ETV Bharat / sports

ಇಂದು 2ನೇ ಟಿ20 ಪಂದ್ಯ: ಕೊಹ್ಲಿ ವಾಪಸ್​, ಆಫ್ಘನ್​ಗೆ ಮಾಡು ಇಲ್ಲವೇ ಮಡಿ ಪಂದ್ಯ - ಭಾರತ ಮತ್ತು ಆಫ್ಘಾನಿಸ್ತಾನ

ಇಂದೋರ್​ನ ಹೋಳ್ಕರ್​ ಮೈದಾನದಲ್ಲಿ ಆಫ್ಘಾನಿಸ್ತಾನ-ಭಾರತದ ಮಧ್ಯೆ 2ನೇ ಟಿ20 ಪಂದ್ಯ ಇಂದು ಸಂಜೆ ನಡೆಯಲಿದ್ದು, ವಿರಾಟ್ ಕೊಹ್ಲಿ ತಂಡಕ್ಕೆ ವಾಪಸ್​ ಆಗಿದ್ದಾರೆ.

ಭಾರತ ಮತ್ತು ಆಫ್ಘಾನಿಸ್ತಾನ
ಭಾರತ ಮತ್ತು ಆಫ್ಘಾನಿಸ್ತಾನ
author img

By ETV Bharat Karnataka Team

Published : Jan 14, 2024, 2:35 PM IST

ಇಂದೋರ್(ಮಧ್ಯಪ್ರದೇಶ): ಭಾರತ ಮತ್ತು ಆಫ್ಘಾನಿಸ್ತಾನ ನಡುವಿನ ಎರಡನೇ ಟಿ-20 ಪಂದ್ಯ ಮಧ್ಯಪ್ರದೇಶ ಇಂದೋರ್​ನಲ್ಲಿ ಇಂದು ನಡೆಯಲಿದ್ದು, ಹೋಳ್ಕರ್​ ಮೈದಾನ ಸಜ್ಜಾಗಿದೆ. ಮೊದಲ ಪಂದ್ಯವನ್ನು ಗೆದ್ದುಕೊಂಡಿರುವ ಭಾರತ ಈ ಮ್ಯಾಚ್​ ಜಯಿಸಿ ಸರಣಿ ಗೆಲುವಿನ ಸಂಭ್ರಮಾಚರಣೆಯ ತವಕದಲ್ಲಿದೆ. ವಿಶೇಷವೆಂದರೆ, ವೈಯಕ್ತಿಕ ಕಾರಣಕ್ಕಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ ವಾಪಸ್ ಆಗಿದ್ದು, ರೋಚಕತೆ ಹೆಚ್ಚಿಸಿದೆ.

ಮೊದಲ ಪಂದ್ಯದಲ್ಲಿ ಯುವ ಆಟಗಾರರಾದ ಶಿವಂ ದುಬೆಯ ಆಲ್​ರೌಂಡ್​ ಪ್ರದರ್ಶನ, ತಿಲಕ್​ ವರ್ಮಾ, ಜಿತೇಶ್​ ಶರ್ಮಾ, ರಿಂಕು ಸಿಂಗ್​ರ ಬ್ಯಾಟಿಂಗ್​ ಖದರ್​ಗೆ ಆಫ್ಘನ್​ ಬೌಲರ್​ಗಳು ಬೆಂಡಾಗಿದ್ದರು. ಅಕ್ಸರ್​ ಪಟೇಲ್​, ಮುಖೇಶ್​ ಕುಮಾರ್​, ಅರ್ಷದೀಪ್​ ಸಿಂಗ್​ ಬೌಲಿಂಗ್​ ಬೌಲಿಂಗ್​ ಲಯ ಮುಂದುವರಿಸಬೇಕಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆಯಲ್ಲಿದೆ.

ನಿರೀಕ್ಷೆ ಹೆಚ್ಚಿಸಿದ ವಿರಾಟ್​​: ವರ್ಷಗಳಿಂದ ಚುಟುಕು ಮಾದರಿಯ ಕ್ರಿಕೆಟ್​ನಿಂದ ದೂರವಿದ್ದ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಈ ಪಂದ್ಯಕ್ಕೆ ಲಭ್ಯರಿದ್ದಾರೆ. ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಅವರು, ಇಂದು ತಮ್ಮ ಬ್ಯಾಟಿಂಗ್​ ಬಲ ತೋರಿಸಬೇಕಿದೆ. ಭರ್ಜರಿ ಲಯದಲ್ಲಿರುವ ವಿರಾಟ್​ ಟಿ20 ವಿಶ್ವಕಪ್​ಗೆ ತಾವೂ ಸಿದ್ಧ ಎಂಬುದನ್ನು ಸರಣಿಯಲ್ಲಿ ಸಾಬೀತು ಮಾಡಬೇಕಿದೆ. ಇವರ ಜೊತೆಗೆ ನಾಯಕ ರೋಹಿತ್​​ ಶರ್ಮಾ ಕೂಡ ಉತ್ತಮ ಪ್ರದರ್ಶನ ನೀಡಬೇಕಿದೆ.

ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ರೋಹಿತ್​ ನಿರಾಸೆ ಮೂಡಿಸಿದರು. ಇಬ್ಬರು ಹಿರಿಯ ಆಟಗಾರರಿಗೆ ಈ ಸರಣಿ ಮಹತ್ವದ್ದಾಗಿದೆ. ಯುವ ಆಟಗಾರರ ಸವಾಲಿನ ಮಧ್ಯೆ ತಮ್ಮ ತೋಳ್ಬಲ ಪ್ರದರ್ಶಿಸಬೇಕಿದೆ.

ಕಮ್​ಬ್ಯಾಕ್​ ಮಾಡುತ್ತಾ ಆಫ್ಘನ್​ ಪಡೆ?: ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಆಫ್ಘನ್​ ಪಡೆ ಈ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡುವ ಹುಮ್ಮಸ್ಸಿನಲ್ಲಿದೆ. ತಂಡ ಹೆಚ್ಚಾಗಿ ಯುವ ತಾರೆ ರೆಹಮಾನುಲ್ಲಾ ಗುರ್ಬಾಜ್​, ನಾಯಕ ಇಬ್ರಾಹಿಂ ಝದ್ರಾನ್​, ಅಜ್ಮತುಲ್ಲಾ ಓಮರ್​ಝೈ, ಮೊಹಮದ್​ ನಬಿ ಅವರ ಮೇಲೆ ಆಧಾರವಾಗಿದೆ. ಬೌಲಿಂಗ್​ನಲ್ಲಿ ಮುಜೀಬ್​ ಉರ್​ ರೆಹಮಾನ್​ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ತಂಡದ ಸ್ಟಾರ್​ ಆಟಗಾರ ರಶೀದ್ ಖಾನ್ ಅನುಪಸ್ಥಿತಿಯಲ್ಲಿ ಸ್ಪಿನ್ ಬೌಲಿಂಗ್ ಪಡೆಯನ್ನು ಬಲಪಡಿಸಲು ನೂರ್ ಅಹ್ಮದ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.

ಆಫ್ಘಾನಿಸ್ತಾನ: ರೆಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್ (ನಾಯಕ), ರಹಮತ್ ಶಾ, ಅಜ್ಮತುಲ್ಲಾ ಓಮರ್​ಝೈ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ಫಜಲ್ಹಕ್ ಫಾರೂಕಿ, ನವೀನ್ ಉಲ್ ಹಕ್/ ನೂರ್​ ಅಹ್ಮದ್​, ಮುಜೀಬ್ ಉರ್ ರಹಮಾನ್.

ಪಂದ್ಯದ ಸಮಯ: ಸಂಜೆ 7.30ಕ್ಕೆ

ಸ್ಥಳ: ಹೋಳ್ಕರ್​ ಕ್ರಿಕೆಟ್​ ಮೈದಾನ, ಇಂದೋರ್​, ಮಧ್ಯಪ್ರದೇಶ

ಇದನ್ನೂ ಓದಿ: ಆಫ್ಘನ್ ವಿರುದ್ಧ ಶೂನ್ಯಕ್ಕೆ ಔಟಾದರೂ ರೋಹಿತ್ ಶರ್ಮಾ ಹೆಸರಲ್ಲಿ ದಾಖಲಾಯ್ತು ವರ್ಲ್ಡ್​ ರೆಕಾರ್ಡ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.