ETV Bharat / sports

ಮೂರನೇ ಟಿ20 ಪಂದ್ಯ: 161 ರನ್​ ಗುರಿ ನೀಡಿದ ನ್ಯೂಜಿಲ್ಯಾಂಡ್​, ಭಾರತಕ್ಕೆ ಆರಂಭಿಕ ಆಘಾತ - ಡೆವೋನ್​ ಕಾನ್ವೇ ಮತ್ತು ಗ್ಲೆನ್​ ಫಿಲಿಪ್ಸ್

ನ್ಯೂಜಿಲ್ಯಾಂಡ್​ ಮತ್ತು ಭಾರತ ಮಧ್ಯೆ ನಡೆಯುತ್ತಿರುವ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿದೆ. ಕಿವೀಸ್​ ನೀಡಿದ 160 ರನ್​ಗಳ ಗುರಿ ಬೆನ್ನಟ್ಟಿರುವ ಭಾರತ ಆರಂಭದಲ್ಲೇ ಎಡವಿದೆ.

india-bowl-out-nz-for-160-in-3rd-t20i
ಮೂರನೇ ಟಿ20 ಪಂದ್ಯ
author img

By

Published : Nov 22, 2022, 3:07 PM IST

Updated : Nov 22, 2022, 4:23 PM IST

ನೇಪಿಯರ್​(ನ್ಯೂಜಿಲ್ಯಾಂಡ್​​): ಸರಣಿ ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಹೋರಾಡುತ್ತಿರುವ ನ್ಯೂಜಿಲ್ಯಾಂಡ್​ ನೇಪಿಯರ್​ನ ಮೆಕ್ಲೀನ್ ಪಾರ್ಕ್​ ಮೈದಾನದಲ್ಲಿ ನಡೆಯುತ್ತಿರುವ ಮೂರನೇ, ಅಂತಿಮ ಟಿ20 ಪಂದ್ಯದಲ್ಲಿ ಭಾರತಕ್ಕೆ 160 ರನ್​ಗಳ ಸಾಧಾರಣ ಗುರಿ ನೀಡಿದೆ.

ಕಿವೀಸ್​ಗೆ ಕಾನ್ವೇ, ಫಿಲಿಪ್ಸ್​ ನೆರವು: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ನ್ಯೂಜಿಲ್ಯಾಂಡ್​ ಮತ್ತೆ ಆರಂಭಿಕ ಪೆಟ್ಟಿಗೆ ಒಳಗಾಯಿತು. ಯುವ ಆಟಗಾರ ಫಿನ್​ ಅಲ್ಲೆನ್​ 3 ರನ್​ಗೆ ಔಟ್​ ಆದರು. ನಾಯಕ ಕೇನ್​ ವಿಲಿಯಮ್ಸನ್​ ಬದಲಾಗಿ ಕಣಕ್ಕಿಳಿದ ಮಾರ್ಕ್​ ಚಾಪಮನ್​ 12 ರನ್​ಗೆ ಸುಸ್ತಾದರು.

ಈ ವೇಳೆ ಒಂದಾದ ಡೆವೋನ್​ ಕಾನ್ವೇ ಮತ್ತು ಗ್ಲೆನ್​ ಫಿಲಿಪ್ಸ್ 86 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಆಧಾರವಾದರು. ನಿಧಾನವಾಗಿ ಬ್ಯಾಟ್​ ಬೀಸಿದ ಕಾನ್ವೇ 49 ಎಸೆತಗಳಲ್ಲಿ 59 ರನ್ ಮಾಡಿದರು. 5 ಬೌಂಡರಿ, 2 ಸಿಕ್ಸರ್​ ಸಿಡಿಸಿದರು.

ತಂಡದ ಶಕ್ತಿಯಾಗಿ ಬೆಳೆಯುತ್ತಿರುವ ಗ್ಲೆನ್​ ಫಿಲಿಪ್ಸ್​ ಮತ್ತೊಂದು ಸೊಗಸಾದ ಇನಿಂಗ್ಸ್​ ಕಟ್ಟಿದರು. 33 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ ಸಮೇತ 54 ರನ್​ ಮಾಡಿ ಭಾರತೀಯ ದಾಳಿಯನ್ನು ತಡೆದರು. ಇವರಿಬ್ಬರು ಔಟಾದ ಬಳಿಕ ತಂಡ ದಿಢೀರ್​ ಕುಸಿತ ಕಂಡಿತು. ಡ್ಯಾರಿಲ್​ ಮಿಚೆಲ್​ 10 ರನ್​ಗಳಿಸಿದ್ದೇ ಹೆಚ್ಚಾಯಿತು. ಇದರಿಂದ ತಂಡ 19.4 ಓವರ್​ಗಳಲ್ಲಿ 160 ರನ್​ಗೆ ಆಲೌಟ್​ ಆಯಿತು.

ಸಿರಾಜ್​, ಸಿಂಗ್​ ಮಿಂಚಿನ ದಾಳಿ: ಭಾರತ ಇತ್ತೀಚೆಗೆ ಹೆಚ್ಚು ಟೀಕೆಗೆ ಒಳಗಾಗಿರುವುದು ತಂಡದ ಬೌಲಿಂಗ್​ ವಿಭಾಗದ ಕಾರಣಕ್ಕಾಗಿ. ಇದನ್ನು ಮೆಟ್ಟಿನಿಂತಂತೆ ಆಡಿದ ವೇಗಿಗಳು ಮಿಂಚಿನ ದಾಳಿ ಮಾಡಿದರು. ಯುವ ವೇಗಿಗಳಾದ ಮೊಹಮದ್​ ಸಿರಾಜ್​ ಮತ್ತು ಹರ್ಷದೀಪ್​ ಸಿಂಗ್​ 4 ಓವರ್​ಗಳ ಕೋಟಾದಲ್ಲಿ ತಲಾ 4 ವಿಕೆಟ್​ ಕೆಡವಿದರು. ಇದು ಕಿವೀಸ್​ ಅಧಃಪತನಕ್ಕೆ ಕಾರಣವಾಯಿತು.

ಭಾರತಕ್ಕೂ ಆರಂಭಿಕ ಆಘಾತ: ಕಿವೀಸ್​ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿರುವ ಭಾರತ ಕೂಡ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಇಶಾನ್ ಕಿಶನ್​, ರಿಷಬ್​ ಪಂತ್​, ಶ್ರೇಯಸ್​ ಅಯ್ಯರ್​ ಕ್ರಮವಾಗಿ 10, 11, 0 ಗೆ ಔಟಾಗಿದ್ದಾರೆ. ಕಿವೀಸ್​ನ ಟಿಮ್​ ಸೌಥಿ 2 ವಿಕೆಟ್​ ಬೀಳಿಸಿದ್ದಾರೆ.

ಓದಿ: NZ vs IND 3rd T20I: ಭಾರತ-ನ್ಯೂಜಿಲೆಂಡ್ ಅಂತಿಮ ಟಿ20 ಪಂದ್ಯದಲ್ಲಿ ಮಳೆಯಾಟ ಸಾಧ್ಯತೆ

Last Updated : Nov 22, 2022, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.