ETV Bharat / sports

ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ 5.9 ಕೋಟಿ ಜನರಿಂದ ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ ವೀಕ್ಷಣೆ

Disney plus hotstar: ಭಾನುವಾರ ನಡೆದ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯವನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ 5.9 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ ಎಂದು ವಾಹಿನಿಯ ಭಾರತದ ಮುಖ್ಯಸ್ಥ ಸಜಿತ್ ಶಿವಾನಂದನ್ ತಿಳಿಸಿದ್ದಾರೆ.

India-Aus world cup final match
ಭಾರತ- ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ: ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ 5.9 ಕೋಟಿ ಜನ ಮ್ಯಾಚ್​ ವೀಕ್ಷಣೆ
author img

By PTI

Published : Nov 20, 2023, 8:58 AM IST

ನವದೆಹಲಿ: ಭಾನುವಾರ ನಡೆದ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯವನ್ನು 5.9 ಕೋಟಿ ಜನರು ವೀಕ್ಷಿಸಿದ್ದಾರೆ ಎಂದು ಡಿಸ್ನಿ+ ಹಾಟ್‌ಸ್ಟಾರ್ ಮಾಹಿತಿ ನೀಡಿದೆ. ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಅಂತಿಮ ಪಂದ್ಯದ ಲೈವ್ ಸ್ಟ್ರೀಮ್ ಸಮಯದಲ್ಲಿ ಗರಿಷ್ಠ 5.9 ಕೋಟಿ ಜನ ಆನಂದಿಸಿದ್ದಾರೆ. ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ನಡುವಣ ಪಂದ್ಯವನ್ನು 5.3 ಕೋಟಿ ಮಂದಿ ನೋಡಿದ್ದು, ಕಳೆದ ತಿಂಗಳು ನಡೆದ ಭಾರತ-ಪಾಕಿಸ್ತಾನ ಲೀಗ್ ಪಂದ್ಯದಲ್ಲಿ 3.5 ಕೋಟಿ ಜನರು ನೋಡಿದ್ದರು.

ಭಾನುವಾರದ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಡಿಸ್ನಿ ಸ್ಟಾರ್​ನಲ್ಲಿ ನೇರಪ್ರಸಾರ ಮಾಡಲಾಗಿತ್ತು. ವೀಕ್ಷಕರ ಸಂಖ್ಯೆಯನ್ನು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಒಂದು ವಾರದ ನಂತರ ಬಿಡುಗಡೆ ಮಾಡಲಿದೆ.

ಡಿಸ್ನಿ+ ಹಾಟ್‌ಸ್ಟಾರ್ ಭಾರತದ ವ್ಯವಹಾರಗಳ ಮುಖ್ಯಸ್ಥ ಸಜಿತ್ ಶಿವಾನಂದನ್ ಮಾತನಾಡಿ, "ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ವಿಶ್ವಕಪ್ ಫೈನಲ್ ಮ್ಯಾಚ್​ ಅನ್ನು ಒಂದೇ ಸಮುಯದಲ್ಲಿ 5.9 ಕೋಟಿ ಜನರು ವೀಕ್ಷಿಸಿದ್ದಾರೆ. ಲೈವ್ ಸ್ಪೋರ್ಟ್ಸ್ ಸ್ಟ್ರೀಮಿಂಗ್‌ನಲ್ಲಿ ಮೊದಲ ಬಾರಿಗೆ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬೆಂಬಲ ನಿರಂತರವಾಗಿ ನಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ'' ಎಂದರು.

150 ಚಿತ್ರಮಂದಿರಗಳಲ್ಲಿ ಪಂದ್ಯ​ ವೀಕ್ಷಣೆ: ಡಿಸ್ನಿ ಸ್ಟಾರ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಪಂದ್ಯದ ವಿಶೇಷ ಪ್ರಸಾರ ಮತ್ತು ಮಾಧ್ಯಮ ಹಕ್ಕುಗಳನ್ನು ಹೊಂದಿವೆ. ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯವನ್ನು ಪ್ರಮುಖ ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್​ ಐಎನ್​ಒಎಕ್ಸ್​ನಲ್ಲಿ 60ಕ್ಕೂ ಹೆಚ್ಚು ಸೇರಿದಂತೆ ವಿವಿಧ ನಗರಗಳಲ್ಲಿ 150 ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗಿದೆ. ಪ್ರಮುಖ ಮೆಟ್ರೋಗಳು, ಟೈರ್-1, 2 ಮತ್ತು 3 ನಗರಗಳಲ್ಲಿ 70,000ಕ್ಕೂ ಹೆಚ್ಚು ಕ್ರಿಕೆಟ್ ಅಭಿಮಾನಿಗಳು ಪಂದ್ಯ ನೋಡಿದ್ದಾರೆ ಎಂದು ಪಿವಿಆರ್​ ಐಎನ್​ಒಎಕ್ಸ್ ಲಿಮಿಟೆಡ್​​ನ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಹೇಳಿದ್ದಾರೆ.

ಇದನ್ನೂ ಓದಿ: 20-30 ರನ್ ಹೆಚ್ಚು​ ಗಳಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು, ತಂಡದ ಬಗ್ಗೆ ಹೆಮ್ಮೆ ಇದೆ: ರೋಹಿತ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.