ಸೌತಾಂಪ್ಟನ್: ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯುತ್ತಿದ್ದು, ಇದರಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್ ಕಳಪೆ ಸಾಧನೆಯೊಂದಕ್ಕೆ ಗುರಿಯಾಗಿದ್ದಾರೆ. ಕಳೆದ ಮೂರು ವರ್ಷಗಳ ಟೆಸ್ಟ್ನಲ್ಲಿ ಇದೇ ಮೊದಲ ಸಲ ಇಂತಹದ್ದೊಂದು ರೆಕಾರ್ಡ್ ಮೂಡಿ ಬಂದಿದೆ.
ಟೆಸ್ಟ್ ಚಾಂಪಿಯನ್ಶಿಪ್ನ ಎರಡು ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಯಾವುದೇ ಪ್ಲೇಯರ್ಸ್ ಅರ್ಧಶತಕ ಸಿಡಿಸಿಲ್ಲ. ಹೀಗಾಗಿ 2018ರ ಇದೇ ಮೊದಲ ಸಲ ಇಂತಹ ಕಳಪೆ ಸಾಧನೆಗೆ ಟೀಂ ಇಂಡಿಯಾ ಗುರಿಯಾಗಿದೆ. ಈ ಹಿಂದೆ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇಂತಹ ಪ್ರದರ್ಶನಕ್ಕೆ ಟೀಂ ಇಂಡಿಯಾ ಗುರಿಯಾಗಿತ್ತು.
ಇದನ್ನೂ ಓದಿರಿ: WTC: ಗರಿಷ್ಠ ವಿಕೆಟ್ ಪಡೆದ ದಾಖಲೆ ಬರೆದ ಆರ್. ಅಶ್ವಿನ್
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 217ರನ್ಗಳಿಗೆ ಆಲೌಟ್ ಆಗಿತ್ತು. ಈ ವೇಳೆ, ಟಾಸ್ ಸ್ಕೋರ್ರ ಆಗಿ ಕೊಹ್ಲಿ (44) ಹಾಗೂ ರಹಾನೆ(49) ಹೊರಹೊಮ್ಮಿದ್ದರು. ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ 170ರನ್ಗಳಿಗೆ ಆಲೌಟ್ ಆಗಿರುವ ಟೀಂ ಇಂಡಿಯಾ ಪರ 41ರನ್ಗಳಿಕೆ ಮಾಡಿರುವ ರಿಷಭ್ ಪಂತ್ ಟಾಪ್ ಸ್ಕೋರ್ರ ಆಗಿದ್ದಾರೆ. ಇನ್ನು ನ್ಯೂಜಿಲ್ಯಾಂಡ್ ತಂಡದ ಪರ ಕೂಡ ಮೊದಲ ಇನ್ನಿಂಗ್ಸ್ನಲ್ಲೇ ಒಂದೇ ಒಂದು ಅರ್ಧಶತಕ ದಾಖಲಾಗಿದೆ.