ನವದೆಹಲಿ: ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಏಕದಿನ ಸರಣಿಯ ಶಿಖರ್ ಪಡೆ ವಶಪಡಿಸಿಕೊಂಡಿದೆ. ಮೂರನೇ ಪಂದ್ಯದಲ್ಲಿ ಹರಿಣಗಳು ನೀಡಿದ್ದ 100 ರನ್ಗಳ ಸುಲಭ ಗುರಿಯನ್ನು 7 ವಿಕೇಟ್ ನಿಂದ ಭಾರತ ಪಡೆ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟಿ 20 ಮತ್ತು ಏಕದಿನ ಎರಡೂ ಸರಣಿಗಳನ್ನು ಭಾರತ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
-
Vice-captain @ShreyasIyer15 finishes off in style! 💥
— BCCI (@BCCI) October 11, 2022 " class="align-text-top noRightClick twitterSection" data="
An all-around performance from #TeamIndia to win the final #INDvSA ODI and clinch the series 2⃣-1⃣. 👏👏
Scorecard ▶️ https://t.co/fi5L0fWg0d pic.twitter.com/7PwScwECod
">Vice-captain @ShreyasIyer15 finishes off in style! 💥
— BCCI (@BCCI) October 11, 2022
An all-around performance from #TeamIndia to win the final #INDvSA ODI and clinch the series 2⃣-1⃣. 👏👏
Scorecard ▶️ https://t.co/fi5L0fWg0d pic.twitter.com/7PwScwECodVice-captain @ShreyasIyer15 finishes off in style! 💥
— BCCI (@BCCI) October 11, 2022
An all-around performance from #TeamIndia to win the final #INDvSA ODI and clinch the series 2⃣-1⃣. 👏👏
Scorecard ▶️ https://t.co/fi5L0fWg0d pic.twitter.com/7PwScwECod
ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದು ಕೊಂಡರು. ಬ್ಯಾಟಿಂಗ್ಗೆ ಬಂದ ಮಿಲ್ಲರ್ ಪಡೆಯನ್ನು ಭಾರತೀಯ ಬೌಲರ್ಗಳು 99ಕ್ಕೆ ಕಟ್ಟಿ ಹಾಕಿದರು. 100 ರನ್ಗಳ ಗುರಿ ಬೆನ್ನಟ್ಟಿದ ಭಾರತ 19.1 ಓವರ್ಗೆ 3 ವಿಕೆಟ್ ಕಳೆದು ಕೊಂಡು 105 ರನ್ ಗಳಿಸಿ ಪಂದ್ಯ ಜಯಿಸಿತು.
ಆರಂಭಿಕರಾಗಿ ಬಂದ ಶಿಖರ್ ಧವನ್(8) ರನ್ ಔಟ್ ಆಗಿ ಪವಿಲಿಯನ್ ಸೇರಿದರು. ಇಶನ್ ಕಿಶನ್(10) ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲಲಿಲ್ಲ. ಶುಭಮನ್ ಗಿಲ್ಗೆ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟ ನೀಡಿದರು. ಗೆಲುವಿನ ರನ್ ಜೊತೆಗೆ ಅರ್ಧ ಶತಕ ಗಳಿಸಲು ಬ್ಯಾಟ್ ಬೀಸಿದ ಗಿಲ್ ಲೆಗ್ ಬಿಫೋರ್ ವಿಕೆಟ್ಗೆ ಔಟ್ ಆದರು.
ಮಳೆ ಬಂದು ತಂಡಿ ಇದ್ದ ಪಿಚ್ನಲ್ಲಿ ತಾಳ್ಮೆಯಿಂದ ಆಟವಾಡಿದ ಗಿಲ್ 8 ಬೌಂಡರಿಯಿಂದ 49 ರನ್ ಗಳಿಸಿದರು. ಉಪನಾಯಕ ಶ್ರೆಯಸ್ ಅಯ್ಯರ್ (28) ಸಿಕ್ಸ್ ಮೂಲಕ ಜಯದ ರನ್ ಗಳಿಸಿದರು. ಗಿಲ್ ನಂತರ ಬಂದ ಸಂಜು (2 ) ಅಜೇಯರಾಗಿ ಉಳಿದರು. ಆಫ್ರಿಕಾ ಪರ ಲುಂಗಿ ಎನ್‌ಗಿಡಿ ಮತ್ತು ಜಾರ್ನ್ ಫೋರ್ಚುಯಿನ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್ : ದಕ್ಷಿಣ ಆಫ್ರಿಕಾ 27.1 ಓವರ್ಗೆ 10 ವಿಕೆಟ್ ಕಳೆದು ಕೊಂಡು 99ರನ್. ಹೆನ್ರಿಕ್ ಕ್ಲಾಸೆನ್ 34 ರನ್ , ಕುಲ್ದೀಪ್ 4/18. ಭಾರತ 19.1 ಓವರ್ಗೆ 3 ವಿಕೆಟ್ ಕೆಳೆದು ಕೊಂಡು 105 ರನ್. ಶುಭಮನ್ ಗಿಲ್ 49ರನ್, ಜಾರ್ನ್ ಫೋರ್ಚುಯಿನ್ 1/20.
ಫಲಿತಾಂಶ : ಭಾತರಕ್ಕೆ ಏಳು ವಿಕೆಟ್ಗಳ ಗೆಲುವು.
ಇದನ್ನೂ ಓದಿ : IND vs RSA 3ನೇ ODI : ಕುಲ್ದೀಪ್ ಮಿಂಚು, ಭಾರತದ ಬೌಲಿಂಗ್ಗೆ ನಲುಗಿದ ಹರಿಣಗಳು