ಬರ್ಮಿಂಗ್ಹ್ಯಾಮ್: ಭಾರತ-ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ನಲ್ಲಿ ಟೀಂ ಇಂಡಿಯಾ 416ರನ್ಗಳಿಕೆ ಮಾಡಿ ಆಲೌಟ್ ಆಗಿದೆ. ಕೊನೆಯದಾಗಿ ಬ್ಯಾಟ್ ಬೀಸಲು ಮೈದಾನಕ್ಕಿಳಿದ ನಾಯಕ ಜಸ್ಪ್ರೀತ್ ಬುಮ್ರಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತಾವು ಸಹ ಬ್ಯಾಟಿಂಗ್ನಲ್ಲಿ ಮಿಂಚು ಹರಿಸುವ ಸಾಮರ್ಥ್ಯ ಹೊಂದಿರುವುದನ್ನು ಸಾಬೀತು ಮಾಡಿದ್ದಾರೆ.
-
Stuart Broad to @Jaspritbumrah93 the batter💥💥
— BCCI (@BCCI) July 2, 2022 " class="align-text-top noRightClick twitterSection" data="
An over to remember! A record shattering over! #ENGvIND pic.twitter.com/l9l7lslhUh
">Stuart Broad to @Jaspritbumrah93 the batter💥💥
— BCCI (@BCCI) July 2, 2022
An over to remember! A record shattering over! #ENGvIND pic.twitter.com/l9l7lslhUhStuart Broad to @Jaspritbumrah93 the batter💥💥
— BCCI (@BCCI) July 2, 2022
An over to remember! A record shattering over! #ENGvIND pic.twitter.com/l9l7lslhUh
ಮೊಹಮ್ಮದ್ ಶಮಿ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕಿಳಿದ ಕ್ಯಾಪ್ಟನ್ ಬುಮ್ರಾ ಒಂದೇ ಓವರ್ನಲ್ಲಿ 35ರನ್ಗಳಿಕೆ ಮಾಡಿದರು. ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ ಎಸೆದ ಓವರ್ನಲ್ಲಿ 4 ಬೌಂಡರಿ, 2 ಸಿಕ್ಸರ್ ಸಮೇತವಾಗಿ 35ರನ್ ಸಿಡಿಸಿದರು. ಇದರಲ್ಲಿ ಒಂದು ವೈಡ್ ಫೋರ್ ಸಹ ಸೇರಿಕೊಂಡಿತ್ತು. ಬುಮ್ರಾ ಒಂದೇ ಓವರ್ನಲ್ಲಿ ಅತಿ ಹೆಚ್ಚು ರನ್ಗಳಿಸಿ ವೆಸ್ಟ್ ಇಂಡೀಸ್ನ ಶ್ರೇಷ್ಟ ಬ್ಯಾಟರ್ ಬ್ರಿಯಾನ್ ಲಾರಾ ದಾಖಲೆ ಮುರಿದಿದ್ದಾರೆ.
ಇದನ್ನೂ ಓದಿ: ಪಂತ್, ಜಡೇಜಾ ಶತಕ: ಬುಮ್ರಾ ಸ್ಫೋಟಕ ಆಟ; ಮೊದಲ ಇನ್ನಿಂಗ್ಸ್ನಲ್ಲಿ 416ರನ್ಗಳಿಸಿದ ಇಂಡಿಯಾ
ಒಂದೇ ಓವರ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಬುಮ್ರಾ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾ ಒಂದೇ ಓವರ್ನಲ್ಲಿ 35ರನ್ಗಳಿಕೆ ಮಾಡಿದ್ದು, ಇಷ್ಟೊಂದು ರನ್ಗಳಿಸಿರುವ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ 2003ರಲ್ಲಿ ಬ್ರೇನ್ ಲಾರಾ ಒಂದೇ ಓವರ್ನಲ್ಲಿ 28ರನ್ಗಳಿಕೆ ಮಾಡಿದ್ದರು. ಇದರ ಜೊತೆಗೆ 2013ರಲ್ಲಿ ಜಾರ್ಜ್ ಬೈಲಿ ಹಾಗೂ 2020ರಲ್ಲಿ ಕೇಶವ್ ಮಹಾರಾಜ್ ಒಂದೇ ಓವರ್ನಲ್ಲಿ 28ರನ್ಗಳಿಕೆ ಮಾಡಿದ್ದರು.
ಟೆಸ್ಟ್ನಲ್ಲಿ ಒಂದೇ ಓವರ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಪ್ಲೇಯರ್ಸ್
- ಜಸ್ಪ್ರೀತ್ ಬುಮ್ರಾ 35ರನ್: ಬರ್ಮಿಂಗ್ಹ್ಯಾಮ್ 2022
- ಬ್ರಿಯಾನ್ ಲಾರಾ 28ರನ್: ಜೋಹಾನ್ಸ್ ಬರ್ಗ್ 2003
- ಜಾರ್ಜ್ ಬೈಲಿ 28ರನ್: ಪರ್ತ್ 2013
- ಕೇಶವ್ ಮಹಾರಾಜ್ 28ರನ್: ಪೋರ್ಟ್ ಎಲಿಜಬೆತ್ 2022
ಟಿ20ಯಲ್ಲೂ 36ರನ್ ಬಿಟ್ಟುಕೊಟ್ಟಿರುವ ಬ್ರಾಡ್: 2007ರಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಟಿ20 ಪಂದ್ಯದಲ್ಲೂ ಸ್ಟುವರ್ಟ್ ಬ್ರಾಡ್ ಒಂದೇ ಓವರ್ನಲ್ಲಿ 36ರನ್ ಬಿಟ್ಟುಕೊಟ್ಟಿದ್ದರು. ಆರು ಎಸೆತಗಳನ್ನ ಯುವರಾಜ್ ಸಿಂಗ್ ಸಿಕ್ಸರ್ಗೆ ಅಟ್ಟಿದ್ದರು. ಇಂದಿನ ಟೆಸ್ಟ್ ಪಂದ್ಯದಲ್ಲೂ ಬ್ರಾಡ್ ದಾಖಲೆಯ 35ರನ್ ಬಿಟ್ಟುಕೊಟ್ಟಿದ್ದಾರೆ.
-
Kya yeh Yuvi hai ya Bumrah!?
— Sachin Tendulkar (@sachin_rt) July 2, 2022 " class="align-text-top noRightClick twitterSection" data="
2007 ki yaad dilaa di.. 😍@YUVSTRONG12 @Jaspritbumrah93 #ENGvIND pic.twitter.com/vv9rvrrO6K
">Kya yeh Yuvi hai ya Bumrah!?
— Sachin Tendulkar (@sachin_rt) July 2, 2022
2007 ki yaad dilaa di.. 😍@YUVSTRONG12 @Jaspritbumrah93 #ENGvIND pic.twitter.com/vv9rvrrO6KKya yeh Yuvi hai ya Bumrah!?
— Sachin Tendulkar (@sachin_rt) July 2, 2022
2007 ki yaad dilaa di.. 😍@YUVSTRONG12 @Jaspritbumrah93 #ENGvIND pic.twitter.com/vv9rvrrO6K
ಬುಮ್ರಾಗೆ ಅಭಿನಂದನೆಗಳ ಸುರಿಮಳೆ: ಒಂದೇ ಓವರ್ನಲ್ಲಿ ಬುಮ್ರಾ 35ರನ್ಗಳಿಕೆ ಮಾಡ್ತಿದ್ದಂತೆ ಅವರಿಗೆ ಅಭಿನಂದನೆಗಳ ಸುರಿಮಳೆಗೈಯಲಾಗ್ತಿದೆ. ಟ್ವೀಟ್ ಮಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 'ಇದು ಯುವಿ ನಾ ಅಥವಾ ಬುಮ್ರಾ ನಾ?'(Kya yeh Yuvi hai ya Bumrah!?) ಎಂದು ಪ್ರಶ್ನೆ ಮಾಡಿದ್ದು, 2007ರ ಇನ್ನಿಂಗ್ಸ್ ನೆನಪಾಯ್ತು ಎಂದಿದ್ದಾರೆ. ಇನ್ನೂ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿದ್ದ ವಿರಾಟ್, ಪಂತ್ ಸೇರಿದಂತೆ ಟೀಂ ಇಂಡಿಯಾ ಪ್ಲೇಯರ್ಸ್ ಸಂಭ್ರಮಿಸಿದ್ದಾರೆ.