ಪಾರ್ಲ್(ದಕ್ಷಿಣ ಆಫ್ರಿಕಾ): ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 287ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡದ ಗೆಲುವಿಗೆ 288ರನ್ಗಳ ಗುರಿ ಫಿಕ್ಸ್ ಮಾಡಿದೆ.
-
Shardul Thakur's 38-ball 40 helps India to 287/6 💥
— ICC (@ICC) January 21, 2022 " class="align-text-top noRightClick twitterSection" data="
Can they defend this and level the series?
Watch the series live on https://t.co/CPDKNxoJ9v (in select regions)#SAvIND | https://t.co/GgjKcxXNrB pic.twitter.com/WU38vKeB5G
">Shardul Thakur's 38-ball 40 helps India to 287/6 💥
— ICC (@ICC) January 21, 2022
Can they defend this and level the series?
Watch the series live on https://t.co/CPDKNxoJ9v (in select regions)#SAvIND | https://t.co/GgjKcxXNrB pic.twitter.com/WU38vKeB5GShardul Thakur's 38-ball 40 helps India to 287/6 💥
— ICC (@ICC) January 21, 2022
Can they defend this and level the series?
Watch the series live on https://t.co/CPDKNxoJ9v (in select regions)#SAvIND | https://t.co/GgjKcxXNrB pic.twitter.com/WU38vKeB5G
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ರಾಹುಲ್ ಪಡೆ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ನಷ್ಟಕ್ಕೆ ಆರಂಭಿಕ ಶಿಖರ್-ರಾಹುಲ್ ಜೋಡಿ 63ರನ್ಗಳ ಜೊತೆಯಾಟವಾಡಿತು. 29ರನ್ಗಳಿಕೆ ಮಾಡಿದ್ದ ವೇಳೆ ಧವನ್ ಮಗಲಾ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಟೀಂ ಇಂಡಿಯಾ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತ್ತು.
ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ವೈಫಲ್ಯ, ಕೊಹ್ಲಿ ಶೂನ್ಯಕ್ಕೆ ಔಟ್
ಎರಡನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಕಣಕ್ಕಿಳಿದ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಕ್ಯಾಪ್ಟನ್ ರಾಹುಲ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕೆ ಬಂದ ಶ್ರೇಯಸ್ ಅಯ್ಯರ್ 11ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ರಾಹುಲ್-ಪಂತ್ ಅರ್ಧಶತಕದ ಬ್ಯಾಟಿಂಗ್
ಕ್ಯಾಪ್ಟನ್ ರಾಹುಲ್ ಜೊತೆ ಸೇರಿದ ವಿಕೆಟ್ ಕೀಪರ್ ರಿಷಭ್ ಪಂತ್ ಎದುರಾಳಿ ಬೌಲರ್ಗಳ ಚೆಂಡಾಡಿದರು. ಈ ಜೋಡಿ ತಂಡಕ್ಕೆ ಉತ್ತಮ ರನ್ ಕಾಣಿಕೆ ನೀಡುವ ಜೊತೆಗೆ ಅರ್ಧಶತಕ ಸಿಡಿಸಿ ಮಿಂಚಿದರು. 79 ಎಸೆತಗಳಲ್ಲಿ 55ರನ್ಗಳಿಕೆ ಮಾಡಿದ್ದ ರಾಹುಲ್ ಮಗಲಾ ಓವರ್ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಈ ಇವರಿಗೆ ಉತ್ತಮ ಸಾಥ್ ನೀಡಿದ ಪಂತ್ 71 ಎಸೆತಗಳಲ್ಲಿ 2 ಆಕರ್ಷಕ ಸಿಕ್ಸರ್, 10 ಬೌಂಡರಿ ಸೇರಿದಂತೆ 85ರನ್ಗಳಿಕೆ ಮಾಡಿ ಔಟಾದರು.
ಇದನ್ನೂ ಓದಿರಿ: ದತ್ತು ಮಗಳ ಮೇಲೆ ಅತ್ಯಾಚಾರದ ಆರೋಪ.. ಪದ್ಮ ಪ್ರಶಸ್ತಿ ಪುರಸ್ಕೃತ ಉದ್ಧಬ್ ಜೈಲು ಪಾಲು
ತದನಂತರ ವೆಂಕಟೇಶ್ ಅಯ್ಯರ್ 22ರನ್, ಶಾರ್ದೂಲ್ ಠಾಕೂರ್ ಅಜೇಯ 40ರನ್ ಹಾಗೂ ಅಶ್ವಿನ್ ಅಜೇಯ 25ರನ್ಗಳಿಕೆ ಮಾಡಿ ತಂಡ 6 ವಿಕೆಟ್ನಷ್ಟಕ್ಕೆ 287ರನ್ಗಳಿಕೆ ಮಾಡಲು ಸಹಾಯ ಮಾಡಿದರು.
ದಕ್ಷಿಣ ಆಫ್ರಿಕಾ ಪರ ಶಮ್ಸಿ 2 ವಿಕೆಟ್ ಪಡೆದುಕೊಂಡರೆ, ಮಗಲಾ, ಮರ್ಕ್ರಾಮ್, ಮಹಾರಾಜ್ ಹಾಗೂ ಪೆಹ್ಲಿಕೈ ತಲಾ 1 ವಿಕೆಟ್ ಪಡೆದುಕೊಂಡರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ