ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ನ ವೇಗಿ ಟ್ರಂಟ್ ಬೌಲ್ಟ್ ಮತ್ತು ಕಾಲಿನ್ ಗ್ರ್ಯಾಂಡ್ಹೋಮ್ ಬಯೋಬಬಲ್ ಬಳಲಿಕೆಯ ಕಾರಣದಿಂದ ಭಾರತದ ವಿರುದ್ಧ ಟಿ20 ವಿಶ್ವಕಪ್ ನಂತರ ನಡೆಯುವ ಟೆಸ್ಟ್ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ನ್ಯೂಜಿಲ್ಯಾಂಡ್ ತಂಡ ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ 3 ಪಂದ್ಯಗಳ ಟಿ20 ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಶಕ್ಕಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಅನುಭವಿ ಸ್ಪಿನ್ನರ್, ವಿಲ್ ಸಮರ್ವಿಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಪ್ರಮುಖ ಸ್ಪಿನ್ನರ್ಗಳಾಗಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇವರಿಗೆ ಬೆಂಬಲವಾಗಿ ಅರೆಕಾಲಿಕ ಸ್ಪಿನ್ನರ್ಗಳಾಗಿ ರೈಸಿಂಗ್ ಸ್ಟಾರ್ ರಚಿನ್ ರವೀಂದ್ರ ಮತ್ತು ಗ್ಲೇನ್ ಫಿಲಿಫ್ಸ್ ಕಿವೀಸ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ನ್ಯೂಜಿಲ್ಯಾಂಡ್ ಮತ್ತು ಭಾರತದ ನಡುವಿನ ಮೊದಲ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನವೆಂಬರ್ 25ರಿಂದ 29ವರೆಗೆ ಮತ್ತು ಮುಂಬೈನಲ್ಲಿ ಡಿಸೆಂಬರ್ 3ರಿಂದ 7ರವರೆಗೆ 2ನೇ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೊದಲ ಸರಣಿಯಿಂದ ಸ್ಟಾರ್ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಆಲ್ರೌಂಡರ್ ಕಾಲಿನ್ ಗ್ರ್ಯಾಂಡ್ ಹೋಮ್ ಹೊರಬಂದಿದ್ದಾರೆ. ಬಯೋಬಬಲ್ ಆಯಾಸದ ಕಾರಣದ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಲಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಬ್ಲಂಡೆಲ್ ನಿರ್ವಹಿಸಲಿದ್ದಾರೆ. ತಂಡದಲ್ಲಿ ಕಾನ್ವೆ, ಲ್ಯಾಥಮ್ ಮತ್ತು ಹೆನ್ರಿ ನಿಕೋಲ್ಸ್ ಬ್ಯಾಟಿಂಗ್ ಬಲವಾಗಿದ್ದರೆ, ಜೆಮೀಸನ್, ರಚಿನ್ ರವೀಂದ್ರ ಅಂತಹ ಆಲ್ ರೌಂಡರ್ಗಳ ಬಲವಿದೆ.
ನ್ಯೂಜಿಲೆಂಡ್ ಟೆಸ್ಟ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ವಿಕೀ), ಡೆವೊನ್ ಕಾನ್ವೇ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ವಿಲ್ ಸೋಮರ್ವಿಲ್ಲೆ, ಟಿಮ್ ಸೌಥಿ, ರಾಸ್ ವಿಲ್ ಯಂಗ್, ನೀಲ್ ವ್ಯಾಗ್ನರ್
ಇದನ್ನು ಓದಿ:ರಾಹುಲ್ ದ್ರಾವಿಡ್ ಅವರೊಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ: ರೋಹಿತ್ ಶರ್ಮಾ