ಸೆಂಚುರಿಯನ್: ಶಮಿ ಸೇರಿದಂತೆ ವೇಗಿಗಳ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 197ಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದು, 130 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಮೊದಲ ದಿನ ಭಾರತ ತಂಡ 272 ರನ್ಗಳಿಸಿದರೆ, 2ನೇ ದಿನದಾಟ ಮಳೆಗೆ ಸಂಪೂರ್ಣ ಆಹುತಿಯಾದರೆ 3ನೇ ದಿನ ಭಾರತ ಹಿಂದಿನ ಮೊತ್ತಕ್ಕೆ ಕೇವಲ 55 ರನ್ ಸೇರಿಸಿ ಆಲೌಟ್ ಆಗಿತ್ತು. ಕೆ ಎಲ್ ರಾಹುಲ್ 123, ಮಯಾಂಕ್ ಅಗರ್ವಾಲ್ 60 ಮತ್ತು ರಹಾಣೆ 48 ರನ್ಗಳಿಸಿದ್ದರು.
ದಕ್ಷಿಣ ಆಫ್ರಿಕಾ ಪರ ಲುಂಗಿ ಎಂಗಿಡಿ 71ಕ್ಕೆ 6 ಮತ್ತು ಕಗಿಸೊ ರಬಾಡ 72ಕ್ಕೆ 3 ವಿಕೆಟ್ ಹಾಗೂ ಮ್ಯಾಕ್ರೋ ಜಾನ್ಸನ್ 69ಕ್ಕೆ 1 ವಿಕೆಟ್ ಪಡೆದಿದ್ದರು.
-
Innings Break!
— BCCI (@BCCI) December 28, 2021 " class="align-text-top noRightClick twitterSection" data="
A 5-wkt haul for @MdShami11 as South Africa are all out for 197 runs.#TeamIndia have a lead of 130.
Scorecard - https://t.co/eoM8MqSQgO #SAvIND pic.twitter.com/1a3JnHphIM
">Innings Break!
— BCCI (@BCCI) December 28, 2021
A 5-wkt haul for @MdShami11 as South Africa are all out for 197 runs.#TeamIndia have a lead of 130.
Scorecard - https://t.co/eoM8MqSQgO #SAvIND pic.twitter.com/1a3JnHphIMInnings Break!
— BCCI (@BCCI) December 28, 2021
A 5-wkt haul for @MdShami11 as South Africa are all out for 197 runs.#TeamIndia have a lead of 130.
Scorecard - https://t.co/eoM8MqSQgO #SAvIND pic.twitter.com/1a3JnHphIM
ಇತ್ತ ಭಾರತದ 327 ರನ್ಗಳನ್ನು ಹಿಂಬಾಲಿಸಿದ ಅತಿಥೇಯ ತಂಡ ಆರಂಭದಿಂದಲೇ ಭಾರತದ ವೇಗಿಗಳ ದಾಳಿಗೆ ತತ್ತರಿಸಿ ಹೋಯಿತು. ಮೊದಲ ಓವರ್ನಲ್ಲೇ ಭಾರತದ ನಂಬರ್ 1 ವೇಗಿ ಜಸ್ಪ್ರೀತ್ ಬುಮ್ರಾ ಆರಂಭಿಕ ಡೀನ್ ಎಲ್ಗರ್(1) ವಿಕೆಟ್ ಉಡಾಯಿಸಿದರು.
ನಂತರ ಶಮಿ 5 ರನ್ಗಳ ಅಂತರದಲ್ಲಿ ಕೀಗನ್ ಪೀಟರ್ಸನ್(13) ಮತ್ತು ಐಡೆನ್ ಮಾರ್ಕ್ರಮ್(15) ವಿಕೆಟ್ ಪಡೆದು ಹರಿಣಗಳಿಗೆ ಭಾರಿ ಆಘಾತವನ್ನುಂಟು ಮಾಡಿದರು. ಮೊಹಮ್ಮದ್ ಸಿರಾಜ್ ತಮ್ಮ ಮೊದಲ ಸ್ಪೆಲ್ನಲ್ಲೇ ಹರಿಣಗಳ ಆಪತ್ಪಾಂಧವನಾಗಿದ್ದ ರಾಸಿ ವ್ಯಾನ್ ಡರ್ ಡಾಸೆನ್(3)ವಿಕೆಟ್ ಪಡೆದರು.
32 ರನ್ಗಳಿಸುವಷ್ಟರಲ್ಲಿ ತಂಡದ ಪ್ರಮುಖ 4 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ 100ರೊಳಗೆ ಕುಸಿಯುವ ಭೀತಿಗೆ ಎದುರಾಗಿತ್ತು. ಆದರೆ 5ನೇ ವಿಕೆಟ್ಗೆ ಟೆಂಬ ಬವೂಮ(52) ಮತ್ತು ಕ್ವಿಂಟನ್ ಡಿಕಾಕ್(34) 72 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು.
ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೋಡಿಯನ್ನು ಶಾರ್ದೂಲ್ ಠಾಕೂರ್ ಬ್ರೇಕ್ ಮಾಡಿದರು. 63 ಎಸೆತಗಳಲ್ಲಿ 34 ರನ್ಗಳಿಸಿದ್ದ ಡಿಕಾಕ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಡಿಕಾಕ್ ನಂತರ ಬಂದ ಬ್ಯಾಟರ್ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.
103 ಎಸೆಗಳಲ್ಲಿ 10 ಬೌಂಡರಿ ಸಹಿತ 52 ರನ್ಗಳಿಸಿದ ಬವೂಮ ತಂಡದ ಗರಿಷ್ಠ ಸ್ಕೋರರ್ ಆದರು. ವಿಯಾನ್ ಮಲ್ಡರ್(12), ಜಾನ್ಸನ್(19), ರಬಾಡ(25) ಮತ್ತು ಮಹಾರಾಜ್(12) ರನ್ಗಳಿಸಿ ಔಟಾದರು. ಒಟ್ಟಾರೆ ದಕ್ಷಿಣ ಆಫ್ರಿಕಾ 62.3 ಓವರ್ಗಳಲ್ಲಿ 197ಕ್ಕೆ ಆಲೌಟ್ ಆಗಿ 130 ರನ್ಗಳ ಹಿನ್ನಡೆಗೊಳಗಾಯಿತು.
ಭಾರತದ ಪರ ಮೊಹಮ್ಮದ್ ಶಮಿ 44ಕ್ಕೆ 5, ಬುಮ್ರಾ 16ಕ್ಕೆ 2, ಠಾಕೂರ್ 51ಕ್ಕೆ 2 ಮತ್ತು ಸಿರಾಜ್ 45ಕ್ಕೆ 1 ವಿಕೆಟ್ ಪಡೆದರು.
ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 100 ವಿಕೆಟ್ ಪಡೆದು ಧೋನಿ ದಾಖಲೆ ಉಡೀಸ್ ಮಾಡಿದ ಪಂತ್