ETV Bharat / sports

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ಸಿದ್ಧ: ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು? - ಭಾರತೀಯ ಆರಂಭಿಕ ಆಟಗಾರರು

India vs Afghanistan T20I: ಭಾರತೀಯ ಕ್ರಿಕೆಟ್ ತಂಡ ಅಫ್ಘಾನಿಸ್ತಾನ ವಿರುದ್ಧ ಟಿ-20 ಸರಣಿಗೆ ಸಜ್ಜಾಗಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ತೆರೆಯಲಿರುವವರು ಯಾರು? ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ.

ಭಾರತೀಯ ಕ್ರಿಕೆಟ್ ತಂಡ
ಭಾರತೀಯ ಕ್ರಿಕೆಟ್ ತಂಡ
author img

By ETV Bharat Karnataka Team

Published : Jan 9, 2024, 4:43 PM IST

ನವದೆಹಲಿ: ಜನವರಿ 11ರಿಂದ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ ಆರಂಭಗೊಳ್ಳಲಿದ್ದು, ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ಇನ್ನೂ ಯಾವುದೂ ಖಾತ್ರಿಯಾದಂತೆ ಕಾಣಿಸುತ್ತಿಲ್ಲ. ಯಶಸ್ವಿ ಜೈಸ್ವಾಲ್, ಶುಭ್​​ಮನ್ ಗಿಲ್, ವಿರಾಟ್​ ಕೊಹ್ಲಿ ಈ ಮೂವರು ಸ್ಟಾರ್​ ಬ್ಯಾಟ್ಸಮನ್​ಗಳಲ್ಲಿ ಯಾರು ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದಾರೆ ಎಂಬುದರ ಬಗ್ಗೆ ಬಿಸಿಸಿಐನಿಂದ ಖಚಿತತೆ ಹೊರ ಬೀಳಬೇಕಿದೆ. ಆದರೆ, ಈ ಮೂವರಲ್ಲಿ ಯಾರಾದರೊಬ್ಬರು ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸಿದರೆ ಮತ್ತೊಬ್ಬರು ಬೆಂಚ್​ ಕಾಯಬೇಕಾದ ಅನಿವಾರ್ಯತೆ ಬರಬಹುದು ಅನ್ನೋದು ಕ್ರಿಕೆಟ್​ ವಿಶ್ಲೇಷಕರ ಮಾತು.

ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಗೆ ಬಿಸಿಸಿಐ ಈಗಾಗಾಲೇ ಭಾರತ ತಂಡವನ್ನು ಪ್ರಕಟಿಸಿದೆ. ಸುಮಾರು 14 ತಿಂಗಳ ನಂತರ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20 ತಂಡಕ್ಕೆ ಮರಳಿದ್ದಾರೆ. ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ (ಗಾಯದ ಕಾರಣ), ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ ಅವರನ್ನು ತಂಡದಿಂದ ಹೊರಗೊಳಿಯಲಿದ್ದು, ಯುವ ಆಲ್ ರೌಂಡರ್​ಗಳಾದ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ. ಬಲಿಷ್ಠ ಆಟಗಾರರೊಂದಿಗೆ ಕಣಕ್ಕಿಳಿಯಲಿರುವ ತಂಡ, ರೋಹಿತ್​ ಜೊತೆಗಾರನ ಹುಡುಕಾಟದಲ್ಲಿ ಮುಳುಗಿದೆ.

  • What will be your opening combination for Afghanistan T20I series?

    1) Rohit - Jaiswal
    2) Rohit - Gill
    3) Rohit - Kohli pic.twitter.com/6R0KMLSSmZ

    — Johns. (@CricCrazyJohns) January 8, 2024 " class="align-text-top noRightClick twitterSection" data=" ">

ರೋಹಿತ್ - ಜೈಸ್ವಾಲ್: ನಿರಂತರವಾಗಿ ಮೊದಲ ಕ್ರಮಾಂಕದಲ್ಲಿ ಆಡುತ್ತಾ ಬಂದಿರುವ ರೋಹಿತ್, ಈ ಸರಣಿಯಲ್ಲಿಯೂ ಅದೇ ಮಾರ್ಗ ಅನುಸರಿಸಬಹುದು. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ರೋಹಿತ್​ಗೆ ಉತ್ತಮ ಜೊತೆಗಾರನ ಅವಶ್ಯಕತೆ ಇದೆ. ಎಡಗೈ ಅಥವಾ ಬಲಗೈ ಬ್ಯಾಟ್ಸ್‌ಮನ್‌ಗಳೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸುವ ಆಲೋಚನೆಯಲ್ಲಿರುವ ಕೋಚ್ ರಾಹುಲ್ ದ್ರಾವಿಡ್, ಯಶಸ್ವಿ ಜೈಸ್ವಾಲ್​ಗೆ ಅವಕಾಶ ಮಾಡಿಕೊಡಬಹುದು. ಆದರೆ, ಇದು ಕೈಗೂಡುತ್ತಾ ಕಾದುನೋಡಬೇಕು ಎನ್ನುತ್ತಿದ್ದಾರೆ ವಿಶ್ಲೇಷಕರು.

ರೋಹಿತ್-ಗಿಲ್: ಇನ್ನೊಂದು ತುದಿಯಲ್ಲಿ ಈ ಸರಣಿಯಲ್ಲಿ ರೋಹಿತ್ ಶರ್ಮಾ ಜೊತೆ ಶುಭ್​​ಮನ್ ಗಿಲ್ ಇನ್ನಿಂಗ್ಸ್ ತೆರೆಯುವ ಸಾಧ್ಯತೆಯೂ ಇದೆ. ಗಿಲ್ ಇನ್ನಿಂಗ್ಸ್ ಆರಂಭಿಕರಾಗಿ ನಿರಂತರವಾಗಿ ಕಣಕ್ಕಿಳಿದವರು. ತಾಳ್ಮೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್​ ಆಡುವ ಗಿಲ್, ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಬಹುದು ಅನ್ನೋದು. ಆದರೆ, ರೋಹಿತ್ ಜೊತೆಗೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದರೆ ಗಿಲ್ 3ನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಗಿಲ್ 3 ರಲ್ಲಿ ಆಡಿದರೆ, ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿಯಬೇಕಾಗುತ್ತದೆ. ಆದರೆ, ಈವರೆಗಿನ ಚುಟುಕು ಸರಣಿಯಲ್ಲಿ ಕೊಹ್ಲಿ 4ನೇ ಸ್ಥಾನದಲ್ಲಿ ಬ್ಯಾಟ್ ಮಾಡಿರುವ ಉದಾಹರಣೆ ಇಲ್ಲ. ಹಾಗಾಗಿ, ಗಿಲ್ ಅಥವಾ ಜೈಸ್ವಾಲ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಪ್ಲೇಯಿಂಗ್ 11ರಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಅನ್ನೋದು ವಿಶ್ಲೇಷಕರ ಮಾತು.

ರೋಹಿತ್-ಕೊಹ್ಲಿ: ಇದರ ಹೊರತಾಗಿ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಕೂಡ ಇನ್ನಿಂಗ್ಸ್ ತೆರೆಯಬಹುದು. ಹಲವು ಸಂದರ್ಭಗಳಲ್ಲಿ ಇನ್ನಿಂಗ್ಸ್ ಆರಂಭಿಸಿರುವ ಕೊಹ್ಲಿ, ಈ ಸರಣಿಯಲ್ಲಿ ರೋಹಿತ್ ಜೊತೆಗೆ ಕಣಕ್ಕಿಳಿಯುವುದನ್ನು ನೋಡಬಹುದು. ಐಪಿಎಲ್‌ ಅವರ ಇನ್ನಿಂಗ್​ ಆರಂಭಕ್ಕೆ ಉದಾಹರಣೆ. ಒಂದು ವೇಳೆ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರೆ, ಗಿಲ್ ಅಥವಾ ಯಶಸ್ವಿ ಇಬ್ಬರಲ್ಲಿ ಒಬ್ಬರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ.

ಆದರೆ, ಈ ತಂತ್ರಗಾರಿಕೆ ಕೈಗೂಡುವ ಸಾಧ್ಯತೆ ವಿರಳ. ಕಾರಣ, ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಫಿಟ್​ ಆಗಿದ್ದಾರೆ. ಕೊಹ್ಲಿ ಇನ್ನಿಂಗ್ಸ್ ಆರಂಭಿಸುವುದರಿಂದ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಬಹುದು. ಒಂದು ವೇಳೆ ತಂಡ ಆರಂಭಿಕ ಆಘಾತ ಎದುರಿಸಿದರೆ ವಿರಾಟ್​ ಪರಿಸ್ಥಿತಿಯನ್ನು ನಿಭಾಯಿಸಬಲ್ಲರು. ಹಾಗಾಗಿ ಇದು ಕೂಡ ಕೈಗೂಡದೇ ಇರಬಹುದು ಅನ್ನೋದು ವಿಶ್ಲೇಷಕರ ಲೆಕ್ಕಾಚಾರ. ಸದ್ಯಕ್ಕೆ ಯಾರನ್ನು ಯಾವ ಕ್ರಮಾಂಕದಲ್ಲಿ ಆಡಿಸಿದರೆ ತಂಡಕ್ಕೆ ಲಾಭ ಎಂಬ ಲೆಕ್ಕಾಚಾರ ನಡೆದಿದ್ದು ಸದ್ಯದಲ್ಲೇ ಇದಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ: ಷಟ್ಲರ್​ ಸಾಚಿ ಜೋಡಿಗೆ ಖೇಲ್ ರತ್ನ: ಶಮಿ, ಶೀತಲ್ ದೇವಿ ಸೇರಿ 26 ಸಾಧಕರಿಗೆ ಅರ್ಜುನ ಪ್ರಶಸ್ತಿ ಪ್ರದಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.