ಇಂದೋರ್(ಮಹಾರಾಷ್ಟ್ರ): ಬಾರ್ಡರ್ ಗವಾಸ್ಕರ್ ಟ್ರೋಫಿ 2023 ಟೂರ್ನಿಯ ಎರಡನೇ ಟೆಸ್ಟ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ಈ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಪಂದ್ಯ ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಿಂದ ಮೂರನೇ ಟೆಸ್ಟ್ ಪಂದ್ಯ ಇಂದೋರ್ಗೆ ಶಿಪ್ಟ್ ಆಗಿದೆ.
ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 1ರಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮಹಾರಾಷ್ಟ್ರದ ವಿದರ್ಭದಲ್ಲಿ ಭಾರತ ಮೊದಲ ಪಂದ್ಯ ಜಯಸಿದೆ. ಹೋಳ್ಕರ್ ಮೈದಾನದಲ್ಲಿ ಟೀಂ ಇಂಡಿಯಾ ಮೂರೂ ಮಾದರಿಯ ಕ್ರಿಕೆಟ್ ಆಡುತ್ತಾ ಬಂದಿದೆ. ಈ ಪಂದ್ಯದ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಸ್ ಹೆಚ್ಚಾಗಿದೆ. ಹೋಳ್ಕರ್ ಪಿಚ್‌ನಲ್ಲಿ ಭಾರತದ ಪ್ರದರ್ಶನ ಅದ್ಭುತವಾಗಿದೆ. ಈ ಮೈದಾನದಲ್ಲಿ ಭಾರತ ತಂಡ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿಲ್ಲ.
ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ 2022 ಅಕ್ಟೋಬರ್ನಲ್ಲಿ ಮೊದಲ ಟಿ20 ಪಂದ್ಯವನ್ನು ಆಡಲಾಯಿತು. ನಂತರ ODI ಕ್ರಿಕೆಟ್ ಅನ್ನು ಜನವರಿ 2023 ರಲ್ಲಿ ಏಕದಿನ ಪಂದ್ಯವನ್ನು ಆಯೋಜಿಸಲಾಗಿತ್ತು. ಇದುವರೆಗೆ ಹೋಳ್ಕರ್ ಮೈದಾನದಲ್ಲಿ ಟೆಸ್ಟ್ ಮಾದರಿಯ ಎರಡು ಪಂದ್ಯ ಆಯೋಜನೆ ಆಗಿದ್ದು, ಎರಡರಲ್ಲೂ ಭಾರತ ಜಯಿಸಿದೆ.
2016ರಲ್ಲಿ ಅಕ್ಟೋಬರ್ 8 ರಿಂದ 11ರವರೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಸಹಿತ 86 ರನ್ಗಳಿಂದ ಜಯಿಸಿತ್ತು. ನವೆಂಬರ್ 2019 ರಲ್ಲಿ, ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಟೆಸ್ಟ್ ಸರಣಿಯನ್ನು ಆಯೋಜಿಸಲಾಗಿದ್ದು ಇದರಲ್ಲಿ, ಬಾಂಗ್ಲಾದೇಶದ ವಿರುದ್ಧ 130 ರನ್‌ಗಳ ಗೆಲುವು ಸಾಧಿಸಿತ್ತು.
ಅಜಿಕ್ಯಾ ರೆಹಾನೆ ಟಾಪ್ ರೆಕಾರ್ಡ್: ಭಾರತದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಹೋಲ್ಕರ್ ಕ್ರೀಡಾಂಗಣದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ರಹಾನೆ ಆ ಅವಧಿಯಲ್ಲಿ ಎರಡು ಟೆಸ್ಟ್‌ಗಳಲ್ಲಿ 148.50 ಸರಾಸರಿಯಲ್ಲಿ 297 ರನ್ ಗಳಿಸಿದ್ದಾರೆ. 2016 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಟೆಸ್ಟ್ ಪಂದ್ಯದಲ್ಲಿ ರೆಹಾನೆ 188 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರಹಾನೆ 365 ರನ್‌ಗಳ ಜೊತೆಯಾಟ ಆಡಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಇದೇ ಸ್ಟೇಡಿಯಂನಲ್ಲಿ ದ್ವಿಶತಕ ಸಿಡಿಸಿದ್ದರು.
ವಿರಾಟ್ ದ್ವಿಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 366 ಎಸೆತಗಳಲ್ಲಿ 211 ರನ್ ಗಳಿಸುವ ಮೂಲಕ ಭಾರತ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಸಹಕರಿಸಿದರು. 2019 ರಲ್ಲಿ ಆಡಿದ ಟೆಸ್ಟ್ ಪಂದ್ಯದಲ್ಲಿ, ಅಜಿಂಕ್ಯ ರಹಾನೆ ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಮತ್ತು ಮಯಾಂಕ್ ಅಗರ್ವಾಲ್ 243 ರನ್‌ಗಳ ಗಳಿಸಿದ್ದರು.
ಅತೀ ಹೆಚ್ಚು ಅಂತರದ ದಾಖಲೆಯ ಗೆಲುವು: 2016 ರಲ್ಲಿ ಹೋಲ್ಕರ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಮೂರು ಟೆಸ್ಟ್ನ ಕೊನೆಯ ಪಂದ್ಯ ಇಲ್ಲಿ ಆಯೋಜನೆ ಗೊಂಡಿದ್ದು, ಅತೀ ಹೆಚ್ಚು ವಿಕೆಟ್ಗಳು ಉರುಳಿದ್ದವು. ವಿರಾಟ್ ನಾಯಕತ್ವದಲ್ಲಿ ಭಾರತ 321 ರನ್ ಅಂತರದಲ್ಲಿ ಕಿವೀಸ್ ವಿರುದ್ಧ ಅತೀ ಹೆಚ್ಚು ಲೀಡ್ನಿಂದ ಗೆಲುವು ಸಾಧಿಸಿತ್ತು. ಈ ಮೂಲಕ ಭಾರತ ಕಿವೀಸ್ನ್ನು 3-0 ಯಿಂದ ಕ್ಲೀನ್ ಸ್ವೀಪ್ ಮಾಡಿತ್ತು.
ಇದನ್ನೂ ಓದಿ: ಸಿಕ್ಸರ್ನಲ್ಲಿ ಮೆಕಲಮ್ ದಾಖಲೆ ಮುರಿದ ಸ್ಟೋಕ್ಸ್ : 1002 ವಿಕೆಟ್ ಪಡೆದ ಆಂಡರ್ಸನ್ ಮತ್ತು ಬ್ರಾಡ್ ಜೋಡಿ