ETV Bharat / sports

ಈ ವರ್ಷ ರದ್ದಾಗಿರುವ ಭಾರತ - ಇಂಗ್ಲೆಂಡ್​ ನಡುವಣ 5ನೇ ಟೆಸ್ಟ್​ 2022ಕ್ಕೆ ಮರು ಆಯೋಜನೆ: ವರದಿ - ಇಂಗ್ಲೆಂಡ್​ನಲ್ಲಿ 2022ಕ್ಕೆ ಏಕೈಕ ಟೆಸ್ಟ್ ಆಡಲಿರುವ ಭಾರತ

ಇಎಸ್​ಪಿನ್​ ವರದಿಯ ಪ್ರಕಾರ, ಈ ಪಂದ್ಯ ಸ್ವತಂತ್ರ ಸ್ಪರ್ಧೆಯಾಗಲಿದೇಯೇ ಅಥವಾ ರದ್ದಾದ ಸರಣಿಯ 5ನೇ ಟೆಸ್ಟ್​ ಪಂದ್ಯವಾಗಲಿದೆಯೇ ಎನ್ನುವುದರ ಬಗ್ಗೆ ಪ್ರಸ್ತುತ ಖಚಿತ ಮಾಹಿತಿ ತಿಳಿದು ಬಂದಿಲ್ಲ.

India vs England one off test
ಭಾರತ vs ಇಂಗ್ಲೆಂಡ್​ ಟೆಸ್ಟ್​
author img

By

Published : Sep 25, 2021, 6:16 PM IST

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್​ ನಡುವೆ 2022 ರ ಸಮ್ಮರ್​​ನಲ್ಲಿ ಏಕೈಕ ಟೆಸ್ಟ್​ ಪಂದ್ಯ ಆಯೋಜಿಸಲಾಗುವುದು ಎಂದು ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಖಚಿತಪಡಿಸಿವೆ ಎಂದು ವರದಿಗಳಿಂದ ತಿಳಿದು ಬಂದಿದೆ. ಈ ತಿಂಗಳ ಆರಂಭದಲ್ಲಿ ಕೋವಿಡ್​ 19 ಭೀತಿಯಿಂದ ಎರಡೂ ತಂಡಗಳ ನಡುವಿನ 5ನೇ ಟೆಸ್ಟ್​ ಪಂದ್ಯ ರದ್ದಾದ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಇಎಸ್​ಪಿನ್​ ವರದಿಯ ಪ್ರಕಾರ, ಈ ಪಂದ್ಯ ಸ್ವತಂತ್ರ ಸ್ಪರ್ಧೆಯಾಗಲಿದೇಯೇ ಅಥವಾ ರದ್ದಾದ ಸರಣಿಯ 5ನೇ ಟೆಸ್ಟ್​ ಪಂದ್ಯವಾಗಲಿದೆಯೇ ಎನ್ನುವುದರ ಬಗ್ಗೆ ಪ್ರಸ್ತುತ ಖಚಿತ ಮಾಹಿತಿ ತಿಳಿದು ಬಂದಿಲ್ಲ.

ಟೆಸ್ಟ್​ ರದ್ದಾಗಿದೆ ಎಂದು ಘೋಷಿಸಿದಾಗ, ಹಲವಾರು ಸ್ಟೇಕ್​​ ಹೋಲ್ಡರ್ಸ್ ಮತ್ತು ತಜ್ಞರು ಭಾರತವನ್ನು ಹೊಣೆಗಾರರನ್ನಾಗಿ ಮಾಡಿದ್ದರು ಮತ್ತು ಐಪಿಎಲ್​ಗಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಇದಲ್ಲದೇ ಟೆಸ್ಟ್​ ನಡೆಯದ್ದರಿಂದ ತನಗೆ ದೊಡ್ಡ ಆರ್ಥಿಕ ನಷ್ಟವಾಗಿದೆ ಎಂದು ಇಸಿಬಿ ವರದಿ ಮಾಡಿದೆ. ಆದ್ದರಿಂದ ಈ ಟೆಸ್ಟ್​ ಬಹುಪಾಲು ಇಸಿಬಿಗೆ ಆಗಿರುವ ನಷ್ಟವನ್ನು ಮರುಪಡೆಯಲು ಸಹಾಯವಾಗಬಹುದು ಎನ್ನಲಾಗಿದೆ.

ಇನ್ನು ಈ ಟೆಸ್ಟ್​ ಜೊತೆಗೆ ಹೆಚ್ಚುವರಿಯಾಗಿ 2 ಟಿ -20 ಪಂದ್ಯಗಳನ್ನು ಆಡಿಸಲು ಚರ್ಚೆಗಳು ನಡೆದಿದೆ ಎಂದು ವರದಿ ಹೇಳಿದೆ. ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ಗೆ ಆಗಿರುವ ನಷ್ಟವನ್ನು ತುಂಬಿಕೊಡಲು 2022ರ ವೈಟ್ ಬಾಲ್​ ಸರಣಿಯ ವೇಳೆ ಹೆಚ್ಚುವರಿ 2 ಟಿ-20 ಆಡುವುದಕ್ಕೆ ಬಿಸಿಸಿಐ ಆಫರ್​ ನೀಡಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಸೋತು ಕಂಗಾಲಾಗಿರುವವರ ನಡುವೆ ಸವಾಲ್.. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುವುದೇ ಪಂಜಾಬ್​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.