ಲಂಡನ್: ಟೆಸ್ಟ್ ಕ್ರಿಕೆಟ್ನ ವಿಶ್ವ ಕಪ್ ಎಂದೇ ಪರಿಗಣಿಸಲಾಗುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇಂದಿನಿಂದ ಆರಂಭವಾಲಿದೆ. ಎರಡು ವರ್ಷಗಳ ಕಾಲ ಟೆಸ್ಟ್ ಮಾನ್ಯತೆ ಇರುವ 9 ತಂಡಗಳು ಆಡಿರುವ ಆಟದಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಆಸ್ಟ್ರೇಲಿಯಾ ಮತ್ತು ಭಾರತ ಏಕೈಕ ಟೆಸ್ಟ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಇದರಲ್ಲಿ ಗೆದ್ದವರು ಮುಂದಿನ ಎರಡು ವರ್ಷಗಳ ಕಾಲ ಐಸಿಸಿ ಟೆಸ್ಟ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದ್ದಾರೆ.
-
Who's winning the Ultimate Test? 🔥#WTC23 | #AUSvIND pic.twitter.com/2xJj7i76Y0
— ICC (@ICC) June 7, 2023 " class="align-text-top noRightClick twitterSection" data="
">Who's winning the Ultimate Test? 🔥#WTC23 | #AUSvIND pic.twitter.com/2xJj7i76Y0
— ICC (@ICC) June 7, 2023Who's winning the Ultimate Test? 🔥#WTC23 | #AUSvIND pic.twitter.com/2xJj7i76Y0
— ICC (@ICC) June 7, 2023
ಏಕದಿನ ಮಾದರಿಯಲ್ಲಿ ಐಸಿಸಿ ನಡೆಸುತ್ತಿದ್ದ ಚಾಂಪಿಯನ್ಸ್ ಟ್ರೋಫಿಯನ್ನು ರದ್ದು ಮಾಡಿ ಟೆಸ್ಟ್ ಚಾಂಪಿಯನ್ಶಿಪ್ನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2019 ರಲ್ಲಿ ಘೋಷಿಸಿತು. ಎರಡು ವರ್ಷಗಳ ಕಾಲ ಟೆಸ್ಟ್ ಆಡಿ ಅದರಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಟಾಪ್ ಎರಡು ತಂಡಗಳು ಫೈನಲ್ ಆಡಲಿದೆ. ಅದರಂತೆ ಇದು ಎರಡನೇ ಚಾಂಪಿಯನ್ಸ್ ಟ್ರೋಫಿ ಫೈನಲ್ ಆಗಿದೆ. 2021 ರಲ್ಲಿ ನಡೆದ ಫೈನಲ್ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಸೆಣಸಿದ್ದವು. ಕಿವೀಸ್ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ನ್ನು ಗೆದ್ದುಕೊಂಡಿತ್ತು.
ಕ್ರಿಕೆಟ್ನ ಮೂಲ ಸ್ವರೂಪ ಎಂದು ಟೆಸ್ಟ್ ಕ್ರಿಕೆಟ್ನ್ನು ಪರಿಗಣಿಸಲಾಗುತ್ತದೆ. ನಂತರ ಕ್ರಿಕೆಟ್ ಬದಲಾವಣೆ ಆಗಿ ಏಕದಿನ, ಟಿ -20 ಮತ್ತು ಈಗ ಟಿ10 ಪಂದ್ಯಗಳೂ ನಡೆಯುತ್ತಿವೆ. ಅತಿ ಹೆಚ್ಚು ಕೌಶಲ ಭರಿತ ಕ್ರಿಕೆಟ್ ಇಲ್ಲಿ ಕಾಣ ಸಿಗುತ್ತದೆ. ದಿನ ಇಡೀ ಕ್ರೀಸ್ನಲ್ಲಿ ನಿಂತು ಆಡುವ ಫೀಟ್ನೆಸ್, ಬಾಲ್ಗಳನ್ನು ಬೌಂಡರಿಗಟ್ಟುವಷ್ಟೇ ಸ್ಕಿಲ್ನಲ್ಲಿ ಚೆಂಡುಗಳನ್ನು ಡ್ರಾಪ್ ಮಾಡಲೂ ಇರಬೇಕಾಗುತ್ತದೆ. ಹೆಚ್ಚು ಸಮಯ ಪಿಚ್ನಲ್ಲಿ ನಿಂತು ಬೌಲಿಂಗ್ನ್ನು ಅರ್ಥೈಸಿಕೊಂಡು ಬ್ಯಾಟಿಂಗ್ ಮಾಡುವುದೇ ಟೆಸ್ಟ್ ಕ್ರಿಕೆಟ್ನ ಸ್ವಾರಸ್ಯ.
ಬಲಿಷ್ಠವಾಗಿದೆ ಆಸಿಸ್: ಕಾಂಗರೂ ಪಡೆ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಮಾರ್ನಸ್ ಲಬುಶೇನ್, ಉಸ್ಮಾನ್ ಖವಾಜಾ, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಆಸಿಸ್ ಪಡೆಯ ಅನುಭವಿ ಫಾರ್ಮ್ ಬ್ಯಾಟರ್ಗಳು. ಕಾಂಗರೂ ಪಡೆಗೆ ಇಂಗ್ಲೆಂಡ್ನ ಪಿಚ್ ಮತ್ತು ಹವಾಮಾನ ಹೊಸತಲ್ಲ. ವರ್ಷಕ್ಕೊಮ್ಮೆ ಆಶಸ್ ಆಡಲು ಆಸಿಸ್ ತಂಡ ಇಂಗ್ಲೆಂಡ್ ಪ್ರವಾಸ ಬೆಳೆಸುವುದರಿಂದ ಪಿಚ್ಗಳ ಬಗ್ಗೆ ಅವರಿಗೆ ಹೆಚ್ಚಿನ ಜ್ಞಾನ ಇದೆ.
-
Ready for the Ultimate Test?
— ICC (@ICC) June 7, 2023 " class="align-text-top noRightClick twitterSection" data="
Players from India and Australia on the magic of the longest format ahead of the #WTC23 final 🏏https://t.co/Fu8shOBVHj
">Ready for the Ultimate Test?
— ICC (@ICC) June 7, 2023
Players from India and Australia on the magic of the longest format ahead of the #WTC23 final 🏏https://t.co/Fu8shOBVHjReady for the Ultimate Test?
— ICC (@ICC) June 7, 2023
Players from India and Australia on the magic of the longest format ahead of the #WTC23 final 🏏https://t.co/Fu8shOBVHj
ಆಸಿಸ್ ಮೇಲೆ ಭಾರತದ ಪ್ರಾಬಲ್ಯ: ಆಸಿಸ್ ವಿರುದ್ಧ ಭಾರತ ಸತತ ಮೂರು ಸರಣಿಗಳನ್ನು ಗೆದ್ದಿದೆ. ಫೆಬ್ರವರಿಯಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಭಾರತ ತನ್ನ ಮೇಲುಗೈ ಸಾಧಿಸಿದೆ. ಇದರ ಜೊತೆಗೆ ಭಾರತ ತಂಡದಲ್ಲಿ ಅನುಭವಿಗಳು ಮತ್ತು ಯುವಕರು ಫಾರ್ಮ್ನಲ್ಲಿದ್ದಾರೆ. ಆರಂಭಿಕ ಶುಭಮನ್ ಗಿಲ್ ಈ ವರ್ಷ ಗೋಲ್ಡನ್ ಫಾರ್ಮ್ನಲ್ಲಿದ್ದಾರೆ. ಅಲ್ಲದೇ ಎರಡು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಮತ್ತೆ ತಮ್ಮ ಲಯಕ್ಕೆ ಮರಳಿದ್ದು, ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಶತಕ ಗಳಿಸಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇದಲ್ಲದೇ ವಿರಾಟ್ ಆಸಿಸ್ ವಿರುದ್ಧ ಬೆಸ್ಟ್ ಅಂಕಿ - ಅಂಶವನ್ನು ಹೊಂದಿದ್ದಾರೆ.
ಇಂಗ್ಲೆಂಡ್ನ ಪಿಚ್ನಲ್ಲಿ ಕಳೆದ ತಿಂಗಳುಗಳಿಂದ ಕೌಂಟಿ ಕ್ರಿಕೆಟ್ ಆಡುತ್ತಿರುವ ಚೇತೇಶ್ವರ ಪೂಜಾರ ಸಹ ಭಾರತಕ್ಕೆ ಭರವಸೆ ಆಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಸಹ ಬ್ಯಾಟಿಂಗ್ ಸಾಥ್ ನೀಡಲಿದ್ದಾರೆ. ಎಡಗೈ ಬ್ಯಾಟರ್ಗಳಿಂಗ ದುಸ್ವಪ್ನವಾಗಿರುವ ಅಶ್ವಿನ್ ಮತ್ತು ಸಿರಾಜ್ ತಂಡದಲ್ಲಿ ಇದ್ದು ಆಸಿಸ್ ತಂಡವನ್ನು ಕಟ್ಟಿಹಾಕಲಿದ್ದಾರೆ.
ಭಾರತದ ಪ್ಲೇಯಿಂಗ್ 11 ಗೊಂದಲ: ರೋಹಿತ್ ಶರ್ಮಾ ಮುಂದೆ 11 ಜನರ ಆಯ್ಕೆ ದೊಡ್ಡ ಗೊಂದಲ ಆಗಿರುವುದಂತೂ ಖಂಡಿತ. ವಿಕೆಟ್ ಕೀಪಿಂಗ್ನಲ್ಲಿ ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ನಡುವೆ ಆಯ್ಕೆಯ ಗೊಂದಲ ಇದೆ. ಅಲ್ಲದೇ ಅಶ್ವಿನ್ ಆಡಿಸುವುದಾ ಅಥವಾ ಇನ್ನೊಬ್ಬ ವೇಗಿ ಕಣಕ್ಕಿಳಿಸುವುದಾ ಎಂಬ ಪ್ರಶ್ನೆಗಳೂ ಇವೆ. ಮೂವರು ವೇಗಿಗಳ ಜೊತೆ ಇಬ್ಬರು ಸ್ಪಿನ್ನರ್ಗಳನ್ನು ಜೋಡಿ ಮಾಡಬಹುದು. ಆದರೆ, ಇಂಗ್ಲೆಂಡ್ ವೇಗಿಗಳ ಪಿಚ್ ಆದ ಕಾರಣ ಸ್ಪಿನ್ನರ್ಗೆ ಅವಕಾಶ ಬೇಕಾ ಎಂಬಂತಾಗಿದೆ.
ಆಸ್ಟ್ರೇಲಿಯಾ ತಂಡದಲ್ಲಿ ಹೆಚ್ಚು ಎಡಗೈ ಬ್ಯಾಟರ್ಗಳಿದ್ದಾರೆ. ಅಶ್ವಿನ್ ಎಡಚರರನ್ನು ಚೆನ್ನಾಗಿ ನಿಯಂತ್ರಿಸುತ್ತಾರೆ. ಹೀಗಾಗಿ ಅಶ್ವಿನ್ಗೆ ಸ್ಥಾನ ನೀಡಿದರೆ ಶಾರ್ದೂಲ್ ಅಥವಾ ಇನ್ನೊಬ್ಬ ವೇಗಿಗೆ ಕೊಕ್ ನೀಡಬೇಕಾಗುತ್ತದೆ.
-
Focus 👌
— BCCI (@BCCI) June 7, 2023 " class="align-text-top noRightClick twitterSection" data="
Intensity ✅
Smiles 😊#TeamIndia geared up for the #WTC23 Final! 👍 👍 pic.twitter.com/wXJipLvDAE
">Focus 👌
— BCCI (@BCCI) June 7, 2023
Intensity ✅
Smiles 😊#TeamIndia geared up for the #WTC23 Final! 👍 👍 pic.twitter.com/wXJipLvDAEFocus 👌
— BCCI (@BCCI) June 7, 2023
Intensity ✅
Smiles 😊#TeamIndia geared up for the #WTC23 Final! 👍 👍 pic.twitter.com/wXJipLvDAE
ಭಾರತ ಹೆಚ್ಚು ಬಲಗೈ ಬ್ಯಾಟರ್ಗಳನ್ನು ಹೊಂದಿರುವ ತಂಡ. ಇದರಿಂದ ಕಳೆದ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕಿವೀಸ್ ವಿರುದ್ಧ ಸೋಲನುಭವಿಸಿತ್ತು. ಅಂದು ಹೆಚ್ಚು ಭಾರತಕ್ಕೆ ನೆರವಾಗಿದ್ದು, ಎಡಗೈ ಬ್ಯಾಟರ್ಗಳಾದ ರಿಷಬ್ ಪಂತ್ ಮತ್ತು ಜಡೇಜಾ. ಹೀಗಾಗಿ ಕೆಎಸ್ ಭರತ್ ಬದಲು ಎಡಗೈ ಬ್ಯಾಟರ್ ಕಿಶನ್ಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅವಕಾಶ ಸಿಗಲಿದೆಯೇ ಎಂಬುದನ್ನು ಸಹ ಊಹಾತ್ಮಕ ವಿಷಯವಾಗಿದೆ. ಟಾಸ್ ನಂತರವಷ್ಟೇ ತಂಡದ ಬಗ್ಗೆ ತಿಳಿಯಲಿದೆ.
ಸಂಭಾವ್ಯ ತಂಡಗಳು ಇಂತಿವೆ..: ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್ / ಶಾರ್ದೂಲ್ ಠಾಕೂರ್, ಉಮೇಶ್ ಯಾದವ್ / ಜಯದೇವ್ ಉನದ್ಕತ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ನಾಥನ್ ಲಿಯಾನ್
ಇದನ್ನೂ ಓದಿ: 50ನೇ ಟೆಸ್ಟ್ನಲ್ಲಿ ಮೊದಲ ಐಸಿಸಿ ಪ್ರಶಸ್ತಿ ಗೆಲ್ತಾರಾ ನಾಯಕ ರೋಹಿತ್ ಶರ್ಮಾ?