ಆ್ಯಂಟಿಗುವಾ: 5ನೇ ಅಂಡರ್ 19 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ಕಿರಿಯರ ತಂಡ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
U19 ಕ್ರಿಕೆಟ್ನಲ್ಲಿ ಭಾರತ ತಂಡ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಭಾರತ 4 ಟ್ರೋಫಿ ಗೆದ್ದಿದ್ದರೆ, 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 1988ರ ಮೊದಲ ಆವೃತ್ತಿ ಸೇರಿದಂತೆ ಒಟ್ಟು 3 ಬಾರಿ ಚಾಂಪಿಯನ್ ಆಗಿ 2ನೇ ಸ್ಥಾನದಲ್ಲಿದೆ. ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ನಾಲ್ಕರ ಘಟ್ಟದ ಪಂದ್ಯವ್ನು ಭಾರತ ಗೆದ್ದರೆ 5 ಬೇ ಬಾರಿ ಪ್ರಶಸ್ತಿ ಎತ್ತಿ ಹಿಡಿದ ತಂಡವಾಗಲಿದೆ.
-
A look at India U19's Playing XI 🔽
— BCCI (@BCCI) February 2, 2022 " class="align-text-top noRightClick twitterSection" data="
Follow the match ➡️ https://t.co/tpXk8oOLhY#U19CWC #BoysInBlue #INDvAUS pic.twitter.com/dgioMbkYNT
">A look at India U19's Playing XI 🔽
— BCCI (@BCCI) February 2, 2022
Follow the match ➡️ https://t.co/tpXk8oOLhY#U19CWC #BoysInBlue #INDvAUS pic.twitter.com/dgioMbkYNTA look at India U19's Playing XI 🔽
— BCCI (@BCCI) February 2, 2022
Follow the match ➡️ https://t.co/tpXk8oOLhY#U19CWC #BoysInBlue #INDvAUS pic.twitter.com/dgioMbkYNT
2000ದಲ್ಲಿ ಮೊಹಮ್ಮದ್ ಕೈಫ್ ನೇತೃತ್ವದಲ್ಲಿ , 2008ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ, 2012ರಲ್ಲಿ ಉನ್ಮುಖ್ತ್ ಚಾಂದ್ ನೇತೃತ್ವದಲ್ಲಿ ಮತ್ತು 2018ರಲ್ಲಿ ಪೃಥ್ವಿ ಶಾ ನೇತೃತ್ವದಲ್ಲಿ ಭಾರತ ತಂಡ ಕಿರಿಯರ ವಿಶ್ವಕಪ್ ಎತ್ತಿ ಹಿಡಿದಿತ್ತು. ಭಾರತ 2006, 2016 ಮತ್ತು 2020ರಲ್ಲಿ ಫೈನಲ್ನಲ್ಲಿ ಸೋಲು ಕಂಡು ರನ್ನರ್ ಅಪ್ ಆಗಿತ್ತು..
ಇತ್ತ ಆಸ್ಟ್ರೇಲಿಯಾ ತಂಡ 1988, 1998 ಮತ್ತು 2010ರಲ್ಲಿ ಚಾಂಪಿಯನ್ ಆಗಿದ್ದರೆ, 2012 ಮತ್ತು 2018ರಲ್ಲಿ ರನ್ನರ್ ಅಪ್ ಆಗಿತ್ತು.