ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.ಆರ್. ಪ್ರೇಮದಾಸ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ 23 ಓವರ್ಗಳಲ್ಲಿ 3ವಿಕೆಟ್ನಷ್ಟಕ್ಕೆ 147ರನ್ಗಳಿಕೆ ಮಾಡಿದ್ದು, ಈ ವೇಳೆ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಪಂದ್ಯ ಪುನರ್ ಆರಂಭಗೊಂಡಿದ್ದು, 47 ಓವರ್ಗಳಿಗೆ ಕಡಿತಗೊಳಿಸಲಾಗಿದೆ.
ಟೀಂ ಇಂಡಿಯಾ ಪರ ಕ್ಯಾಪ್ಟನ್ ಶಿಖರ್ ಧವನ್(13ರನ್), ಪೃಥ್ವಿ ಶಾ(49ರನ್),ಸಂಜು ಸ್ಯಾಮ್ಸನ್(46ರನ್) 11ರನ್ಗಳಿಕೆ ಮಾಡಿರುವ ಮನೀಷ್ ಪಾಂಡೆ ವಿಕೆಟ್ ಒಪ್ಪಿಸಿದ್ದಾರೆ. 22ರನ್ಗಳಿಕೆ ಮಾಡಿರುವ ಸೂರ್ಯಕುಮಾರ್ ಯಾದವ್ ಹಾಗೂ ಮನೀಷ್ ಪಾಂಡೆ ಮೈದಾನದಲ್ಲಿದ್ದಾರೆ.
-
Hello & Good Afternoon from Colombo ☀️ 👍#TeamIndia have elected to bat against Sri Lanka in the third & final ODI of the series. #SLvIND
— BCCI (@BCCI) July 23, 2021 " class="align-text-top noRightClick twitterSection" data="
Follow the match 👉 https://t.co/7LRDbx0DLM
Here is India's Playing XI 👇 pic.twitter.com/pioejNJG5k
">Hello & Good Afternoon from Colombo ☀️ 👍#TeamIndia have elected to bat against Sri Lanka in the third & final ODI of the series. #SLvIND
— BCCI (@BCCI) July 23, 2021
Follow the match 👉 https://t.co/7LRDbx0DLM
Here is India's Playing XI 👇 pic.twitter.com/pioejNJG5kHello & Good Afternoon from Colombo ☀️ 👍#TeamIndia have elected to bat against Sri Lanka in the third & final ODI of the series. #SLvIND
— BCCI (@BCCI) July 23, 2021
Follow the match 👉 https://t.co/7LRDbx0DLM
Here is India's Playing XI 👇 pic.twitter.com/pioejNJG5k
ಈಗಾಗಲೇ ಮುಕ್ತಾಯಗೊಂಡಿರುವ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
ಪ್ರಮುಖವಾಗಿ ಇಂದಿನ ಪಂದ್ಯದಲ್ಲಿ ಕಿಶನ್ ಸ್ಥಾನಕ್ಕೆ ಸಂಜು ಸ್ಯಾಮನ್ಸ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಬ್ಯಾಟ್ಸ್‌ಮನ್ ನಿತೀಶ್ ರಾಣಾ, ಸ್ಪಿನ್ನರ್ ಚೇತನ್ ಸಕಾರಿಯಾ, ಕನ್ನಡಿಗ ಆಲ್ರೌಂಡರ್ ಕೆ. ಗೌತಮ್ ಹಾಗೂ ರಾಹುಲ್ ಚಹರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
ಆಡುವ 11ರ ಬಳಗ
ಟೀಂ ಇಂಡಿಯಾ: ಪೃಥ್ವಿ ಶಾ, ಶಿಖರ್ ಧವನ್(ಕ್ಯಾಪ್ಟನ್), ಸಂಜು ಸ್ಯಾಮನ್ಸ್(ವಿ.ಕೀ), ಮನೀಷ್ ಪಾಂಡೆ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯಾ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ ಹಾಗು ಚೇತನ್ ಸಕಾರಿಯಾ
ಇಂದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಇಶನ್ ಕಿಶಾನ್, ಕೃನಾಲ್ ಪಾಂಡ್ಯ, ಉಪನಾಯಕ ಭುನವೇಶ್ವರ್ ಕುಮಾರ್, 2ನೇ ಏಕದಿನ ಪಂದ್ಯದ ಹೀರೋ ದೀಪಕ್ ಚಹಾರ್, ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ಗೆ ಅವಕಾಶ ನೀಡಿಲ್ಲ.
ಶ್ರೀಲಂಕಾ: ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿ.ಕೀ), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶನಕಾ (ಕ್ಯಾ), ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನೆ, ಅಕಿಲಾ ದಾನಂಜಯ, ದುಷ್ಮಂತ ಚಮೀರಾ ಮತ್ತು ಪ್ರವೀಣ್ ಜಯವಿಕ್ರಮಾ