ಅಮೆರಿಕದಲ್ಲೂ ಐಪಿಎಲ್ ಮಾದರಿಯ ಲೀಗ್ ಕ್ರಿಕೆಟ್ ಆರಂಭವಾಗುತ್ತಿದೆ. ಮೇಜರ್ ಲೀಗ್ ಕ್ರಿಕೆಟ್ ಲೀಗ್ಗೆ ಅಮೆರಿಕ ತಯಾರಿ ನಡೆಸುತ್ತಿದ್ದು, ಇದೇ ವರ್ಷ ಜುಲೈ 13 ರಿಂದ 30ರ ವರೆಗೆ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಲೀಗ್ನಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಾಂಚೈಸಿಗಳೇ ಅಲ್ಲಿಯೂ ತಂಡಗಳನ್ನು ಹೊಂದಿವೆ.
ಅಮೆರಿಕಾದಲ್ಲಿ ನಡೆಯಲಿರುವ ಮೇಜರ್ ಲೀಗ್ ಕ್ರಿಕೆಟ್‌ನ (MLC) ಉದ್ಘಾಟನಾ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಆಡಲಿದೆ. ಇದರೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಲಾಸ್ ಏಂಜಲೀಸ್), ಚೆನ್ನೈ ಸೂಪರ್ ಕಿಂಗ್ಸ್ (ಟೆಕ್ಸಾಸ್) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಸಿಯಾಟಲ್) ಸೇರಿದಂತೆ ಪ್ರಮುಖ ಲೀಗ್ ಕ್ರಿಕೆಟ್ ತಂಡಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಲೀಗ್‌ನ ಐತಿಹಾಸಿಕ ಆರಂಭಿಕ ಪಂದ್ಯವು ಜುಲೈ 13, 2023 ರಂದು ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರಿಯಲ್ಲಿ ಹೊಸದಾಗಿ ನಿರ್ಮಿಸಲಾದ ಮೇಜರ್ ಲೀಗ್ ಕ್ರಿಕೆಟ್ ಸ್ಥಳವಾದ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯಲಿದೆ. 2023 ರ ಋತುವಿನಲ್ಲಿ 18 ದಿನಗಳ ಕಾಲ 19 ಪಂದ್ಯಗಳನ್ನು ಆಡಲಾಗುತ್ತದೆ, ಜುಲೈ 30, 2023 ರಂದು ನಡೆಯಲಿರುವ ಮೊದಲ ಮೇಜರ್ ಲೀಗ್ ಕ್ರಿಕೆಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದೆ. ಮೇಜರ್ ಲೀಗ್ ಕ್ರಿಕೆಟ್ ವೇಳಾಪಟ್ಟಿ ಮತ್ತು ಪ್ರಸಾರದ ವಿವರಗಳ ಕುರಿತು ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.
-
Say hello to our picks from the inaugural @MLCricket draft 💙 We’re so excited to get the squad together 🤗🍎🗽#MINewYork #MLC2023 pic.twitter.com/z8uDnPW1ZF
— MI New York (@MINYCricket) March 20, 2023 " class="align-text-top noRightClick twitterSection" data="
">Say hello to our picks from the inaugural @MLCricket draft 💙 We’re so excited to get the squad together 🤗🍎🗽#MINewYork #MLC2023 pic.twitter.com/z8uDnPW1ZF
— MI New York (@MINYCricket) March 20, 2023Say hello to our picks from the inaugural @MLCricket draft 💙 We’re so excited to get the squad together 🤗🍎🗽#MINewYork #MLC2023 pic.twitter.com/z8uDnPW1ZF
— MI New York (@MINYCricket) March 20, 2023
ಅಮೆರಿಕಾದಲ್ಲಿ ನಡೆಯುತ್ತಿರುವ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಸಹ ಒಂದು ತಂಡವನ್ನು ಖರೀಸಿದೆ. ಈ ಮೂಲಕ ಎಂಐ ಐದನೇ ಲೀಗ್ನಲ್ಲಿ ಭಾಗವಹಿಸುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮುಮೆನ್ಸ್ ಪ್ರೀಮಿಯರ್ ಲೀಗ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಂಡಗಳನ್ನು ಹೊಂದಿದೆ ಅಲ್ಲದೇ ಮುಂಬೈ ಇಂಡಿಯನ್ಸ್ ಕೇಪ್ ಟೌನ್ ಎಂಬ ತಂಡವನ್ನು ದಕ್ಷಿಣ ಆಫ್ರಿಕಾ ಟಿ20 ಲೀಗ್ನಲ್ಲಿ ಹಾಗೂ ಎಂಐ ಎಮಿರೇಟ್ಸ್ ಎಂಬ ತಂಡವನ್ನು ಇಂಟರ್ನ್ಯಾಷನಲ್ ಲೀಗ್ ಟಿ20ಯಲ್ಲಿ ಹೊಂದಿದೆ.
ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ನೀತಾ ಎಂ ಅಂಬಾನಿ ಮಾತನಾಡಿ," ಮುಂಬೈ ಇಂಡಿಯನ್ಸ್ ಕುಟುಂಬ ಬೆಳೆಯುತ್ತಿದೆ. ಈ ಕುಟುಂಬಕ್ಕೆ ಸೇರ್ಪಡೆಯಾದ ನ್ಯೂಯಾರ್ಕ್ ಫ್ರಾಂಚೈಸಿಯನ್ನು ನಾನು ಸ್ವಾಗತಿಸುತ್ತೇನೆ. ಅಮೆರಿಕದ ಕ್ರಿಕೆಟ್ ಲೀಗ್ನಲ್ಲಿ ಪ್ರವೇಶ ಪಡೆಯುತ್ತಿರುವ ಬಗ್ಗೆ ಹೆಮ್ಮೆ ಇದೆ. ಮುಂಬೈ ಇಂಡಿಯನ್ಸ್ನ್ನು ಜಾಗತೀಕ ಬ್ರ್ಯಾಂಡ್ ಆಗಿ ಸ್ಥಾಪಿಸಲು ಇದೊಂದು ಹೆಜ್ಜೆ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
"ವಿಶ್ವದಾದ್ಯಂತ 50 ಮಿಲಿಯನ್ ಡಿಜಿಟಲ್ ಅಭಿಮಾನಿಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ಹೆಚ್ಚು ಅನುಸರಿಸುತ್ತಿರುವ ಜಾಗತಿಕ ಕ್ರಿಕೆಟ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ, ವಿಶ್ವದಾದ್ಯಂತ ಮಾರ್ಕ್ಯೂ ಫ್ರಾಂಚೈಸ್ ಲೀಗ್‌ಗಳಲ್ಲಿ ವರ್ಷವಿಡೀ 6 ತಿಂಗಳು #Onefamily ಎಂಬ ಭಾವನೆಯಲ್ಲಿ ತಂಡ ಭಾಗವಹಿಸಲಿದೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
"ಎಂಐ #OneFamily ಪರಿಕಲ್ಪನೆ ಅಡಿಯಲ್ಲಿ ಕ್ರಿಕೆಟನ್ನು ಪ್ರಪಂಚದಾದ್ಯಂತ ವಿಸ್ತರಿಸಲು ಮತ್ತು ಉತ್ತೇಜಿಸಲು ಬದ್ಧವಾಗಿದೆ. ಮುಂಬೈ ಇಂಡಿಯನ್ಸ್ (IPL), ಎಂಐ ಕೇಪ್ ಟೌನ್ (SA20), ಎಂಐ ಎಮಿರೇಟ್ಸ್ (ILT20), ಮತ್ತು ಮುಂಬೈ ಇಂಡಿಯನ್ಸ್ ವನಿತೆಯರು (WPL) ನಂತರ MI ನ್ಯೂಯಾರ್ಕ್ ಐದನೇ ಫ್ರಾಂಚೈಸ್ ಆಗಿರುತ್ತದೆ. ಮೂರು ವಿಭಿನ್ನ ಖಂಡಗಳಲ್ಲಿ, ನಾಲ್ಕು ವಿಭಿನ್ನ ದೇಶಗಳಲ್ಲಿ ಮತ್ತು ಐದು ವಿಭಿನ್ನ ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: WPLನಲ್ಲಿಂದು..: ಕ್ವಾಲಿಫೈಗಾಗಿ ಯುಪಿ ಹೋರಾಟ; ನೇರ ಫೈನಲ್ ಪ್ರವೇಶಕ್ಕೆ ಮುಂಬೈ ಪ್ರಯತ್ನ