ಹರಾರೆ: ಜಿಂಬಾಬ್ವೆ ವಿರುದ್ಧ ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಆದರೆ, ಪಂದ್ಯಾರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಕೆ. ಎಲ್.ರಾಹುಲ್ ನಡೆದುಕೊಂಡ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ರಿಕೆಟ್ ಪಂದ್ಯ ಶುರುವಾಗುವುದಕ್ಕೂ ಮುಂಚಿತವಾಗಿ ಉಭಯ ದೇಶಗಳ ರಾಷ್ಟ್ರಗೀತೆ ಹಾಡುವುದು ಸಂಪ್ರದಾಯ. ನಿನ್ನೆಯೂ ಭಾರತ-ಜಿಂಬಾಬ್ವೆ ನಡುವಿನ ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲಾಯಿತು. ಈ ವೇಳೆ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದ ರಾಹುಲ್, ಇನ್ನೇನು ರಾಷ್ಟ್ರಗೀತೆ ಆರಂಭವಾಗಲಿದೆ ಎಂಬುದು ಗೊತ್ತಾಗುತ್ತಿದ್ದಂತೆ ತೆಗೆದು ಎಸೆದಿದ್ದಾರೆ. ಈ ಮೂಲಕ ಗೌರವ ನೀಡಿದ್ದಾರೆ.
-
Proud of you, Captain KL Rahul! ❤️pic.twitter.com/5Xuvq5mag8
— Kunal Yadav (@kunaalyaadav) August 18, 2022 " class="align-text-top noRightClick twitterSection" data="
">Proud of you, Captain KL Rahul! ❤️pic.twitter.com/5Xuvq5mag8
— Kunal Yadav (@kunaalyaadav) August 18, 2022Proud of you, Captain KL Rahul! ❤️pic.twitter.com/5Xuvq5mag8
— Kunal Yadav (@kunaalyaadav) August 18, 2022
ಕೆ ಎಲ್ ರಾಹುಲ್ ನಡೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಹೊಗಳಿದ್ದು, ನಿಮ್ಮಿಂದ ನಮಗೆ ಮತ್ತಷ್ಟು ಹೆಮ್ಮೆಯಾಗುತ್ತಿದೆ ಎಂದು ಟ್ವೀಟ್‌ಗಳನ್ನು ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡ ಬಳಿಕ ಗಾಯದಿಂದಾಗಿ ಹೊರಗುಳಿದಿದ್ದ ಕೆ ಎಲ್ ರಾಹುಲ್ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ವೇಳೆಗೆ ತಂಡ ಸೇರಿಕೊಳ್ಳಬೇಕಾಗಿತ್ತು. ಆದರೆ, ಕೋವಿಡ್ನಿಂದಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಜಿಂಬಾಬ್ವೆ ವಿರುದ್ಧ ಘೋಷಣೆಯಾಗಿದ್ದ ಟೀಂ ಇಂಡಿಯಾದಲ್ಲಿ ಅವರಿಗೆ ಅವಕಾಶ ನೀಡಿರಲಿಲ್ಲ. ಆದರೆ, ಸಂಪೂರ್ಣವಾಗಿ ಗುಣಮುಖರಾಗಿರುವ ಕಾರಣ ಸ್ಥಾನ ಪಡೆದುಕೊಂಡಿದ್ದು, ತಂಡದ ನಾಯಕತ್ವ ಹೊಣೆ ವಹಿಸಿಕೊಂಡಿದ್ದಾರೆ.
ಇಶಾನ್ ಕಿಶನ್ ಮೇಲೆ ಕೀಟ ದಾಳಿ: ರಾಷ್ಟ್ರಗೀತೆ ನಡೆಯುತ್ತಿದ್ದಾಗ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಹತ್ತಿರ ಕೀಟವೊಂದು ಸುಳಿದಾಡಿ ಕಣ್ಣಿಗೆ ತಾಗಿದೆ. ಇದರಿಂದ ಅರೆಕ್ಷಣ ಗಲಿಬಿಲಿಗೊಂಡು ಪಕ್ಕದಲ್ಲಿ ನಿಂತುಕೊಂಡಿದ್ದ ಕುಲ್ದೀಪ್ ಯಾದವ್ ಅವರ ಕಡೆ ನೋಡಿ, ತದನಂತರ ಸುಮ್ಮನೆ ನಿಂತುಕೊಂಡರು.
- — Bleh (@rishabh2209420) August 18, 2022 " class="align-text-top noRightClick twitterSection" data="
— Bleh (@rishabh2209420) August 18, 2022
">— Bleh (@rishabh2209420) August 18, 2022
IND vs ZIM ODI: ಧವನ್- ಗಿಲ್ ಜೊತೆಯಾಟ.. ಜಿಂಬಾಬ್ವೆ ವಿರುದ್ಧ 10 ವಿಕೆಟ್ ಜಯ
ಹರಾರೆ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 189ರನ್ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 30.5 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 192ರನ್ ಗಳಿಸುವ ಮೂಲಕ ಜಯ ದಾಖಲಿಸಿದೆ. ಭಾರತದ ಪರ ಶಿಖರ್ ಧವನ್ 113 ಎಸೆತದಲ್ಲಿ 9 ಬೌಂಡರಿಗಳ ನೆರವಿನಿಂದ 81 ರನ್ ಮತ್ತು ಶುಭಮನ್ ಗಿಲ್ 72 ಎಸೆತದಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 82 ರನ್ ಸಿಡಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ಮಾಡಿದರು. ಜಿಂಬಾಬ್ವೆ ತಂಡದ ಯಾವುದೇ ಬೌಲರ್ ವಿಕೆಟ್ ಪಡೆದುಕೊಳ್ಳಲಿಲ್ಲ.