ETV Bharat / sports

ಅದು ಯಾರೇ ಆಗಲಿ, ಕೊರೊನಾ ಪಾಸಿಟಿವ್ ಬಂದ್ರೆ ಇಂಗ್ಲೆಂಡ್ ಪ್ರವಾಸದಿಂದ ಗೇಟ್​ ಪಾಸ್: ಬಿಸಿಸಿಐ ಎಚ್ಚರಿಕೆ - India tour of England

ಈಗಾಗಲೇ ಪ್ರವಾಸಕ್ಕಾಗಿ 20 ಸದಸ್ಯರ ತಂಡ ಮತ್ತು ಹೆಚ್ಚುವರಿ ಆಟಗಾರರ ಹೆಸರನ್ನು ಬಿಸಿಸಿಐ ಘೋಷಣೆ ಮಾಡಿದೆ. ಭಾರತದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವವರು ಬಹಳ ಎಚ್ಚರಿಕೆಯಿಂದಿರಲು ಬಿಸಿಸಿಐ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಸೌರವ್ ಗಂಗೂಲಿ
ಸೌರವ್ ಗಂಗೂಲಿ
author img

By

Published : May 11, 2021, 5:13 PM IST

ಮುಂಬೈ: ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಎರಡೂವರೆ ತಿಂಗಳ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಕ್ಕೂ ಮುನ್ನ ಆಯ್ಕೆ ಯಾಗಿರುವ ಆಟಗಾರರಿಗೆ ಕೊರೊನಾ ಕಾಣಿಸಿಕೊಂಡರೆ ಅವರನ್ನು ಸರಣಿಯಿಂದಲೇ ಕೈಬಿಡಲಾಗುವುದು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ.

ಈಗಾಗಲೇ ಪ್ರವಾಸಕ್ಕಾಗಿ 20 ಸದಸ್ಯರ ತಂಡ ಮತ್ತು ಹೆಚ್ಚುವರಿ ಆಟಗಾರರ ಹೆಸರನ್ನು ಬಿಸಿಸಿಐ ಘೋಷಣೆ ಮಾಡಿದೆ. ಭಾರತದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವವರು ಬಹಳ ಎಚ್ಚರಿಕೆಯಿಂದಿರಲು ಬಿಸಿಸಿಐ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ವರದಿಯ ಪ್ರಕಾರ, ವೈರಸ್​ನಿಂದ ದೂರವಿರುವುದಕ್ಕಾಗಿ ಮನೆಯಲ್ಲೇ ಇರಬೇಕೆಂದು ಬಿಸಿಸಿಐ ತಿಳಿಸಿದೆ. ಒಂದು ವೇಳೆ ಯಾರಿಗಾದರೂ ಕೋವಿಡ್ ಸೋಂಕು ತಗುಲಿದರೆ ಅವರು ಚೇತರಿಸಿಕೊಂಡ ನಂತರ ಪ್ರತ್ಯೇಕ ಚಾರ್ಟರ್ ಫ್ಲೈಟ್​ ಒದಗಿಸಿಕೊಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

" ಇಂಗ್ಲೆಂಡ್​ ಪ್ರವಾಸಕ್ಕಾಗಿ ವಿಮಾನವೇರಲು ಮುಂಬೈಗೆ ಆಗಮಿಸಿದಾಗ ಪಾಸಿಟಿವ್ ಬಂದರೆ ಅವರಿಗಾಗಿ ಪ್ರತ್ಯೇಕ ಚಾರ್ಟರ್ ಫ್ಲೈಟ್ ಏರ್ಪಡಿಸಲಾಗುವುದಿಲ್ಲ" ಎಂದು ಬೋರ್ಡ್ ತಿಳಿಸಿದೆ.

ಮುಂಬೈ ಬಿಡುವ ಮುನ್ನ ಎಲ್ಲ ಆಟಗಾರರು, ಸಹಾಯಕ ಸಿಬ್ಬಂದಿಗಳು ಮತ್ತು ಕುಟುಂಬಸ್ಥರು ನೆಗೆಟಿವ್ ವರದಿಯನ್ನು ಪಡೆಯಬೇಕಿರುತ್ತದೆ. ಬಯೋಬಬಲ್​ಗೆ ಸೋಂಕುರಹಿತವಾಗಿ ಸೇರಬೇಕಾಗುತ್ತದೆ. ಅಲ್ಲದೇ ಈಗಾಗಲೆ ಲಸಿಕೆ ಪಡೆದಿರುವ ಆಟಗಾರರಿಗೆ ಇಂಗ್ಲೆಂಡ್​ನಲ್ಲಿ ಕೋವಿಶೀಲ್ಡ್ ಮಾತ್ರ ಕೊವಾಕ್ಸಿನ್ ದೊರೆಯುವುದಿಲ್ಲ ಎಂದು ತಿಳಿಸಿದ್ದೇವೆ. ಎರಡನೇ ಲಸಿಕೆ ಅಲ್ಲೆ ನೀಡಲಾಗುತ್ತದೆ ಎಂದು ಬಿಸಿಸಿಐ ದೃಢಪಡಿಸಿದೆ.

ಇದನ್ನು ಓದಿ:IPL-2021 ಮುಂದುವರೆದರೂ ಇಂಗ್ಲೆಂಡ್​ ಆಟಗಾರರು ಆಡುವುದು ಡೌಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.