ETV Bharat / sports

ಇಂಗ್ಲೆಂಡ್​ ವಿರುದ್ಧ2-1ರಲ್ಲಿ ಸರಣಿ ಗೆದ್ದಿದ್ದೇವೆ ಎನ್ನುವುದು ನನ್ನ ಮನದಲ್ಲಿದೆ : ರೋಹಿತ್ ಶರ್ಮಾ

ಭಾರತ ತಂಡದ ಜೂನಿಯರ್ ಫಿಸಿಯೋ ಯೋಗೇಶ್​ ಪರ್ಮಾರ್​ಗೆ ಕೋವಿಡ್​ 19 ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಮ್ಯಾಂಚೆಸ್ಟರ್​ನಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್​ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಇದೀಗ ಬಿಸಿಸಿಐ 2022ರ ಜುಲೈನಲ್ಲಿ 5ನೇ ಟೆಸ್ಟ್​ ಪಂದ್ಯವನ್ನಾಡಲು ಒಪ್ಪಿಗೆ ಸೂಚಿಸಿದೆ ಎಂದು ಈಗಾಗಲೇ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ.

England vs India test series
ರೋಹಿತ್ ಶರ್ಮಾ
author img

By

Published : Oct 4, 2021, 4:52 PM IST

ದುಬೈ: ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್​ನಲ್ಲಿ ರದ್ದಾಗಿರುವ 5ನೇ ಟೆಸ್ಟ್​ ಸ್ಥಿತಿಯ ಬಗ್ಗೆ ಯಾವುದೇ ಕಲ್ಪನೆಯನ್ನು ಹೊಂದಿಲ್ಲ. ಆದರೆ ಭಾರತ ತಂಡ ಕಠಿಣ ಹೋರಾಟ ನಡೆಸಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ ಎಂಬ ಭಾವನೆ ತಮ್ಮ ಮನದಲ್ಲಿದೆ ಎಂದು ಹೇಳಿದ್ದಾರೆ.

ಭಾರತ ತಂಡದ ಜೂನಿಯರ್ ಫಿಸಿಯೋ ಯೋಗೇಶ್​ ಪರ್ಮಾರ್​ಗೆ ಕೋವಿಡ್​ 19 ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಮ್ಯಾಂಚೆಸ್ಟರ್​ನಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್​ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಇದೀಗ ಬಿಸಿಸಿಐ 2022ರ ಜುಲೈನಲ್ಲಿ 5ನೇ ಟೆಸ್ಟ್​ ಪಂದ್ಯವನ್ನಾಡಲು ಒಪ್ಪಿಗೆ ಸೂಚಿಸಿದೆ ಎಂದು ಈಗಾಗಲೇ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ.

"5ನೇ ಟೆಸ್ಟ್​ ಬಗ್ಗೆ ಏನಾಗುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ. ಮುಂದಿನ ವರ್ಷ ನಾವು ಉಳಿದಿರುವ ಒಂದು ಟೆಸ್ಟ್​ ಪಂದ್ಯವನ್ನು ಆಡಬಹುದು. ಆದರೆ ಪ್ರಸ್ತುತ ನಾವು 2-1ರಲ್ಲಿ ಟೆಸ್ಟ್​ ಸರಣಿಯನ್ನು ಗೆದ್ದಿದ್ದೇವೆ ಎನ್ನುವುದು ನನ್ನ ಮನದಲ್ಲಿದೆ" ಎಂದು ರೋಹಿತ್ ಅಡಿಡಾಸ್​ನ ಇಂಪಾಸಿಬಲ್ ಇಸ್ ನತಿಂಗ್​(Impossible Is Nothing) ಪ್ರಚಾರ ಅಭಿಯಾನವಾದ ವೇಳೆ ತಿಳಿಸಿದ್ದಾರೆ.

ಇಂಗ್ಲೆಂಡ್​ ಸರಣಿಯಲ್ಲಿ ರೋಹಿತ್​ ಒಂದು ಶತಕ ಮತ್ತು 2 ಅರ್ಧಶತಕಗಳ ಸಹಿತ 400 ರನ್​ ಗಳಿಸಿದ್ದಾರೆ. ಇದು ಅತ್ಯುತ್ತಮ ಮೈಲಿಗಲ್ಲಿನ ಸರಣಿಯಾಗಿದೆಯೇ ಎಂದು ಕೇಳಿದ್ದಕ್ಕೆ, ಪ್ರಸ್ತುತ ನನ್ನ ಟೆಸ್ಟ್​ ವೃತ್ತಿ ಜೀವನದಲ್ಲಿ ನೋಡಿದರೆ ಇದೊಂದು ಒಳ್ಳೆಯ ಸರಣಿ. ಆದರೆ ಇದು ನನ್ನ ವೃತ್ತಿ ಜೀವನದ ಶ್ರೇಷ್ಠ ಸರಣಿಯಲ್ಲ. ನನ್ನಿಂದ ಅತ್ಯುತ್ತಮವಾದದ್ದು ಇನ್ನೂ ಬರಬೇಕಿದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕೆಎಲ್​ ರಾಹುಲ್​ಗೆ ನಾಯಕತ್ವ ಕೌಶಲ್ಯಗಳ ಕೊರತೆಗಳಿವೆ: ಅಜಯ್ ಜಡೇಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.