚಾಂಪಿಯನ್ನಲ್ಲಿ ವಾರ್ನರ್ ಹಿಂದಿಕ್ಕಿದ ರೋಹಿತ್: ಶರ್ಮಾ ಹೆಸರಿನಲ್ಲಿ ಮತ್ತೊಂದು ದಾಖಲೆ