ETV Bharat / sports

ನಾಯಕತ್ವದ ಮೊದಲ ಪಂದ್ಯದಲ್ಲೇ ಸೋಲು.. ಕೊಹ್ಲಿ ಕಳಪೆ ರೆಕಾರ್ಡ್​ ಪಟ್ಟಿ ಸೇರಿದ ರಿಷಭ್​ ಪಂತ್! - ಕಳಪೆ ದಾಖಲೆ ಬರೆದ ಪಂತ್

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು, ಈ ಮೂಲಕ ಅನೇಕ ಕಳಪೆ ರೆಕಾರ್ಡ್​ ನಿರ್ಮಿಸಿದೆ.

Rishabha pant joins kohli in unfortunate list

author img

By

Published : Jun 10, 2022, 9:54 AM IST

ನವದೆಹಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟಿ - 20 ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು, ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 0-1 ಅಂತರದ ಹಿನ್ನೆಡೆ ಸಾಧಿಸಿದೆ. ಕೆಎಲ್​ ರಾಹುಲ್​ ಅನುಪಸ್ಥಿತಿಯಲ್ಲಿ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದ ರಿಷಭ್​ ಪಂತ್​ ಇದೀಗ ಕಳಪೆ ರೆಕಾರ್ಡ್​ ಪಟ್ಟಿ ಸೇರಿಕೊಂಡಿದ್ದಾರೆ.

ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಸೋಲು ಕಂಡಿರುವ ಭಾರತೀಯ ನಾಯಕರ ಪಟ್ಟಿಯಲ್ಲಿ ರಿಷಭ್​ 2ನೇಯವರಾಗಿದ್ದಾರೆ. ಈ ಹಿಂದೆ ವಿರಾಟ್​​ ಕೊಹ್ಲಿ ಕೂಡ ಟಿ-20 ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಭಾರತ ಸೋಲು ಕಂಡಿತ್ತು.

ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಟಗಾರ ಇಶಾನ್ ಕಿಶನ್​(76)ರನ್​​ಗಳ ನೆರವಿನಿಂದ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ನಷ್ಟಕ್ಕೆ 211ರನ್​​ಗಳಿಕೆ ಮಾಡಿತ್ತು. ಇದರ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಡುಸ್ಸೆನ್​​ ಅಜೇಯ 75 ಹಾಗೂ ಮಿಲ್ಲರ್​ 64ರನ್​​ಗಳ ನೆರವಿನಿಂದ 19.1 ಓವರ್​​​ಗಳಲ್ಲಿ ಕೇವಲ 3 ವಿಕೆಟ್​​ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಇದನ್ನೂ ಓದಿ: IND vs SA 1st T20: ಬೌಲರ್​ಗಳ ಕಳಪೆ ಪ್ರದರ್ಶನ; ದ.ಆಫ್ರಿಕಾ ಎದುರು ಮುಗ್ಗರಿಸಿದ ಭಾರತ

ವಿರಾಟ್​ ನಾಯಕತ್ವದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಸೋಲು: 2017ರಲ್ಲಿ ಇಂಗ್ಲೆಂಡ್​ ವಿರುದ್ಧ ಕಾನ್ಫುರ್​​ನಲ್ಲಿ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್​​ಗಳ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ನಾಯಕ ವಿರಾಟ್​​ ಕೊಹ್ಲಿ 29 ರನ್​​​ಗಳಿಕೆ ಮಾಡಿದ್ದರು. ನಿನ್ನೆಯ ಪಂದ್ಯದಲ್ಲೂ ರಿಷಭ್ ಪಂತ್​ 29ರನ್​ಗಳಿಕೆ ಮಾಡಿ ಔಟಾಗಿದ್ದರು.

ಟಿ -20 ಪಂದ್ಯದಲ್ಲಿ 200+ ರನ್​​​ಗಳಿಕೆ ಮಾಡಿದ ಬಳಿಕ ಟೀಂ ಇಂಡಿಯಾ ಯಾವತ್ತೂ ಸೋಲು ಕಂಡಿಲ್ಲ. ಆದರೆ, ನಿನ್ನೆಯ ಪಂದ್ಯದಲ್ಲಿ ಸೋಲಿನ ರುಚಿ ಕಂಡಿದೆ. ಈ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಲ ಇಷ್ಟೊಂದು ರನ್​ಗಳಿಕೆ ಮಾಡಿ ಸೋಲು ಕಂಡ ತಂಡವಾಗಿ ಸಹ ಹೊರಹೊಮ್ಮಿತು. ಜೊತೆಗೆ ಸತತವಾಗಿ 13ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಆಸೆ ಕೂಡ ನಿನ್ನೆ ಕೈಗೂಡಲಿಲ್ಲ.

ಭಾರತದ ವಿಶ್ವದಾಖಲೆಯ ಕನಸು ನೂಚ್ಚುನೂರು: ಟಿ-20 ಕ್ರಿಕೆಟ್​ನಲ್ಲಿ ಈಗಾಗಲೇ ಸತತವಾಗಿ 12 ಪಂದ್ಯಗಳನ್ನ ಗೆದ್ದ ಭಾರತ, ನಿನ್ನೆಯ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದರೆ ಹೊಸದೊಂದು ವಿಶ್ವದಾಖಲೆ ನಿರ್ಮಾಣವಾಗುತ್ತಿತ್ತು. ಆದರೆ, ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆ ಅವಕಾಶ ಕೈತಪ್ಪಿಸಿಕೊಂಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.