ETV Bharat / sports

ಸರಣಿ ಗೆಲ್ಲುವುದು ಮುಖ್ಯ.. ಶ್ರೀಲಂಕಾ ಪ್ರವಾಸದಲ್ಲಿ ಎಲ್ಲಾ ಯುವಕರಿಗೆ ಅವಕಾಶ ಕಷ್ಟ : ರಾಹುಲ್ ದ್ರಾವಿಡ್ - ಭಾರತ ತಂಡದಿಂದ ಶ್ರೀಲಂಕಾ ಪ್ರವಾಸ

ಈ ಸರಣಿ ಭಾರತ ಎ ಸರಣಿಗಿಂತ ವಿಭಿನ್ನ. ಅಭಿವೃದ್ಧಿ ಹಂತದಲ್ಲಿದ್ದಾಗ ಗುರಿ ಇದಕ್ಕಿಂತ ವಿಭಿನ್ನವಾಗಿರುತ್ತದೆ. ನಾವು ಈಗ 20 ಆಟಗಾರರ ಒಳ್ಳೆಯ ತಂಡ ಹೊಂದಿದ್ದೇವೆ. ಈ ಚಿಕ್ಕ ಸರಣಿಯಲ್ಲಿ ಪ್ರತಿಯೊಬ್ಬರಿಗೂ ಅವಕಾಶ ನಿರೀಕ್ಷಿಸುವುದು ಅವಾಸ್ತವಿಕ. ನಾವು ಒಳ್ಳೆಯ ಸಂಯೋಜನೆಯೊಂದಿಗೆ ಸರಣಿಯನ್ನು ಗೆಲ್ಲಲು ಆಲೋಚಿಸುತ್ತೇವೆ..

ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
author img

By

Published : Jun 27, 2021, 8:26 PM IST

ಮುಂಬೈ : ಮುಂಬುರುವ ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ತಂಡದಲ್ಲಿರುವ ಎಲ್ಲಾ 20 ಆಟಗಾರರಿಗೂ ಅವಕಾಶ ಸಿಗುತ್ತದೆ ಎಂದು ಹೇಳುವುದು ಅವಾಸ್ತವಿಕ ಎಂದು ಮುಖ್ಯ ಕೋಚ್‌ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧ ತಲಾ 3 ಪಂದ್ಯಗಳ ಏಕದಿನ ಸರಣಿ ಮತ್ತು ಟಿ20 ಸರಣಿ ನಡೆಯಲಿದೆ. ಆದರೆ, ಈ ಪ್ರವಾಸದಲ್ಲಿ ಕೆಲವು ಯುವ ಆಟಗಾರರಿಗೂ ಅವಕಾಶ ಕೊಡುವುದಕ್ಕಿಂತ ಸರಣಿ ಗೆಲ್ಲಬೇಕು ಎನ್ನುವುದೇ ಮುಖ್ಯ ಎಂದು ದ್ರಾವಿಡ್ ಹೇಳಿದ್ದಾರೆ.

ಶಿಖರ್ ಧವನ್ ನೇತೃತ್ವದಲ್ಲಿ ಭಾರತ ತಂಡ ಈ ಪ್ರವಾಸ ಕೈಗೊಳ್ಳಲಿದೆ. ಜುಲೈನಲ್ಲಿ ಈ ಸರಣಿ ನಡೆಯಲಿದೆ. ಕೆಲವು ಹೊಸ ಮುಖಗಳಿರುವುದರಿಂದ ಈ ಸರಣಿ ರೋಮಾಂಚನಕಾರಿಯಾಗಿದೆ. ಅದರಲ್ಲೂ ರಾಹುಲ್ ದ್ರಾವಿಡ್ ಮತ್ತೆ ಭಾರತ ತಂಡ ಸೇರಿಕೊಳ್ಳುತ್ತಿರುವುದು ಈ ಸರಣಿ ಮೇಲೆ ಉತ್ಸಾಹ ಹೆಚ್ಚಿದೆ. ಅದರಲ್ಲೂ ಟಿ20 ವಿಶ್ವಕಪ್​ ದೃಷ್ಟಿಯಿಂದ ಪರಿಣಾಮಕಾರಿಯಾಗಿದೆ.

ಈ ಸರಣಿ ಭಾರತ ಎ ಸರಣಿಗಿಂತ ವಿಭಿನ್ನ. ಅಭಿವೃದ್ಧಿ ಹಂತದಲ್ಲಿದ್ದಾಗ ಗುರಿ ಇದಕ್ಕಿಂತ ವಿಭಿನ್ನವಾಗಿರುತ್ತದೆ. ನಾವು ಈಗ 20 ಆಟಗಾರರ ಒಳ್ಳೆಯ ತಂಡವನ್ನು ಹೊಂದಿದ್ದೇವೆ. ಈ ಚಿಕ್ಕ ಸರಣಿಯಲ್ಲಿ ಪ್ರತಿಯೊಬ್ಬರಿಗೂ ಅವಕಾಶ ನಿರೀಕ್ಷಿಸುವುದು ಅವಾಸ್ತವಿಕ. ನಾವು ಒಳ್ಳೆಯ ಸಂಯೋಜನೆಯೊಂದಿಗೆ ಸರಣಿಯನ್ನು ಗೆಲ್ಲಲು ಆಲೋಚಿಸುತ್ತೇವೆ ಎಂದು ರಾಹುಲ್ ದ್ರಾವಿಡ್​ ಪ್ರವಾಸಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಯುವಕರಿಗೆ ಅದ್ಭುತ ಅವಕಾಶ : ತಂಡದಲ್ಲಿ ಸಾಕಷ್ಟು ಯುವ ಆಟಗಾರರಿದ್ದಾರೆ. ಅವರು ಇಲ್ಲಿ ಆಡದಿದ್ದರೂ ಸಹ ಶಿಖರ್​ ಧವನ್ ಅವರಂತಹ ಆಟಗಾರರಿಂದ ಕಲಿಯಲು ಉತ್ತಮ ಅವಕಾಶವಿದೆ. ಇದು(ಭಾರತ), ಅಂಡರ್​ 19 ಮತ್ತು ಎ ತಂಡಕ್ಕಿಂತ ವಿಭಿನ್ನವಾದ ಜಗತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ಮುಖ್ಯ ಕೋಚ್​ ಆಗಿರುವುದು ನನಗೆ ಕಲಿಯಲು ಮತ್ತು ಸುಧಾರಿಸಿಕೊಳ್ಳಲು ಒಳ್ಳೆಯ ಅವಕಾಶ : ದ್ರಾವಿಡ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.