ETV Bharat / sports

ಮೊದಲ ಟಿ20ಗೆ ಸಿದ್ಧತೆ: ಮೈ ಕೊರೆಯುವ ಚಳಿಯಲ್ಲಿ ಟೀಂ ಇಂಡಿಯಾ ತಾಲೀಮು - ಟಿ20 ಸರಣಿ

IND vs AFG 1ST T20 Match: ಮೊಹಾಲಿಯಲ್ಲಿ ಇಂದು ಅಫ್ಘಾನಿಸ್ತಾನದ ವಿರುದ್ಧ ಮೊದಲ ಟಿ20 ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಸನ್ನದ್ಧವಾಗಿದೆ.

IND vs AFG 1ST t20 Match
IND vs AFG 1ST t20 Match
author img

By ETV Bharat Karnataka Team

Published : Jan 11, 2024, 2:28 PM IST

ಪಂಜಾಬ್(ಮೊಹಾಲಿ): ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಆತಿಥೇಯ ಭಾರತ ಮತ್ತು ಪ್ರವಾಸಿ ಅಫ್ಘಾನಿಸ್ತಾನ ತಂಡಗಳು ಇಂದು ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಮೊದಲ ದ್ವಿಪಕ್ಷೀಯ ಸರಣಿ ಇದಾಗಿದ್ದು, ಮೊಹಾಲಿಯ ಐಎಸ್ ಬಿಂದ್ರಾ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿಕೊಂಡಿದೆ. ಚುಮುಚುಮು ಚಳಿಯ ನಡುವೆ ಟೀಂ ಇಂಡಿಯಾ ಆಟಗಾರರು ಬೆಳಿಗ್ಗೆ ಅಭ್ಯಾಸ ನಡೆಸಿದರು.

ಶೀತ, ಮೈ ಕೊರೆಯುವ ಚಳಿಯ ನಡುವೆ ಟೀಂ ಇಂಡಿಯಾ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಎಕ್ಸ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದೆ. ಆಟಗಾರರು ವಿಪರೀತ ಚಳಿಯ ಬಗ್ಗೆ ವಿಡಿಯೋದಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ಮೊಹಾಲಿಯಲ್ಲಿ ಈಗ ಎಷ್ಟು ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ ಎಂದು ಅಕ್ಷರ್ ಪಟೇಲ್ ತಮ್ಮ ಪಕ್ಕದಲ್ಲಿದ್ದ ಸಹಆಟಗಾರನನ್ನು ಕೇಳಿದಾಗ, ಅವರು 12 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದಾಗಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಟೀಂ ಇಂಡಿಯಾದ ಎಲ್ಲ ಆಟಗಾರರು ಸ್ವೆಟರ್, ಗ್ಲೌಸ್​ಗಳನ್ನು ತೊಟ್ಟು ಅಭ್ಯಾಸದಲ್ಲಿ ನಿರತರಾಗಿರುವುದನ್ನು ಕಾಣಬಹುದು. ಕೊರೆವ ಚಳಿಯನ್ನು ತಾಳಲಾರದೇ ಆಟಗಾರರು ತಮ್ಮ ಕೈಗಳನ್ನು ಉಜ್ಜಿಕೊಳ್ಳುತ್ತಿರುವ ದೃಶ್ಯವನ್ನೂ ಸಹ ನಾವು ನೋಡಬಹುದು.

ಕೋಚ್ ರಾಹುಲ್ ದ್ರಾವಿಡ್​ ಸೇರಿದಂತೆ ಅರ್ಶ್‌ದೀಪ್ ಸಿಂಗ್, ಶುಭ್​ಮನ್​ ಗಿಲ್​, ರಿಂಕು ಸಿಂಗ್, ಶಿವಂ ದುಬೆ, ಕುಲದೀಪ್, ತಿಲಕ್ ವರ್ಮಾ, ವಾಷಿಂಗ್ಟನ್​ ಸುಂದರ್, ರವಿ ಬಿಷ್ಣೋಯಿ, ಆವೇಶ್‌ ಖಾನ್‌, ಕುಲದೀಪ್ ಯಾದವ್ ಮೊಹಾಲಿಯ ಚಳಿ ಬಗ್ಗೆ ತನ್ನ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲೂ ಇಂತಹ ಚಳಿ ನಾನು ನೋಡಿಲ್ಲ ಎಂದರೆ, ಅಕ್ಸರ್ ಪಟೇಲ್, ಆವೇಶ್ ಖಾನ್ ಮುಂತಾದವರು ಇದು ಮೈನಸ್ ಡಿಗ್ರಿಯಲ್ಲ, ಅದಕ್ಕಿಂತಲೂ ಕಡಿಮೆಯಿರಬೇಕು ಎಂದು ತಮಾಷೆ ಮಾಡಿರುವುದು ವಿಡಿಯೋದಲ್ಲಿದೆ. ಕಠಿಣ ಅಭ್ಯಾಸ ನಡೆಸುತ್ತಿರುವ ಟೀಂ ಇಂಡಿಯಾಗೆ ನೆಟಿಜನ್​ಗಳು ವಿಶ್​ ಮಾಡುತ್ತಿದ್ದಾರೆ.

ಪಿಚ್ ವರದಿ: ಮೊಹಾಲಿಯ ಮೈದಾನ ಬ್ಯಾಟಿಂಗ್‌ಗೆ ಉತ್ತಮ ಎಂದು ಪರಿಗಣಿಸಲಾಗಿದೆ. ಈ ಪಿಚ್‌ನಲ್ಲಿ ದೊಡ್ಡ ಮೊತ್ತವನ್ನು ಕಟ್ಟಬಹುದು. ಈ ಮೈದಾನದಲ್ಲಿ ಇದುವರೆಗೆ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ. ಭಾರತ ಇಲ್ಲಿ 4 ಪಂದ್ಯಗಳನ್ನು ಆಡಿದ್ದು, 3 ಪಂದ್ಯಗಳನ್ನು ಗೆದ್ದಿದ್ದರೆ, 1 ಪಂದ್ಯದಲ್ಲಿ ಸೋಲು ಕಂಡಿದೆ.

ಹವಾಮಾನ ವರದಿ: ಮೊಹಾಲಿಯಲ್ಲಿ ವಿಪರೀತ ಚಳಿ ಇದೆ. ಮಂಜು ಮುಸುಕಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ. ಪ್ರೇಕ್ಷಕರು ಇಡೀ ಪಂದ್ಯವನ್ನು ವೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸಂಜೆ 7ರಿಂದ ಪಂದ್ಯ ಆರಂಭಗೊಳ್ಳಲಿದೆ.

ಮುಖಾಮುಖಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇದುವರೆಗೆ ಒಟ್ಟು 5 ಪಂದ್ಯಗಳು ನಡೆದಿವೆ. ಈ ಪೈಕಿ 4ರಲ್ಲಿ ಭಾರತ ತಂಡ ಗೆದ್ದಿದ್ದು, ಒಂದು ಪಂದ್ಯ ರದ್ದಾಗಿದೆ. ಅಫ್ಘಾನಿಸ್ತಾನ ತಂಡ ಇದುವರೆಗೆ ಭಾರತದ ವಿರುದ್ಧ ಯಾವುದೇ ಪಂದ್ಯವನ್ನೂ ಗೆದ್ದಿಲ್ಲ.

ಭಾರತ ತಂಡದ ಸಂಭಾವ್ಯ ಆಟಗಾರರು: ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.

ಅಫ್ಘಾನಿಸ್ತಾನ ತಂಡದ ಸಂಭಾವ್ಯ ಆಟಗಾರರು: ಇಬ್ರಾಹಿಂ ಝದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಕ್ರಮ್ ಅಲಿಖಿಲ್, ಹಜರತುಲ್ಲಾ ಝಜೈ, ರಹಮತ್ ಷಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜ್ಮುಲ್ಲಾ ಉಮರ್ಜಾಯ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾಲ್, ಫಜಲ್ ಹಕ್ಮಾನ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್, ಖೈಸ್ ಅಹ್ಮದ್, ಗುಲ್ಬದಿನ್ ನೈಬ್.

ಇದನ್ನೂ ಓದಿ: ಅಗ್ನಿಪರೀಕ್ಷೆ ಗೆಲ್ತಾರಾ ವಿರಾಟ್ ಕೊಹ್ಲಿ​, ರೋಹಿತ್​ ಶರ್ಮಾ?: ಸಾಮರ್ಥ್ಯ ಸಾಬೀತಿಗೆ ಆಫ್ಘನ್​ ಸರಣಿ ವೇದಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.