ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಟಿ ಬ್ರೇಕ್ ವೇಳೆಗೆ ಆಸ್ಟ್ರೇಲಿಯಾ ಉತ್ತಮ ಕಮ್ಬ್ಯಾಕ್ ಮಾಡಿದೆ. ದಿನದ ಎರಡನೇ ಸೆಷನ್ನಲ್ಲಿ ಕೇವಲ ಒಂದು ವಿಕೆಟ್ ಬಿಟ್ಟುಕೊಟ್ಟು 97 ರನ್ ಕಲೆಹಾಕಿದೆ. ಎರಡನೇ ಸೆಷ್ನ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದೆ. ಪ್ರಸ್ತುತ ಕ್ರೀಸ್ನಲ್ಲಿ ಸ್ಮಿತ್ ಮತ್ತು ಹೆಡ್ ಇದ್ದಾರೆ.
ಮೊದಲ ಸೆಷನ್ನಲ್ಲಿ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಅವರು ವಿಕೆಟ್ ಒಪ್ಪಿಸಿದ್ದರು. ಎರಡನೇ ಸೆಷನ್ನಲ್ಲಿ ಮಾರ್ನಸ್ ಲಬುಶೇನ್ ಶಮಿಗೆ ಕ್ಲೀನ್ ಬೌಲ್ಡ್ ಆದರು. ಎರಡು ವಿಕೆಟ್ ಪತನದ ನಂತರ ಪಿಚ್ ಅರಿತು ಸ್ಮಿತ್ ಜೊತೆಗೆ ಇನ್ನಿಂಗ್ಸ್ ಬೆಳೆಸಲು ನೋಡುತ್ತಿದ್ದ ಮಾರ್ನಸ್ 62 ಬಾಲ್ ಎದುರಿಸಿ 26 ರನ್ ಗಳಿಸಿದ್ದರು. ಮೊಹಮ್ಮದ್ ಶಮಿಯ ಕರಾರುವಾಕ್ಕು ಇನ್ಸ್ವಿಂಗ್ ಬಾಲ್ಗೆ ಲಬುಶೇನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ಗೆ ಮರಳಿದರು.
ನಂತರ ಬಂದ ಟ್ರಾವೆಸ್ ಹೆಡ್ ತಂಡದ ಮೂರು ವಿಕೆಟ್ ಬಿದಿದ್ದರೂ ಅಂಜದೇ ಬ್ಯಾಟಿಂಗ್ ಮಾಡಿದರು. ಸ್ಮಿತ್ ಅವರಿಗೆ ಸಾಥ್ ನೀಡುತ್ತಾ ವಿಕೆಟ್ ಕಾಯ್ದುಕೊಳ್ಳುತ್ತಿದ್ದಾರೆ. ಹೆಡ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿದ್ದು, 75 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ದಾಖಲಿಸಿ ಕ್ರೀಸ್ನಲ್ಲಿದ್ದಾರೆ. ಸ್ಮಿತ್ 102 ಬಾಲ್ ಎದುರಿಸಿ 33 ರನ್ ಗಳಿಸಿ ಆಡುತ್ತಿದ್ದಾರೆ.
ಮೊದಲ ಅವದಿ: ಮೊದಲ ಸೆಷನ್ನಲ್ಲಿ ಭಾರತ ತನ್ನ ಹಿಡಿತವನ್ನು ತೆಗೆದುಕೊಂಡಿದೆ. ಆರಂಭಿಕ ಜೋಡಿಯನ್ನು ಜೊತೆಯಾಟ ಆಡಲು ಬಿಡದೇ ನಾಲ್ಕನೇ ಓವರ್ನಲ್ಲೇ ಖವಾಜಾ ಅವರ ವಿಕೆಟ್ನ್ನು ಸಿರಾಜ್ ಪಡೆದರು. ನಂತರ 43 ರನ್ ಗಳಿಸಿ ಆಡುತ್ತಿದ್ದ ವಾರ್ನರ್ಗೆ ಶಾರ್ದೂಲ್ ಪೆವಿಲಿಯನ್ ದಾರಿ ತೋರಿಸಿದರು. ಇದರಿಂದ ಊಟದ ವಿರಾಮದ ವೇಳೆಗೆ 23 ಓವರ್ಗೆ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿತ್ತು.
-
It's Tea on the opening Day of the #WTC23 Final!
— BCCI (@BCCI) June 7, 2023 " class="align-text-top noRightClick twitterSection" data="
A wicket for #TeamIndia in the Second Session as Australia moved to 170/3.
Stay Tuned for the Third & Final Session of Day 1.
Scorecard - https://t.co/0nYl21oYkY pic.twitter.com/WrRr9iAWVZ
">It's Tea on the opening Day of the #WTC23 Final!
— BCCI (@BCCI) June 7, 2023
A wicket for #TeamIndia in the Second Session as Australia moved to 170/3.
Stay Tuned for the Third & Final Session of Day 1.
Scorecard - https://t.co/0nYl21oYkY pic.twitter.com/WrRr9iAWVZIt's Tea on the opening Day of the #WTC23 Final!
— BCCI (@BCCI) June 7, 2023
A wicket for #TeamIndia in the Second Session as Australia moved to 170/3.
Stay Tuned for the Third & Final Session of Day 1.
Scorecard - https://t.co/0nYl21oYkY pic.twitter.com/WrRr9iAWVZ
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಮೊದಲ ಅವದಿಯಲ್ಲಿ ಆಸಿಸ್ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಟಿ20ಯಲ್ಲಿ ಪವರ್ ಪ್ಲೇ ಸಮಯದಲ್ಲೇ ವಿಕೆಟ್ ತೆಗೆದುಕೊಡುವ ಸ್ಟಾರ್ ಬೌಲರ್ ಸಿರಾಜ್ ಟೆಸ್ಟ್ನಲ್ಲೂ ಅದನ್ನೇ ಮುಂದುವರೆಸಿದ್ದಾರೆ.
ತಮ್ಮ ಎರಡನೇ ಓವರ್ನಲ್ಲೇ ಆರಂಭಿಕ ಉಸ್ಮಾನ್ ಖವಾಜಾ ಅವರ ವಿಕೆಟ್ ಪಡೆದರು. ಮೊದಲ ಓವರ್ನಿಂದ 140+ ವೇಗದಲ್ಲಿ ಬೌಲಿಂಗ್ ಮಾಡಲು ಆರಂಭಿಸಿದ ಸಿರಾಜ್, ಖವಾಜಾ ಅವರ ವಿಕೆಟ್ ಉರುಳಿಸಿದ ಬೌಲ್ನ್ನು ಗಂಟೆಗೆ 144 ಕಿ.ಮೀ ವೇಗದಲ್ಲಿ ಹಾಕಿದ್ದರು. ಇದರಿಂದ ಬ್ಯಾಟ್ ಎಡ್ಜ್ ಆಗಿ ಕೀಪರ್ ಕ್ಯಾಚ್ ಆಗಿತ್ತು.
ನಂತರ ಬಂದ ಮಾರ್ನಸ್ ಲಬುಶೇನ್ ವಾರ್ನರ್ ಜೊತೆಗೆ ಸೇರಿಕೊಂಡರು. ವಾರ್ನರ್ ಏಕದಿನ ಮಾದರಿಯ ಬ್ಯಾಟಿಂಗ್ನ್ನು ಮಾಡಲು ಮುಂದಾದರು. 15ನೇ ಓವರ್ ಮಾಡಲು ಬಂದ ಉಮೇಶ್ ಯಾದವ್ಗೆ ಸತತ ಮೂರು ಬೌಂಡರಿಗಳನ್ನು ಗಳಿಸಿ ರನ್ಗೆ ವೇಗ ಹೆಚ್ಚಿಸಿದರು. ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಇಂಗ್ಲೆಂಡ್ನಲ್ಲಿ ಲಯ ಕಂಡುಕೊಂಡು ಬೌಲಿಂಗ್ ಮಾಡಿದ್ದಾರೆ. ತಮ್ಮ ಎರಡನೇ ಓವರ್ನಲ್ಲೇ ಲಬುಶೇನ್ಗೆ ಎಲ್ಬಿಡಬ್ಲ್ಯೂಗೆ ಕರೆ ನೀಡಿದರು. ಆದರೆ ಅದು ವಿಕೆಟ್ ಮಿಸ್ ಆಗಿದ್ದರಿಂದ ನಾಟೌಟ್ ಆಯಿತು.
ಇದೆಲ್ಲದರ ನಡುವೆ ವಾರ್ನರ್ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದರು. 60 ಬಾಲ್ ಎದುರಿಸಿ 8 ಬೌಂಡರಿಯಿಂದ 43 ರನ್ ಗಳಸಿ ಆಡುತ್ತಿದ್ದರು. ಶಾರ್ದೂಲ್ ಠಾಕೂರ್ ಮಾಡಿದ ಬೌನ್ಸ್ ಬಾಲ್ಗೆ ಬ್ಯಾಕ್ ಪುಶ್ ಮಾಡಲು ವಾರ್ನರ್ ಪ್ರಯತ್ನಿಸಿದರು. ಆದರೆ ಅವರ ಕೈಗೆ ತಗುಲಿ ಹೋದ ಚೆಂಡನ್ನು ಶ್ರೀಕರ್ ಭರತ್ ಉತ್ತಮವಾಗಿ ಕ್ಯಾಚ್ ಆಗಿ ಪರಿವರ್ತಿಸಿದರು.
ವಾಟ್ ಎ ಕ್ಯಾಚ್.. ಶ್ರೀಕರ್ ಭರತ್: ವಾರ್ನರ್ ಅವರ ಕ್ಯಾಚ್ಅನ್ನು ತುಂಬಾ ಚಾಕಚಕ್ಯತೆಯಿಂದ ಭರತ್ ಪಡೆದಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಾರ್ದೂಲ್ ಮಾಡಿದ 21.4 ನೆ ಬಾಲ್ ಬೌನ್ಸ್ ಆಗಿ ವಾರ್ನರ್ ಅವರ ಹಿಂಬದಿಯಲ್ಲಿ ಚಲನೆ ತೆಗೆದುಕೊಂಡಿತ್ತು. ಅದನ್ನು ಅಷ್ಟೇ ನೈಪುಣ್ಯತೆಯಿಂದ ಬ್ಯಾಕ್ ಸೈಡ್ ಫೋರ್ಕಳಿಸಲು ಡೇವಿಡ್ ಪ್ರಯತ್ನಿಸಿದರು. ಆದರೆ ಶ್ರೀಕರ್ ಭರತ್ ಅದನ್ನು ಕ್ಯಾಚ್ ಆಗಿ ಪರಿವರ್ತಿಸಿ ಆಸಿಸ್ನ ಎರಡನೇ ವಿಕೆಟ್ ಪಡೆದರು.
ಇದನ್ನೂ ಓದಿ: ಭಾರತ- ಆಸ್ಟ್ರೇಲಿಯಾ ಟೆಸ್ಟ್ ಚಾಂಪಿಯನ್‌ಶಿಪ್: ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ