ಮುಂಬೈ : ಲಯ ಕಳೆದುಕೊಂಡಿರುವ ಭಾರತದ ಹಿರಿಯ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರಿಗೆ ತಂಡದ ಸಂಪೂರ್ಣ ಬೆಂಬಲಿವಿದೆ. ಶುಕ್ರವಾರದಿಂದ ಮುಂಬೈನಲ್ಲಿ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಅವರಿಂದ ಒಳ್ಳೆಯ ಪ್ರದರ್ಶನ ಬರಲಿದೆ.
ಅವರಿಬ್ಬರೂ ಫಾರ್ಮ್‌ಗೆ ಬೌನ್ಸ್ಬ್ಯಾಕ್ ಮಾಡಲು ಕೇವಲ ಒಂದು ಇನ್ನಿಂಗ್ಸ್ ದೂರದಲ್ಲಿದ್ದಾರೆ ಎಂದು ಭಾರತದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಅಭಿಪ್ರಾಯಪಟ್ಟಿದ್ದಾರೆ. 2021ರಲ್ಲಿ ರಹಾನೆ 21 ಇನ್ನಿಂಗ್ಸ್ಗಳಿಂದ 19ರ ಸರಾಸರಿಯಲ್ಲಿ 411 ರನ್ಗಳಿಸಿದ್ದಾರೆ.
ಇದರಲ್ಲಿ 2 ಅರ್ಧಶತಕ ಸೇರಿವೆ. ಇನ್ನು ಪೂಜಾರಾ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ 193 ರನ್ ಸಿಡಿಸಿದ್ದೆ ಕೊನೆಯ ಶತಕವಾಗಿದೆ. ಕಿವೀಶ್ ವಿರುದ್ಧದ ಮೊದಲ ಪಂದ್ಯದಲ್ಲಿ ರಹಾನೆ 35 ಮತ್ತು 4 ರನ್ಗಳಿಸಿದರೆ, ಪೂಜಾರಾ 26 ಮತ್ತು 22 ರನ್ಗಳಿಸಿ ಔಟಾಗಿದ್ದರು.
-
💬 💬 "We can take a lot of positives from the first Test."#TeamIndia Bowling Coach Paras Mhambrey reflects on the side's performance in the first @Paytm #INDvNZ Test in Kanpur. pic.twitter.com/fcE1CnsAJr
— BCCI (@BCCI) December 1, 2021 " class="align-text-top noRightClick twitterSection" data="
">💬 💬 "We can take a lot of positives from the first Test."#TeamIndia Bowling Coach Paras Mhambrey reflects on the side's performance in the first @Paytm #INDvNZ Test in Kanpur. pic.twitter.com/fcE1CnsAJr
— BCCI (@BCCI) December 1, 2021💬 💬 "We can take a lot of positives from the first Test."#TeamIndia Bowling Coach Paras Mhambrey reflects on the side's performance in the first @Paytm #INDvNZ Test in Kanpur. pic.twitter.com/fcE1CnsAJr
— BCCI (@BCCI) December 1, 2021
"ಅಜಿಂಕ್ಯ ಮತ್ತು ಪೂಜಾರ ಅವರ ಹಿಂದೆ ಸಾಕಷ್ಟು ಅನುಭವವಿದೆ ಎಂದು ನಮಗೆ ತಿಳಿದಿದೆ. ಅವರಿಬ್ಬರು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಅವರು ಫಾರ್ಮ್‌ಗೆ ಮರಳಲು ಕೇವಲ ಒಂದು ಇನ್ನಿಂಗ್ಸ್ ದೂರದಲ್ಲಿದ್ದಾರೆ ಎಂದು ನಮಗೆ ಒಂದು ತಂಡವಾಗಿ ತಿಳಿದಿದೆ. ಆದ್ದರಿಂದ, ಇಡೀ ತಂಡ ಅವರ ಹಿಂದೆ ಇದೆ ಮತ್ತು ಪ್ರತಿಯೊಬ್ಬರು ಅವರನ್ನು ಬೆಂಬಲಿಸುತ್ತಾರೆ.
ಅವರು ತಂಡಕ್ಕೆ ತರುವ ಮೌಲ್ಯ ಮತ್ತು ಅನುಭವ ಉತ್ತಮವಾಗಿರುತ್ತದೆ ಎಂಬುದು ನಮಗೆ ತಿಳಿದಿದೆ" ಎಂದು ಮಾಂಬ್ರೆ 2ನೇ ಟೆಸ್ಟ್ಗೂ ಮುನ್ನ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮುಂದುವರಿಸಿ, ಅವರಿಬ್ಬರು ಫಾರ್ಮ್‌ಗೆ ಮರಳಲು ಕೇವಲ ಒಂದು ಇನ್ನಿಂಗ್ಸ್ ದೂರದಲ್ಲಿದ್ದಾರೆ.
ಅದು ನಮಗೆ ತಿಳಿದಿರುವುದರಿಂದಲೇ ನಾವು ಅವರಿಬ್ಬರ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಅವರು ಕ್ರಿಕೆಟ್ ಅನ್ನು ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದು, ತಮಗೇನು ಅಗತ್ಯವಿದೆ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿರುವ ಇಶಾಂತ್ ಶರ್ಮಾಗೂ ಮಾಂಬ್ರೆ ಬೆಂಬಲ ಸೂಚಿಸಿದ್ದು, ಇಶಾಂತ್ ಐಪಿಎಲ್, ವಿಶ್ವಕಪ್ ಸೇರಿದಂತೆ ಕಳೆದ ಕೆಲವು ದಿನಗಳಿದ ಕ್ರಿಕೆಟ್ ಆಡದಿರುವುದರಿಂದ ಹಿನ್ನಡೆ ಅನುಭವಿಸಿದ್ದಾರೆ. ಆದಷ್ಟು ಬೇಗ ಲಯ ಕಂಡುಕೊಳ್ಳಲಿದ್ದಾರೆ ಎಂದು ಹಿರಿಯ ಆಟಗಾರರಿಗೆ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ:ಕನ್ನಡಿಗನಿಗೆ ಜಾಕ್ಪಾಟ್: 1 ಕೋಟಿಯಿಂದ 12 ಕೋಟಿ ರೂ.ಗೆ ರಿಟೈನ್ ಆದ ಮಯಾಂಕ್