ಚೆನ್ನೈ: ಭಾರತ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆಯುತ್ತಿದ್ದಂತೆ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ಕಪಿಲ್ ದೇವ್ ಹಿಂದಿಕ್ಕಿ ಗರಿಷ್ಠ ವಿಕೆಟ್ ಪಡೆದ ಭಾರತದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳಿಂದ 434 ವಿಕೆಟ್ ಪಡೆದಿದ್ದರು. ಭಾರತದ ಪರ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ(619) ಅಗ್ರ ಸ್ಥಾನದಲ್ಲಿದ್ದಾರೆ.
ಭಾನುವಾರ ಚರಿತ್ ಅಸಲಂಕಾ ವಿಕೆಟ್ ಪಡೆಯುವ ಮೂಲಕ ಅಶ್ವಿನ್ 435ನೇ ಟೆಸ್ಟ್ ವಿಕೆಟ್ ಪಡೆದರು. ಅಶ್ವಿನ್ 85 ಟೆಸ್ಟ್ ಪಂದ್ಯಗಳಿಂದ 435 ವಿಕೆಟ್ ಪಡೆದು, ಈ ಮಾದರಿಯಲ್ಲಿ ಹೆಚ್ಚು ವಿಕೆಟ್ ಪಡೆದಿರುವ ವಿಶ್ವದ 9ನೇ ಬೌಲರ್ ಎನಿಸಿಕೊಂಡಿದ್ದಾರೆ.
-
🎥 🎥 That moment when @ashwinravi99 picked the landmark 4⃣3⃣5⃣th Test wicket 👏 👏 #TeamIndia | #INDvSL | @Paytm pic.twitter.com/RKN3IguW8k
— BCCI (@BCCI) March 6, 2022 " class="align-text-top noRightClick twitterSection" data="
">🎥 🎥 That moment when @ashwinravi99 picked the landmark 4⃣3⃣5⃣th Test wicket 👏 👏 #TeamIndia | #INDvSL | @Paytm pic.twitter.com/RKN3IguW8k
— BCCI (@BCCI) March 6, 2022🎥 🎥 That moment when @ashwinravi99 picked the landmark 4⃣3⃣5⃣th Test wicket 👏 👏 #TeamIndia | #INDvSL | @Paytm pic.twitter.com/RKN3IguW8k
— BCCI (@BCCI) March 6, 2022
ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ನರ್ ಮುರಳೀಧರನ್ 800 ವಿಕೆಟ್ ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್(708), ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್(640), ಭಾರತದ ಅನಿಲ್ ಕುಂಬ್ಳೆ(619), ಆಸ್ಟ್ರೇಲಿಯಾದ ಗ್ಲೇನ್ ಮೆಗ್ಗ್ರಾತ್(563), ಇಂಗ್ಲೆಂಡ್ ಸ್ಟುವರ್ಟ್ ಬ್ರಾಡ್(537) ವಿಂಡೀಸ್ನ ಕರ್ಟ್ನಿ ವಾಲ್ಶ್(519), ದ.ಆಫ್ರಿಕಾದ ಡೇಲ್ ಸ್ಟೇನ್(439) ಮಾತ್ರ ಅಶ್ವಿನ್ಗಿಂತ ಮುಂದಿದ್ದಾರೆ.
ಇದನ್ನೂ ಓದಿ:'ಜಡೇಜಾ ಟೆಸ್ಟ್'! ಲೀಲಾಜಾಲ ಬ್ಯಾಟಿಂಗ್ ಪ್ರದರ್ಶನದ ಬಳಿಕ 5 ವಿಕೆಟ್ ಕಬಳಿಸಿದ 'ಸರ್ ಜಡೇಜಾ'!