ETV Bharat / sports

ಹರಾಜಿನಲ್ಲಿ ಒಳ್ಳೆಯ ಆಟಗಾರರನ್ನು ಖರಿದೀಸಬೇಕೆಂದರೆ ಆರ್​ಸಿಬಿಗೆ ಈತ ನಾಯಕನಾಗ್ಬೇಕು: ಅಜಿತ್ ಅಗರ್ಕರ್​ - ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕತ್ವ

2021ರ ಇಂಡಿಯನ್ ಪ್ರೀಮಿಯರ್​ ಲೀಗ್​ ವೇಳೆ ವಿರಾಟ್​ ಕೊಹ್ಲಿ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ, 2022ರ ಆವೃತ್ತಿಗೂ ಮುನ್ನ ಫ್ರಾಂಚೈಸಿ 15 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ. ಇವರ ಜೊತೆಗೆ ಮ್ಯಾಕ್ಸ್​ವೆಲ್ 11 ಕೋಟಿ ರೂ. ಮತ್ತು ಸಿರಾಜ್​ರನ್ನು 7 ಕೋಟಿ ರೂಗಳಿಗೆ ರಿಟೈನ್ ಮಾಡಿಕೊಂಡಿದೆ.

Ajit Agarkar on RCB
ಆರ್​ಸಿಬಿ ನಾಯಕತ್ವ, ಅಜಿತ್ ಅಗರ್ಕರ್​
author img

By

Published : Feb 7, 2022, 7:20 PM IST

ಮುಂಬೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕತ್ವವನ್ನು ವಹಿಸಿಕೊಂಡರೆ, ಫ್ರಾಂಚೈಸಿಯಲ್ಲಿರುವ ದೊಡ್ಡ ಸಮಸ್ಯೆಗೆ ಸುಲಭವಾದ ಪರಿಹಾರವಾಗಲಿದೆ ಎಂದು ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.

2021ರ ಇಂಡಿಯನ್ ಪ್ರೀಮಿಯರ್​ ಲೀಗ್​ ವೇಳೆ ವಿರಾಟ್​ ಕೊಹ್ಲಿ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ, 2022ರ ಆವೃತ್ತಿಗೂ ಮುನ್ನ ಫ್ರಾಂಚೈಸಿ 15 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ. ಇವರ ಜೊತೆಗೆ ಮ್ಯಾಕ್ಸ್​ವೆಲ್ 11 ಕೋಟಿ ರೂ. ಮತ್ತು ಸಿರಾಜ್​ ಅವರನ್ನು 7 ಕೋಟಿ ರೂಗಳಿಗೆ ರಿಟೈನ್ ಮಾಡಿಕೊಂಡಿದೆ.

ಒಂದು ವೇಳೆ ವಿರಾಟ್​ ಕೊಹ್ಲಿ ನಾಯಕತ್ವ ವಹಿಸಿಕೊಂಡರೆ ಮತ್ತು ಅವರು ಆ ಜವಾಬ್ದಾರಿಯನ್ನು ನಿರ್ವಹಿಸಲು ಸಂತೋಷದಿಂದ ಒಪ್ಪಿಕೊಂಡರೆ ಫ್ರಾಂಚೈಸಿಯಲ್ಲಿರುವ ಗೊಂದಲಕ್ಕೆ ಸುಲಭದ ಪರಿಹಾರ ಸಿಕ್ಕಂತಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಇಷ್ಟು ವರ್ಷಗಳಲ್ಲಿ ಆರ್​ಸಿಬಿಯನ್ನು ನೋಡಿದ್ದೇವೆ, ಅವರು ಇದುವರೆಗೆ 12,13 ಅಥವಾ 14 ಸದಸ್ಯರ ಉತ್ತಮ ತಂಡಕ್ಕಾಗಿ ಒಮ್ಮೆಯೂ ಸಾಕಷ್ಟು ಹಣವನ್ನು ಹೂಡಿಕೆ ಮಾಡಿಲ್ಲ" ಎಂದು ಸ್ಟಾರ್​ ಸ್ಪೋರ್ಟ್ಸ್​ನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಆರ್​ಸಿಬಿ ಯಾವಾಗಲೂ ಅಗ್ರ 3 ಕ್ರಮಾಂಕಗಳ ಮೇಲೆಯೇ ಆಧಾರವಾಗಿರುತ್ತದೆ, ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಆಟಗಾರರನ್ನು ಹೊಂದಿರುವುದಿಲ್ಲ. ನಿಮ್ಮ ಬಳಿ ಸಾಕಷ್ಟು ಹಣವಿಲ್ಲದಿದ್ದಾಗ ಮತ್ತೆ ಅದೇ ತಪ್ಪನ್ನು ಮಾಡಬಾರದರು. ಒಬ್ಬ ಆಟಗಾರ ಎಷ್ಟೇ ಉತ್ತಮನಾಗಿದ್ದರು ಅಥವಾ ಆತ ನಿಮಗೆ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಎನಿಸಿದರೂ ಸಹ, ನಿಮ್ಮಲ್ಲಿರುವ ಸೀಮಿತ ಹಣದಲ್ಲಿ ಬಹುಪಾಲನ್ನು ವಿನಿಯೋಗಿಸಬಾರದು, ಹಾಗೆ ಮಾಡಿದರೆ ನೀವು ಎಂದಿಗೂ ಟೂರ್ನಮೆಂಟ್​ ಗೆಲ್ಲುವುದಿಲ್ಲ ಎಂದು ಮಾಜಿ ವೇಗಿ ಹೇಳಿದ್ದಾರೆ.

ಅಗರ್ಕರ್​ ಮಾತಿನ ಅರ್ಥವೆಂದರೆ, ಈಗಾಗಲೆ 3 ಆಟಗಾರರಿಗೆ ಸಾಕಷ್ಟು ಹಣವನ್ನು ವ್ಯಯ ಮಾಡಲಾಗಿದೆ, ಒಂದು ವೇಳೆ ನಾಯಕನಿಗಾಗಿ 10-15 ಕೋಟಿ ರೂ ಹಣವನ್ನು ಹೂಡಿದರೆ ಪರ್ಸ್​ ಖಾಲಿಯಾಗಲಿದ್ದು, ತಂಡಕ್ಕೆ ಅಗತ್ಯವಿರುವ 10 ರಿಂದ 12 ಉತ್ತಮ ಆಟಗಾರರನ್ನು ಖರೀದಿಸಲು ಕಷ್ಟವಾಗುತ್ತದೆ. ಹಾಗಾಗಿ ಕೊಹ್ಲಿ ಮತ್ತೆ ನಾಯಕತ್ವವಹಿಸಿಕೊಂಡರೆ ಹೊಸ ನಾಯಕನಿಗಾಗಿ ಹೂಡವ ಹಣದಿಂದ ಮೂರು ನಾಲ್ಕು ಉತ್ತಮ ಆಟಗಾರರನ್ನು ಖರೀದಿಸಬಹುದು ಎನ್ನುವುದಾಗಿದೆ.

ಆರ್​ಸಿಬಿ ತನ್ನ 90 ಕೋಟಿರೂ ಪರ್ಸ್​ನಲ್ಲಿ ಈಗಾಗಲೆ 33 ಕೋಟಿ ಬಳಸಿಕೊಂಡಿದೆ. ಉಳಿದ 20-22 ಆಟಗಾರನ್ನು ಖರೀದಿಸಲು 57 ಕೋಟಿ ರೂ ಮಾತ್ರ ಉಳಿದಿದೆ.

ಇದನ್ನೂ ಓದಿ:ಐಪಿಎಲ್​ 2022 : ತಂಡದ ಅಧಿಕೃತ ಹೆಸರನ್ನು ಬಹಿರಂಗಗೊಳಿಸಿದ ಅಹ್ಮದಾಬಾದ್​ ಫ್ರಾಂಚೈಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.