ETV Bharat / sports

ಬಾರ್ಡರ್ ಗವಾಸ್ಕರ್ ಟ್ರೋಫಿ: ಮೊದಲ ಪಂದ್ಯದ ಟಿಕೆಟ್‌ಗಳ ಬುಕ್ಕಿಂಗ್​ ಶೀಘ್ರದಲ್ಲೇ ಪ್ರಾರಂಭ - ಬಾರ್ಡರ್​ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದ ಟಿಕೆಟ್‌ಗಳ ಬುಕ್ಕಿಂಗ್​​ ಶೀಘ್ರದಲ್ಲೇ ಪ್ರಾರಂಭವಾಗಲಿದೆ. 100 ದಿನಗಳ ನಂತರ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಇದಕ್ಕೆ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿದೆ.

IND vs AUS 1st Test Nagpur  Nagpur Cricket Stadium ticket bookings start date  VCA Stadium Nagpur Test match tickets price list  Australia tour of India  VCA Stadium Nagpur  Border Gavaskar Trophy  Border Gavaskar Trophy schedule  ಮೊದಲ ಪಂದ್ಯದ ಟಿಕೆಟ್‌ಗಳ ಬುಕಿಂಗ್ ಶೀಘ್ರದಲ್ಲೇ ಪ್ರಾರಂಭ  ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ  ಬಾರ್ಡರ್ ಗವಾಸ್ಕರ್ ಟ್ರೋಫಿ  ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ  ಬಾರ್ಡರ್​ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ  ಟೆಸ್ಟ್‌ನ ಟಿಕೆಟ್‌ಗಳ ಮಾರಾಟ
ಬಾರ್ಡರ್ ಗವಾಸ್ಕರ್ ಟ್ರೋಫಿ
author img

By

Published : Jan 28, 2023, 2:34 PM IST

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮುಂಬರುವ ಬಾರ್ಡರ್​ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ಫೆಬ್ರವರಿ 9 ರಂದು ಆರಂಭವಾಗಲಿದೆ. ಜನವರಿ 29 ರಿಂದ ಮೊದಲ ಟೆಸ್ಟ್‌ನ ಟಿಕೆಟ್‌ಗಳ ಮಾರಾಟ ಪ್ರಾರಂಭವಾಗಲಿದೆ. ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿರುವುದಿಲ್ಲ, ಆದ್ದರಿಂದ ವೀಕ್ಷಕರು ಆಫ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಬಿಲಿಮೋರಿಯಾ ಪೆವಿಲಿಯನ್, ವಿಸಿಎ, ಸಿವಿಲ್ ಲೈನ್ಸ್, ನಾಗ್ಪುರಕ್ಕೆ ಹೋಗಬೇಕಾಗುತ್ತದೆ. ಟಿಕೆಟ್ ವಿಂಡೋ ಬೆಳಗ್ಗೆ 10:00 ರಿಂದ ಸಂಜೆ 05:00 ರವರೆಗೆ ತೆರೆದಿರುತ್ತದೆ. ಫೆಬ್ರವರಿ 7ರ (ಮಂಗಳವಾರ) ಸಂಜೆ 05:00 ಗಂಟೆಯಿಂದ ಟಿಕೆಟ್‌ಗಳನ್ನು ಮಾರಾಟ ಮಾಡಲು ಬಂದ್​ ಮಾಡಲಾಗುವುದು.

ಟಿಕೆಟ್ ಬೆಲೆ: ಬಾರ್ಡರ್ ಗವಾಸ್ಕರ್ ಟ್ರೋಫಿ ಟಿಕೆಟ್​ಗಳು ವಿಸಿಎ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ 10 ರೂಗಳಿಗೆ ನೀಡಲಾಗುತ್ತಿದೆ. ಸುಮಾರು 4,000 ಟಿಕೆಟ್‌ಗಳನ್ನು ವಿದ್ಯಾರ್ಥಿಗಳಿಗೆ ಕಾಯ್ದಿರಿಸಲಾಗಿದೆ. ಈ ಟಿಕೆಟ್‌ಗಳನ್ನು ಶಾಲೆಯ ಮೂಲಕ ಮಾತ್ರ ಖರೀದಿಸಬಹುದಾಗಿದೆ (ವೈಯಕ್ತಿಕವಾಗಿ ಅಲ್ಲ). ವಿದ್ಯಾರ್ಥಿಗಳು ಮತ್ತು ಶಿಕ್ಷಕರು (ಪ್ರತಿ 25 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು) ಪಂದ್ಯದ ದಿನದಂದು ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕಾಗುತ್ತದೆ. ವಿವಿಧ 13 ವಿಭಾಗಗಳಿಗೆ ವಿಭಿನ್ನ ಬೆಲೆಯನ್ನು ನಿಗದಿಪಡಿಸಲಾಗಿದೆ.

ವಿಂಗ್​ಗಳ ಬೆಲೆ ಈ ರೀತಿ ಇದೆ..

ಪಶ್ಚಿಮ ಮೈದಾನ - 10 ರೂ

ಪೂರ್ವ ಮೈದಾನ - 300 ರೂ

ಪೂರ್ವ 1- 300 ರೂ

ವೆಸ್ಟ್ ಗ್ರೌಂಡ್ (ಬೀಜ್ R&S) - 400 ರೂ

ಪಶ್ಚಿಮ 1 - 400 ರೂ

ಉತ್ತರ ನಾಲ್ಕನೇ - 600 ರೂ

ಉತ್ತರ 3 - 800 ರೂ

ದಕ್ಷಿಣ ನಾಲ್ಕನೇ - 800 ರೂ

ಉತ್ತರ ಮೈದಾನ - 1,000 ರೂ

ದಕ್ಷಿಣ (ಕೆ, ಎಲ್, ಎಂ & ಎನ್) ಮೈದಾನ - ರೂ 1,500

ದಕ್ಷಿಣ ಮೂರು - 2,000 ರೂ

ದಕ್ಷಿಣ (G&H) ಮೈದಾನ - ರೂ 3,000

ಕಾರ್ಪೊರೇಟ್ ಬಾಕ್ಸ್ - 1,25,000 ರೂಪಾಯಿ ಮೊತ್ತವನ್ನು ನಿಗದಿಪಡಿಸಲಾಗಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳಾಪಟ್ಟಿ: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತವು ತವರಿನಲ್ಲೇ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಅವಧಿಯಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ಫೆಬ್ರವರಿ 9 ರಿಂದ 13 ರವರೆಗೆ, ಎರಡನೇ ಟೆಸ್ಟ್ ಫೆಬ್ರವರಿ 17-21 ರವರೆಗೆ ದೆಹಲಿಯಲ್ಲಿ ನಡೆಯಲಿದೆ.

ಮೂರನೇ ಪಂದ್ಯ ಧರ್ಮಶಾಲಾದಲ್ಲಿ ಮಾರ್ಚ್ 1 ರಿಂದ ಮಾರ್ಚ್ 5 ರವರೆಗೆ ಮತ್ತು ನಾಲ್ಕನೇ ಟೆಸ್ಟ್ ಮಾರ್ಚ್ 9-14 ರವರೆಗೆ ಅಹಮದಾಬಾದ್‌ನಲ್ಲಿ ನಿಗದಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳು ಮುಗಿದ ಬಳಿಕ ಮೂರು ಏಕದಿನ ಪಂದ್ಯಗಳ ಸರಣಿ ನಡೆಯುತ್ತದೆ. ಮೊದಲ ಪಂದ್ಯ ಮಾರ್ಚ್ 17 ರಂದು ಮುಂಬೈನಲ್ಲಿ, ಎರಡನೇ ಪಂದ್ಯ ಮಾರ್ಚ್ 19 ರಂದು ವಿಶಾಖಪಟ್ಟಣದಲ್ಲಿ ಮತ್ತು ಮೂರನೇ ಪಂದ್ಯ ಮಾರ್ಚ್ 22 ರಂದು ಚೆನ್ನೈನಲ್ಲಿ ನಡೆಯಲಿದೆ.

2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ 2-1 ರಿಂದ ಗೆದ್ದುಕೊಂಡಿತ್ತು. ಇದೇ ಭರವಸೆಯೊಂದಿಗೆ ಬ್ಲೂ ಆರ್ಮಿ ತವರು ನೆಲದಲ್ಲಿ ಈ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಲು ಸಿದ್ದವಾಗ್ತಿದೆ.

ಓದಿ: ಮೊದಲ ಟಿ20: ಕಿವೀಸ್​ ವಿರುದ್ಧ ಹಾರ್ದಿಕ್​ ಪಡೆಗೆ 21 ರನ್​ ಅಂತರದ ಸೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.