ETV Bharat / sports

3 ಫಾರ್ಮೆಟ್‌ ಅಂತಾರಾಷ್ಟ್ರೀಯ ಪಂದ್ಯಗಳ ಹೊರತಾಗಿಯೂ 100ನೇ ಟೆಸ್ಟ್‌ ಸಾಧನೆ: ಕೊಹ್ಲಿ

author img

By

Published : Mar 4, 2022, 12:25 PM IST

100ನೇ ಟೆಸ್ಟ್‌ ಪಂದ್ಯ ಆಡುತ್ತಿರುವ ವಿರಾಟ್‌ ಕೊಹ್ಲಿಗೆ ಬಿಸಿಸಿಐ ಇಂದು ವಿಶೇಷ ಸನ್ಮಾನ ಮಾಡಿದೆ. ಇದೇ ವೇಳೆ ತನ್ನ ಸಾಧನೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದಿದ್ದಾರೆ.

In times of 3 formats, I played 100 Tests; next generation can take that from my career: Kohli
3 ಪಾರ್ಮೆಟ್‌ ಅಂತಾರಾಷ್ಟ್ರೀಯ ಪಂದ್ಯಗಳ ಹೊರತಾಗಿಯೂ 100ನೇ ಟೆಸ್ಟ್‌ ಸಾಧನೆ: ಕೊಹ್ಲಿ

ಮೊಹಾಲಿ: ಪಂಜಾಬ್‌ನ ಮೊಹಾಲಿಯಲ್ಲಿಂದು ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯವನ್ನಾಡುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ 100ನೇ ಟೆಸ್ಟ್‌ ಪಂದ್ಯ ಆಡುತ್ತಿರುವ ಭಾರತದ 12ನೇ ಕ್ರಿಕೆಟರ್‌ ಎಂಬ ಖ್ಯಾತಿಗೆ ಪಾತ್ರರಾದರು.

ಪಂದ್ಯ ಆರಂಭಕ್ಕೂ ಮುನ್ನ ಬಿಸಿಸಿಐ ಕೊಹ್ಲಿ ಅವರಿಗೆ ವಿಶೇಷ ರೀತಿಯಲ್ಲಿ ಸನ್ಮಾನಿಸಿತು. ಬಯೋಬಬಲ್‌ ಕಾರಣದಿಂದಾಗಿ ಟೀಂ ಇಂಡಿಯಾ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ನೆನಪಿನ ಕ್ಯಾಪ್‌ ಮತ್ತು ಪ್ರಶಸ್ತಿಯನ್ನು ನೀಡಿದರು. ಈ ವೇಳೆ ವಿರಾಟ್‌ ಪತ್ನಿ ಅನುಷ್ಕಾ ಕೂಡ ಜೊತೆಗಿದ್ದರು.

ಈ ವೇಳೆ ಮಾತನಾಡಿದ ಚೀಕು, ಇಂದು ನನಗೆ ವಿಶೇಷ ದಿನವಾಗಿದೆ. ನನ್ನ ಪತ್ನಿ ಹಾಗೂ ಸಹೋದರ ಇಲ್ಲಿದ್ದಾರೆ. ಪ್ರತಿಯೊಬ್ಬರು ತುಂಬಾ ಹೆಮ್ಮೆ ಪಡುತ್ತಿದ್ದಾರೆ. ಇದು ನಿಜಕ್ಕೂ ತಂಡದ ಆಟವಾಗಿದ್ದು, ನೀವು ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ. ಇದೇ ವೇಳೆ ಬಿಸಿಸಿಐಗೆ ವಿರಾಟ್‌ ಕೊಹ್ಲಿ ಧನ್ಯವಾದ ಸಲ್ಲಿಸಿದ್ದಾರೆ.

ಕಠಿಣ ಅಂತಾರಾಷ್ಟ್ರೀಯ ವೇಳಾಪಟ್ಟಿಯ ಮೂಲಕ ಎಲ್ಲಾ ಮೂರು ಮಾದರಿಗಳ ಪಂದ್ಯಗಳನ್ನು ಆಡಿದ ಹೊರತಾಗಿಯೂ 100ನೇ ಟೆಸ್ಟ್‌ ಪಂದ್ಯದ ಮೈಲಿಗಲ್ಲನ್ನು ಸಾಧಿಸಬಹುದು. ಮುಂದಿನ ಪೀಳಿಗೆ ಇದನ್ನು ಸ್ಫೂರ್ತಿಯಾಗಿ ಪಡೆಯಬೇಕೆಂದು ನಾನು ಬಯಸುತ್ತೇನೆ ಎಂದು ವಿರಾಟ್‌ ಹೇಳಿದರು.

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕಾರ್ಯದರ್ಶಿ ಜಯ್‌ ಶಾ, ಖಜಾಂಚಿ ಅರುಣ್‌ ಧುಮಲ್‌ ಉಪಸ್ಥಿತರಿದ್ದರು. ಕೋಚ್‌ ರಾಹುಲ್‌ ದ್ರಾವಿಡ್‌ ಸ್ವಾಗತ ಭಾಷಣ ಮಾಡಿದರು.

ಸದ್ಯ ವಿರಾಟ್‌ 100 ಪಂದ್ಯಗಳನ್ನು ಆಡುವ ಮೂಲಕ ಸೌರವ್‌ ಗಂಗೂಲಿ, ದಿಲಿಪ್‌ ವೆಂಗಸರ್ಕಾರ್‌, ಕಪಿಲ್‌ ದೇವ್‌, ಸಚಿನ್‌ ತೆಂಡೂಲ್ಕರ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌, ವೀರೇಂದ್ರ ಸೆಹ್ವಾಗ್​, ಹರ್ಭಜನ್‌ ಸಿಂಗ್‌ ಹಾಗೂ ಇಶಾಂತ್‌ ಶರ್ಮಾ ಅವರ ಪಟ್ಟಿಗೆ ಸೇರಿದರು.

ಇದನ್ನೂ ಓದಿ: ಕೊಹ್ಲಿ ನೂರನೇ ಟೆಸ್ಟ್: ಶ್ರೀಲಂಕಾ ವಿರುದ್ಧ ಟಾಸ್​​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.