ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದ್ದು, ಟಾಸ್ ಗೆದ್ದ ಕಾಂಗರೂ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಮುಂದಿನ ತಿಂಗಳು ನಡೆಯುವ ಟಿ20 ವಿಶ್ವಕಪ್ಗೆ ಸಿದ್ಧತಾ ಭಾಗವಾಗಿ ನಡೆಯುತ್ತಿರುವ ಸರಣಿ, ಉಭಯ ತಂಡಗಳು ತಂಡದ ಬಲವನ್ನು ಹೆಚ್ಚಿಸಿಕೊಳ್ಳಲು ನೆರವಾಗಲಿದೆ.
ಬೂಮ್ರಾಗಿಲ್ಲ ಚಾನ್ಸ್: ಗಾಯಕ್ಕೀಡಾಗಿದ್ದ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಚೇತರಿಸಿಕೊಂಡು ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿದ್ದರು. ಆದರೆ, ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಬಗ್ಗೆಯೇ ಅನುಮಾನಗಳಿವೆ. ಟಾಸ್ ಬಳಿಕ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು, ಬೂಮ್ರಾ ಪಂದ್ಯದಲ್ಲಿ ಆಡುತ್ತಿಲ್ಲ. ಹರ್ಷಲ್ ಪಟೇಲ್ಗೆ ಸ್ಥಾನ ನೀಡಲಾಗಿದೆ. ಬೂಮ್ರಾ 2 ಅಥವಾ ಮೂರನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
-
Here's #TeamIndia's Playing XI for the T20I series opener 🔽
— BCCI (@BCCI) September 20, 2022 " class="align-text-top noRightClick twitterSection" data="
Follow the match 👉 https://t.co/ZYG17eC71l #INDvAUS pic.twitter.com/VUaQFzVUDf
">Here's #TeamIndia's Playing XI for the T20I series opener 🔽
— BCCI (@BCCI) September 20, 2022
Follow the match 👉 https://t.co/ZYG17eC71l #INDvAUS pic.twitter.com/VUaQFzVUDfHere's #TeamIndia's Playing XI for the T20I series opener 🔽
— BCCI (@BCCI) September 20, 2022
Follow the match 👉 https://t.co/ZYG17eC71l #INDvAUS pic.twitter.com/VUaQFzVUDf
ಬೂಮ್ರಾ ಬದಲಾಗಿ ಉಮೇಶ್ ಯಾದವ್ಗೆ ಅವಕಾಶ ನೀಡಲಾಗಿದೆ. ವೇಗಿ ಉಮೇಶ್, ಮೊಹಮದ್ ಶಮಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ತಂಡಗಳು ಇಂತಿವೆ; ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮ್ಮಿನ್ಸ್, ನಾಥನ್ ಎಲ್ಲಿಸ್, ಆ್ಯಡಂ ಜಂಪಾ, ಜೋಶ್ ಹೇಜಲ್‌ವುಡ್.
ಭಾರತ- ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯಜುವೇಂದ್ರ ಚಹಲ್.
ಓದಿ: ಪ್ರತಿ ಬಾರಿ 200ರ ಸ್ಟ್ರೈಕ್ರೇಟಲ್ಲಿ ಆಡಲಾಗದು.. ಬ್ಯಾಟಿಂಗ್ ಸರಾಸರಿ ಟೀಕೆಗೆ ಕೆಎಲ್ ರಾಹುಲ್ ಉತ್ತರ