ನವದೆಹಲಿ: ಹಾಂಗ್ಕಾಂಗ್ನಲ್ಲಿ ನಡೆಯುತ್ತಿರುವ ಮಹಿಳಾ ಉದಯೋನ್ಮುಖ ಏಷ್ಯಾ ಕಪ್ 2023ರಲ್ಲಿ ಭಾರತ ತಂಡ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಸೆಮಿಫೈನಲ್ ಆಡದೇ ಭಾರತ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿರುವುದು ವಿಶೇಷವಾಗಿದೆ. ಇಂದು ಶ್ರೀಲಂಕಾ ಮಹಿಳಾ ಎ ತಂಡದ ವಿರುದ್ಧ ಭಾರತದ ಮಹಿಳಾ ಎ ತಂಡ ಕಣಕ್ಕಿಳಿಯಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಯಿತು. ಇದರಿಂದಾಗಿ ಅಂಕ ಪಟ್ಟಿಯಲ್ಲಿ ಹೆಚ್ಚು ರನ್ರೇಟ್ ಹೊಂದಿರುವ ಭಾರತ ಫೈನಲ್ ನೇರ ಆಯ್ಕೆ ಅವಕಾಶ ಸಿಕ್ಕಿತು.
ಎರಡನೇ ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿದ್ದು, ಬಾಂಗ್ಲಾ ಗೆಲುವು ದಾಖಲಿಸಿದೆ. ಎರಡನೇ ಸೆಮಿಫೈನಲ್ ಕೂಡಾ ಮಳೆಯ ಸಮಸ್ಯೆ ಎದುರಿಸಿದ್ದು ಪಂದ್ಯವನ್ನು 9 ಓವರ್ಗಳಿಗೆ ಇಳಿಸಲಾಗಿತ್ತು. ಇದರಲ್ಲಿ ಬಾಂಗ್ಲಾ 9 ಓವರ್ಗೆ 7 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿದರೆ, ಪಾಕಿಸ್ತಾನ 9 ಓವರ್ನಲ್ಲಿ 4 ಕಳೆದುಕೊಂಡು ಕೇವಲ 53 ರನ್ ಮಾತ್ರ ಗಳಿಸಿತ್ತು. ಬಾಂಗ್ಲಾದೇಶ 6 ರನ್ನ ಗೆಲುವು ದಾಖಲಿಸಿತು. ನಾಳೆ ನಡೆಯಲಿರುವ ಫೈನಲ್ನಲ್ಲಿ ಯಾರಿಗೆ ಗೆಲುವು ಅನ್ನೋದು ಕುತೂಹಲ ಕೆರಳಿಸಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 11 ಗಂಟೆಯಿಂದ ಪಂದ್ಯ ಶುರುವಾಗಲಿದೆ.
-
𝙄𝙣𝙩𝙤 𝙏𝙝𝙚 𝙁𝙞𝙣𝙖𝙡! 🙌 🙌
— BCCI Women (@BCCIWomen) June 20, 2023 " class="align-text-top noRightClick twitterSection" data="
Congratulations to India 'A' as they seal a spot in the #WomensEmergingTeamsAsiaCup summit clash 👏 👏#ACC pic.twitter.com/FFdUo4vzlG
">𝙄𝙣𝙩𝙤 𝙏𝙝𝙚 𝙁𝙞𝙣𝙖𝙡! 🙌 🙌
— BCCI Women (@BCCIWomen) June 20, 2023
Congratulations to India 'A' as they seal a spot in the #WomensEmergingTeamsAsiaCup summit clash 👏 👏#ACC pic.twitter.com/FFdUo4vzlG𝙄𝙣𝙩𝙤 𝙏𝙝𝙚 𝙁𝙞𝙣𝙖𝙡! 🙌 🙌
— BCCI Women (@BCCIWomen) June 20, 2023
Congratulations to India 'A' as they seal a spot in the #WomensEmergingTeamsAsiaCup summit clash 👏 👏#ACC pic.twitter.com/FFdUo4vzlG
ಇದನ್ನೂ ಓದಿ: On This Day: ದ್ರಾವಿಡ್ - ಗಂಗೂಲಿ - ಕೊಹ್ಲಿ ಟೆಸ್ಟ್ ವೃತ್ತಿಜೀವನ ಪ್ರಾರಂಭಿಸಿದ ದಿನ
ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗಿವೆ. ಭಾರತ ತಂಡದ ಪಂದ್ಯಗಳ ಮೇಲೆ ಮಳೆಯ ಅಬ್ಬರ ಮುಂದುವರಿದಿದೆ. ಎಲ್ಲ ತಂಡಗಳು ಲೀಗ್ ಹಂತದಲ್ಲಿ ತಲಾ ಮೂರು ಪಂದ್ಯಗಳನ್ನು ಆಡಬೇಕಿತ್ತು. 3 ಪಂದ್ಯಗಳ ಪೈಕಿ ಭಾರತ ತಂಡ ಹಾಂಕಾಂಗ್ ವಿರುದ್ಧ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದು, ಉಳಿದೆರಡು ಪಂದ್ಯಗಳು ಮಳೆಯಿಂದ ರದ್ದಾಗಿವೆ. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಭಾರತ ತಂಡ ಹಾಂಕಾಂಗ್ ತಂಡವನ್ನು ಸೋಲಿಸಿತ್ತು.
ಟೂರ್ನಿಯ ಲೀಗ್ ಮತ್ತು ಸೆಮಿಫೈನಲ್ ಸೇರಿ 16 ಪಂದ್ಯಗಳ ಪೈಕಿ 10 ಪಂದ್ಯಗಳು ಮಳೆಯಿಂದ ಮೊಟಕುಗೊಂಡಿವೆ. ಹೆಚ್ಚಿನ ತಂಡಗಳು ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿವೆ. ಭಾರತ ತಂಡ ಹಾಂಕಾಂಗ್ ವಿರುದ್ಧ ದೊಡ್ಡ ಗೆಲುವು ಸಾಧಿಸಿತ್ತು. 14 ಓವರ್ ಆಡಿದ್ದ ಹಾಂಕಾಂಗ್ ಕೇವಲ 34 ರನ್ಗೆ ಆಲೌಟಾಗಿತ್ತು. ಇದನ್ನು ಭಾರತ ತಂಡ 1 ವಿಕೆಟ್ ನಷ್ಟದಿಂದ 5.2 ಓವರ್ನಲ್ಲೇ ಆಡಿ ಗೆದ್ದುಕೊಂಡಿತ್ತು. ಇದರಿಂದಾಗಿ ಹೆಚ್ಚಿನ ರನ್ರೇಟ್ ಗಳಿಸಿದ್ದ ಭಾರತ ನೇರ ಫೈನಲ್ ಪ್ರವೇಶ ಪಡೆದುಕೊಂಡಿದೆ.
ಇದನ್ನೂ ಓದಿ: Ashes Series 2023: ಆಸ್ಟ್ರೇಲಿಯಾಕ್ಕೆ 174 ರನ್, ಇಂಗ್ಲೆಂಡ್ಗೆ 7 ವಿಕೆಟ್ ಅಗತ್ಯ.. ಯಾರು ಮೊದಲ ಟೆಸ್ಟ್ ವಿನ್ನರ್?