ETV Bharat / sports

Sarfaraz Khan: ಟೀಂ ಇಂಡಿಯಾಗೆ ಸರ್ಫರಾಜ್​ ಖಾನ್​ ಆಯ್ಕೆ ಆಗದಿರಲು ಫಿಟ್​ನೆಸ್​ ಒಂದೇ ಕಾರಣ ಅಲ್ಲ- ಬಿಸಿಸಿಐ ಅಧಿಕಾರಿ - ವೆಸ್ಟ್​ ಇಂಡೀಸ್​ ಪ್ರವಾಸ

ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಸರ್ಫರಾಜ್​ ಖಾನ್​ ಆಯ್ಕೆ ಆಗದಿರಲು ಫಿಟ್​ನೆಸ್​ ಮತ್ತು ಅವರ ಅಗ್ರೆಸಿವ್ ನಡವಳಿಕೆ ಮಾತ್ರ ಕಾರಣ ಅಲ್ಲ, ಇತರ ಅಂಶಗಳೂ ಇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Sarfaraz Khan
ಸರ್ಫರಾಜ್​ ಖಾನ್
author img

By

Published : Jun 26, 2023, 7:06 PM IST

ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ರಣಜಿಯಲ್ಲಿ ಸತತ ಮೂರು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆಟಗಾರ ಸರ್ಫರಾಜ್ ಖಾನ್​ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್​ ಗವಾಸ್ಕರ್ ಇತ್ತೀಚೆಗೆ​ ಪ್ರಶ್ನಿಸಿದ್ದರು. ಅಲ್ಲದೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯ ಮಾನದಂಡ ಕೇವಲ ಐಪಿಎಲ್​ ಆಟ ಮಾತ್ರವೇ?, ಹಾಗಾದರೆ ರಣಜಿ ಕ್ರಿಕೆಟ್​ ಏಕೆ ಆಡಿಸುತ್ತೀರಿ? ಎಂದು ಅವರು ಗರಂ ಆಗಿದ್ದರು.

ಇದಾದ ನಂತರ, ಆಯ್ಕೆಯ ಮಾನದಂಡದ ಬಗ್ಗೆ ಕ್ರಿಕೆಟ್​ ಜಗತ್ತಿನಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಇದರ ಜೊತೆಗೆ ಸರ್ಫರಾಜ್​ ಖಾನ್​ ಅವರ ಫಿಟ್​ನೆಸ್​ ಮತ್ತು ಅವರ ವರ್ತನೆಯೂ ಚರ್ಚೆಯಾಗಿದೆ. ರಣಜಿ ಪಂದ್ಯವೊಂದರಲ್ಲಿ ಶತಕ ದಾಖಲಿಸಿದ ನಂತರ ಅವರ ಅಗ್ರೆಸ್ಸಿವ್ ಸಂಭ್ರಮಾಚರಣೆ, ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಅವರಿಗೆ ನೀಡಲಾಗಿದ್ದ 16.5 ಅಂಕವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.

ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, ಸರ್ಫರಾಜ್​ ಖಾನ್​ ಅವರನ್ನು ವೆಸ್ಟ್​ ಇಂಡೀಸ್​ ಪ್ರವಾಸದಿಂದ ಹೊರಗಿಡಲು ಕೇವಲ ಫಿಟ್​​ನೆಸ್​ ಮತ್ತು ಅವರ ವರ್ತನೆ ಕಾರಣವಲ್ಲಎಂದು ತಿಳಿಸಿದ್ದಾರೆ. ಇದರೊಂದಿಗೆ ಇತರೆ ಕೆಲವು ಅಂಶಗಳೂ ಅವರನ್ನು ತಂಡದಿಂದ ಹೊರಗಿಡಲು ಕಾರಣವಾಗಿವೆ. ಫಿಟ್​ನೆಸ್​ ಮತ್ತು ನಡವಳಿಕೆಯನ್ನು ಬಿಸಿಸಿಐ ಗಮನಿಸಿದೆ ಎಂದು ತಿಳಿಸಿದರು.

ಮುಂಬೈ ಬ್ಯಾಟರ್ ಕಳೆದ ಮೂರು ರಣಜಿ ಋತುಗಳಲ್ಲಿ 2,566 ರನ್ ಗಳಿಸಿದ್ದಾರೆ. 2019-20 ಋತುವಿನಲ್ಲಿ 928 ರನ್, 2022- 23ರಲ್ಲಿ 982 ಮತ್ತು 2022- 23ರ ಋತುವಿನಲ್ಲಿ 656 ರನ್ ಕಲೆಹಾಕಿದ್ದಾರೆ. 25 ವರ್ಷ ವಯಸ್ಸಿನ ಸರ್ಫರಾಜ್ 37 ಪಂದ್ಯಗಳಿಂದ 79.65 ಸರಾಸರಿಯಲ್ಲಿ ರನ್​ ಕಲೆ ಹಾಕಿದ್ದಾರೆ. ಅಲ್ಲದೇ ಎರಡು ಬಾರಿ U-19 ವಿಶ್ವಕಪ್ ಆಡಿದ್ದಾರೆ. ಆದರೆ, 42 ಪ್ಲಸ್​ ಸರಾಸರಿ ಹೊಂದಿರುವ ರುತುರಾಜ್ ಗಾಯಕ್ವಾಡ್ ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.

ಬಿಸಿಸಿಐ ಮೂಲಗಳು, "ಸತತ ಋತುಗಳಲ್ಲಿ 900 ಪ್ಲಸ್ ರನ್ ಗಳಿಸಿದ ಆಟಗಾರನನ್ನು ಪರಿಗಣಿಸದಿರಲು ಆಯ್ಕೆದಾರರು ಮೂರ್ಖರೇ? ಅವರ ಫಿಟ್ನೆಸ್ ಒಂದು ಕಾರಣ, ಅದು ನಿಖರವಾಗಿ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡಬೇಕು, ಬಹುಶಃ ತೂಕ ಕಳೆದುಕೊಳ್ಳಬೇಕು. ಏಕೆಂದರೆ ಬ್ಯಾಟಿಂಗ್​ಗೆ ಫಿಟ್ನೆಸ್ ಸಹ ಮಾನದಂಡ. ಇತ್ತೀಚೆಗೆ NCAಯಲ್ಲಿ ನಡೆಸಿದ ಯೋಯೋ ಪರೀಕ್ಷೆಯಲ್ಲಿ 16.5 ಅಂಕಗಳನ್ನು ಗಳಿಸಿದ್ದಾರೆ" ಎಂದಿವೆ.

ಸರ್ಫರಾಜ್​ ಅವರ ಆಪ್ತ ವಲಯ, ಫಿಟ್ನೆಸ್ ಮತ್ತು ಶಿಸ್ತಿನ ಸಮಸ್ಯೆಗಳಿಗೆ ಭಾರತ ತಂಡದಿಂದ ಹೊರಗಿಡಲಾಗಿಲ್ಲ ಎಂದು ಹೇಳಿದೆ. ದೆಹಲಿಯಲ್ಲಿ ನಡೆದ ರಣಜಿ ಪಂದ್ಯದ ವೇಳೆ ಸರ್ಫರಾಜ್ ಅವರ ಸಂಭ್ರಮಾಚರಣೆಯು ಅವರ ಸಹ ಆಟಗಾರರು ಮತ್ತು ಕೋಚ್ ಅಮೋಲ್ ಮುಜುಂದಾರ್ ಮುಜುಗರ ಉಂಟುಮಾಡಿತ್ತು ಎನ್ನಲಾಗಿದೆ. ಆದರೆ ಇದನ್ನು ಆಪ್ತ ವಲಯ ಅಲ್ಲಗಳೆದಿದೆ.

"ಕೋಚ್ ಚಂದ್ರಕಾಂತ್ ಪಂಡಿತ್ ಅವರು ಆಟಗಾರನ ವರ್ತನೆಯಿಂದ ಸಂತೋಷವಾಗಿಲ್ಲ. ಆದರೆ ಪಂಡಿತ್ ಯಾವಾಗಲೂ ಸರ್ಫರಾಜ್​ ಬಗ್ಗೆ ಪ್ರೀತಿಯಿಂದ ವರ್ತಿಸುತ್ತಾರೆ. ಚಂದ್ರಕಾಂತ್ ಪಂಡಿತ್ ಅವರು ಖಾನ್​ನನ್ನು ಮಗನಂತೆ ನೋಡಿಕೊಳ್ಳುತ್ತಾರೆ. ಯಾವಾಗಲೂ ಅವರ ಬಗ್ಗೆ ಒಳ್ಳೆಯದನ್ನೇ ಹೇಳುತ್ತಿದ್ದರು ಮತ್ತು ಅವರು 14 ವರ್ಷ ವಯಸ್ಸಿನಿಂದಲೂ ಅವರನ್ನು ತಿಳಿದಿದ್ದಾರೆ. ಸರ್ಫರಾಜ್ ಮೇಲೆ ಎಂದಿಗೂ ಕೋಪಗೊಳ್ಳುವುದಿಲ್ಲ" ಎಂದು ಆಪ್ತರು ಹೇಳಿದ್ದಾರೆ.

ಇದನ್ನೂ ಓದಿ: Sarfaraz Khan: ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಆಯ್ಕೆ ಆಗದ ಮುಂಬೈ ಬ್ಯಾಟರ್​.. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅಸಮಧಾನ ಹೊರಹಾಕಿದ ಖಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.