ರಾಜ್ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ 82 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ರಿಷಭ್ ಪಡೆ 2-2ರ ಸಮಬಲ ಸಾಧಿಸಿದೆ.
ಸರಣಿಯಲ್ಲಿ ಸತತ ನಾಲ್ಕನೇ ಬಾರಿಗೆ ಟಾಸ್ ಗೆದ್ದ ಹರಿಣಗಳು ಫೀಲ್ಡಿಂಗ್ ಆಯ್ದುಕೊಂಡಿದ್ದರು. ಬ್ಯಾಟಿಂಗ್ಗಿಳಿದ ಟೀಂ ಇಂಡಿಯಾ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 81 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ದಿನೇಶ್ ಕಾರ್ತಿಕ್ ಅರ್ಧಶಕ(55) ಹಾಗೂ ಹಾರ್ದಿಕ್ ಪಾಂಡ್ಯ 46 ರನ್ ಬಾರಿಸಿ ನೆರವಾದರು.
-
Clinical win for #TeamIndia in Rajkot! 👏 👏
— BCCI (@BCCI) June 17, 2022 " class="align-text-top noRightClick twitterSection" data="
The @RishabhPant17-led unit beat South Africa by 82 runs to level the series 2-2. 🙌 🙌
Scorecard ▶️ https://t.co/9Mx4DQmACq #INDvSA | @Paytm pic.twitter.com/fyNIlEOJWl
">Clinical win for #TeamIndia in Rajkot! 👏 👏
— BCCI (@BCCI) June 17, 2022
The @RishabhPant17-led unit beat South Africa by 82 runs to level the series 2-2. 🙌 🙌
Scorecard ▶️ https://t.co/9Mx4DQmACq #INDvSA | @Paytm pic.twitter.com/fyNIlEOJWlClinical win for #TeamIndia in Rajkot! 👏 👏
— BCCI (@BCCI) June 17, 2022
The @RishabhPant17-led unit beat South Africa by 82 runs to level the series 2-2. 🙌 🙌
Scorecard ▶️ https://t.co/9Mx4DQmACq #INDvSA | @Paytm pic.twitter.com/fyNIlEOJWl
ಇನ್ನುಳಿದಂತೆ, ಕಳೆದ ಪಂದ್ಯದ ಅರ್ಧಶತಕವೀರರಾದ ರುತುರಾಜ್ ಗಾಯಕ್ವಾಡ್ 4, ಕಿಶನ್ 27, ಶ್ರೇಯಸ್ ಅಯ್ಯರ್ 4 ಹಾಗೂ ನಾಯಕ ರಿಷಭ್ ಪಂತ್ 17 ರನ್ ಗಳಿಸಿ ನಿರಾಸೆ ಮೂಡಿಸಿದರು. ನಿಗದಿತ 20 ಓವರ್ಗಳಲ್ಲಿ ಭಾರತ 169 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.
170 ರನ್ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಭಾರತ ತಂಡದ ಕರಾರುವಾಕ್ ದಾಳಿಯೆದುರು ರನ್ ಗಳಿಸಲು ಪರದಾಡಿತು. 87 ರನ್ಗಳಿಗೆ ಸರ್ವಪತನ ಕಂಡ ಹರಿಣಗಳ ಪರ ರಸ್ಸಿ ವಾನ್ ಡೆರ್ ಡಸ್ಸೆನ್ ಸರ್ವಾಧಿಕ 20 ರನ್, ಡಿ ಕಾಕ್ 14 ಹಾಗೂ ಮಾರ್ಕೊ ಜಾನ್ಸೆನ್ 12 ರನ್ ಬಿಟ್ಟರೆ ಉಳಿದ ಯಾರೂ ಕೂಡ ಎರಡಂಕಿ ಮೊತ್ತ ತಲುಪಲಿಲ್ಲ. 16.5 ಓವರ್ಗಳಲ್ಲಿ 87 ರನ್ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಭಾರತದ ಪರ ಮಾರಕ ದಾಳಿ ನಡೆಸಿದ ವೇಗಿ ಆವೇಶ್ ಖಾನ್ 18ಕ್ಕೆ 4, ಯುಜ್ವೆಂದ್ರ ಚಹಲ್ 21ಕ್ಕೆ 2 ವಿಕೆಟ್ ಕಬಳಿಸಿದರು. ಅಂತಿಮ ಪಂದ್ಯವು ಜೂನ್ 19ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಅಲ್ಲಿ ಗೆದ್ದವರು ಸರಣಿ ತಮ್ಮದಾಗಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಏಕದಿನ ಕ್ರಿಕೆಟ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ವಿಶ್ವದಾಖಲೆ ಬರೆದ ಇಂಗ್ಲೆಂಡ್!