ಹೈದರಾಬಾದ್: ಕೆಲವು ಆಟಗಾರರು ಕೊರೊನಾದಿಂದ ಬಳಲುತ್ತಿರುವುದರಿಂದ ಎಂದಿನಂತೆ ನಡೆಯಬೇಕಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಏಕದಿನ ಸರಣಿ ಆರಂಭವಾಗುವುದು ಅನುಮಾನ ಎನ್ನಲಾಗುತ್ತಿದೆ. ಉಭಯ ತಂಡಗಳ ಸರಣಿ ಮುಂದೂಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಈ ಮೂಲಕ ತವರಿನಲ್ಲಿ ಮೊದಲ ಸರಣಿ ಆರಂಭಿಸಲಿರುವ ಟೀಂ ಇಂಡಿಯಾ ಆರಂಭದಲ್ಲೇ ಹಿನ್ನಡೆ ಅನುಭವಿಸಿದೆ. ಉಭಯ ತಂಡಗಳ ನಡುವಿನ ಏಕದಿನ ಸರಣಿಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಇವೆ.
ಇದನ್ನೂ ಓದಿ: U19 World cup: ಆಸ್ಟ್ರೇಲಿಯಾ ಬಗ್ಗುಬಡಿದ ಟೀಂ ಇಂಡಿಯಾ ಫೈನಲ್ಗೆ ಎಂಟ್ರಿ
ಕೆಲ ಆಟಗಾರರಲ್ಲಿ ಕಾಣಿಸಿಕೊಂಡ ಕೊರೊನಾ ಕಾರಣದಿಂದ ಫೆಬ್ರವರಿ 6 ರಂದು ನಡೆಯಲಿರುವ ಮೊದಲ ಪಂದ್ಯವನ್ನು ಎರಡರಿಂದ ಮೂರು ದಿನಗಳವರೆಗೆ ಮುಂದೂಡುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ಮಂಡಳಿಯ ವಕ್ತಾರರು ತಿಳಿಸಿದ್ದಾರೆ. ಇಂದು ನಡೆಯಬೇಕಿದ್ದ ಅಭ್ಯಾಸ ಪಂದ್ಯವೂ ರದ್ದು ಮಾಡಲಾಗಿದೆ.
ಪ್ರಮುಖ ಆಟಗಾರರಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್ ಮತ್ತು ಸ್ಟ್ಯಾಂಡ್‌ಬೈ ವೇಗದ ಬೌಲರ್ ನವದೀಪ್ ಸೈನಿ ಸೇರಿದಂತೆ ಇತರರಲ್ಲಿ ಆರ್ಟಿ-ಪಿಸಿಆರ್ ಟೆಸ್ಟ್ನಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಮುಂದಕ್ಕೆ ಹೋಗುವ ಲಕ್ಷಣಗಳು ಕಾಣಿಸುತ್ತದೆ. ಇದರ ನಡುವೆ ಸರಣಿ ಆಡುವ ಭಾರತ ತಂಡಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಸೇರ್ಪಡೆಯಾಗಿದ್ದು ಖುಷಿ ನೀಡಿದೆ.
-
After a long couple days of travel from Barbados, the #MenInMaroon have arrived in India! ✌🏿 #INDvWI 🏏🌴 pic.twitter.com/ogvbrtQqTy
— Windies Cricket (@windiescricket) February 2, 2022 " class="align-text-top noRightClick twitterSection" data="
">After a long couple days of travel from Barbados, the #MenInMaroon have arrived in India! ✌🏿 #INDvWI 🏏🌴 pic.twitter.com/ogvbrtQqTy
— Windies Cricket (@windiescricket) February 2, 2022After a long couple days of travel from Barbados, the #MenInMaroon have arrived in India! ✌🏿 #INDvWI 🏏🌴 pic.twitter.com/ogvbrtQqTy
— Windies Cricket (@windiescricket) February 2, 2022
ಪ್ರಸ್ತುತ ನಡೆಯಬೇಕಿದ್ದ ಸರಣಿಯು ನಿಗದಿತವಾಗಿಯೇ ನಡೆಯುತ್ತಿದೆ. ತಂಡದಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ಏನಾದರೂ ಕಂಡು ಬಂದರೆ ಅದನ್ನು ಎರಡು ಮೂರು ದಿನಗಳವರೆಗೆ ಮುಂದೂಡಬಹುದು ಎಂದು ವಕ್ತಾರರು ತಿಳಿಸಿದ್ದಾರೆ. ಆದರೆ, ಮುಂದೂಡುವ ಬಗ್ಗೆ ಈ ವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಬಿಸಿಸಿಐ ವೈದ್ಯರ ಸಲಹೇ ಮೇರೆಗೆ ಸೋಂಕಿತ ಆಟಗಾರರು ಸೇರಿದಂತೆ ಇತರ ಸಿಬ್ಬಂದಿಯನ್ನು ಹೋಟೆಲ್ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಇದೇ ಮೊಲದ ಬಾರಿಗೆ ಪೂರ್ಣ ಪ್ರಮಾಣದ ನಾಯಕರಾಗಿ ತಂಡವನ್ನು ಮುನ್ನೆಡಸಲಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟಿಗರು ಈಗಾಗಲೇ ಭಾರತಕ್ಕೆ ಬಂದಿಳಿದಿದ್ದು ಅಹಮದಾಬಾದ್‌ನಲ್ಲಿ 3 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಭಾರತ ತಂಡದ ಆಟಗಾರರು ಸಹ ಅಹಮದಾಬಾದ್ ತಲುಪಿದ್ದು, ಈಗಾಗಲೇ ಕ್ವಾರಂಟೈನ್‌ನಲ್ಲಿದೆ. ಉಭಯ ತಂಡಗಳ ನಡುವಿನ ಮೂರು ಏಕದಿನ ಪಂದ್ಯಗಳು ಫೆಬ್ರವರಿ 6, 9 ಮತ್ತು 11 ರಂದು ನಡೆಯಲಿವೆ. ಬಳಿಕ 16, 18 ಮತ್ತು 20 ರಂದು ಟಿ20 ಸರಣಿಗಳು ನಡೆಯಲಿವೆ. ನಿಗದಿಯಂತೆ ಸರಣಿ ಆರಂಭಗೊಂಡರೆ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಓಪನಿಂಗ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.