ETV Bharat / sports

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ 26,000 ರನ್‌ ಗಳಿಕೆ!

author img

By ETV Bharat Karnataka Team

Published : Oct 19, 2023, 11:02 PM IST

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 26,000 ರನ್ ಪೂರೈಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಹೈದರಾಬಾದ್: ಚೇಸ್​ ಮಾಸ್ಟರ್​ ವಿರಾಟ್​ ಕೊಹ್ಲಿ ಹೆಸರಿಗೆ ತಕ್ಕಂತೆ ಮತ್ತೊಂದು ಇನಿಂಗ್ಸ್​ ಕಟ್ಟಿದರು. ಬಾಂಗ್ಲಾದೇಶ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಶತಕ ಸಾಧನೆ ಮಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಅತಿ ವೇಗವಾಗಿ 26 ಸಾವಿರ ರನ್​ ಪೂರೈಸಿದ ಆಟಗಾರ ಎನಿಸಿಕೊಂಡರು. ಈ ಮೂಲಕ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯನ್ನೂ ಮುರಿದರು.

ಭಾರತದ ಸ್ಟಾರ್ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ 77 ರನ್ ಗಳಿಸಿದಾಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 26 ಸಾವಿರ ರನ್ ಪೂರೈಸಿದರು. 34ರ ಹರೆಯದ ವಿರಾಟ್​ 567 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಈ ಮೈಲಿಗಲ್ಲು ಸಾಧಿಸಲು 601 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು.

ಕ್ರಿಕೆಟ್​ ಜಗತ್ತಿನ ನಾಲ್ಕನೇ ಆಟಗಾರ: ವಿರಾಟ್​ ಕೊಹ್ಲಿ ದಾಖಲಿಸುವ ಒಂದೊಂದು ರನ್ ಕೂಡ ದಾಖಲೆ ಪುಟ ಸೇರುತ್ತಿವೆ. ಬಾಂಗ್ಲಾ ವಿರುದ್ಧ 34 ರನ್​ ಗಳಿಸಿದ್ದಾಗ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ವಿಶ್ವದ ನಾಲ್ಕನೇ ಆಟಗಾರನಾಗಿ ಹೊರಹೊಮ್ಮಿದರು. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲಿಗರಾಗಿದ್ದಾರೆ. ಅವರು 664 ಪಂದ್ಯಗಳ 782 ಇನ್ನಿಂಗ್ಸ್‌ಗಳಲ್ಲಿ 34,357 ರನ್‌ಗಳ ಶಿಖರವನ್ನೇ ಕಟ್ಟಿದ್ದಾರೆ.

ಅವರ ನಂತರ ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ ಅವರು 594 ಪಂದ್ಯಗಳ 666 ಇನ್ನಿಂಗ್ಸ್‌ಗಳಲ್ಲಿ 28,016 ರನ್ ಗಳಿಸಿದ್ದರೆ, ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್ 560 ಪಂದ್ಯಗಳ 668 ಇನ್ನಿಂಗ್ಸ್‌ಗಳಲ್ಲಿ 27,483 ರನ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಗಮನಾರ್ಹವೆಂದರೆ, ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಸಕ್ರಿಯ ಕ್ರಿಕೆಟಿಗ. ಈ ಇನ್ನಿಂಗ್ಸ್‌ಗೂ ಮೊದಲು ವಿರಾಟ್ ಕೊಹ್ಲಿ 510 ಪಂದ್ಯಗಳ 566 ಇನ್ನಿಂಗ್ಸ್‌ಗಳಲ್ಲಿ 77 ಶತಕ ಮತ್ತು 134 ಅರ್ಧಶತಕಗಳೊಂದಿಗೆ 53.78 ರ ಅದ್ಭುತ ಸರಾಸರಿಯಲ್ಲಿ 25,923 ರನ್ ಗಳಿಸಿದ್ದರು.

ಫಿಫ್ಟಿಯಲ್ಲಿ ನಾಲ್ಕನೇ ಸ್ಥಾನ: ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಸಾರ್ವಕಾಲಿಕ ಅತಿ ಹೆಚ್ಚು ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ನಾಲ್ಕನೇ ಸ್ಥಾನ ಪಡೆದರು. ವಿರಾಟ್​ ಈವರೆಗೂ 212 ಫಿಫ್ಟಿ ಬಾರಿಸಿದ್ದಾರೆ. ತೆಂಡೂಲ್ಕರ್ (264), ರಿಕಿ ಪಾಂಟಿಂಗ್ (217), ಮತ್ತು ಕುಮಾರ ಸಂಗಕ್ಕಾರ (216) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​: ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿದ ಕೊಹ್ಲಿ; 'ವಿರಾಟ್‌' ಪ್ರದರ್ಶನಕ್ಕೆ ಮಣಿದ ಬಾಂಗ್ಲಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.