ETV Bharat / sports

ಭಾರತ-ನ್ಯೂಜಿಲೆಂಡ್ ಹಣಾಹಣಿಗೆ ರಾಡ್ ಟಕರ್​; ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯಾ ಪಂದ್ಯಕ್ಕೆ ಮೆನನ್ ಫೀಲ್ಡ್ ಅಂಪೈರ್ - World Cup 2023

World Cup semi final: ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಎರಡು ಸೆಮಿಫೈನಲ್ ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಅಂಪೈರ್​ಗಳನ್ನು ಪ್ರಕಟಿಸಿದೆ.

World Cup semi final
ವಿಶ್ವಕಪ್: ಭಾರತ- ನ್ಯೂಜಿಲೆಂಡ್ ಹಣಾಹಣಿಯಲ್ಲಿ ರಾಡ್ ಟಕ್ಕರ್, ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯಾ ಪಂದ್ಯದಲ್ಲಿ ನಿತಿನ್ ಮೆನನ್ ಫೀಲ್ಡ್ ಅಂಪೈರ್
author img

By ETV Bharat Karnataka Team

Published : Nov 14, 2023, 12:30 PM IST

ಮುಂಬೈ (ಮಹಾರಾಷ್ಟ್ರ): ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಎರಡು ಸೆಮಿಫೈನಲ್ ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಅಂಪೈರ್​ಗಳನ್ನು ಪ್ರಕಟಿಸಿದೆ. ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ಜರುಗಲಿರುವ ಮಾರ್ಕ್ಯೂ ಟೂರ್ನಮೆಂಟ್‌ನ ಬಹು ನಿರೀಕ್ಷಿತ ಮೊದಲ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ಸೆಣಸಿದರೆ, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾವು ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ರಾಡ್ ಟಕರ್ ಹಾಗೂ ಆಸ್ಟ್ರೇಲಿಯಾದ ರಿಚರ್ಡ್ ಇಲ್ಲಿಂಗ್‌ವರ್ತ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ನವೆಂಬರ್ 15ರಂದು ಆಸ್ಟ್ರೇಲಿಯಾದ ಟಕರ್ ಅವರು ತಮ್ಮ ವೃತ್ತಿಜೀವನದ 100ನೇ ಎಕದಿನ ಪಂದ್ಯದ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಇದುವರೆಗೆ 99 ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿದ್ದಾರೆ. ಟಕರ್ ಜನವರಿ 2009ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ ಅಂಪೈರಿಂಗ್​ ಮಾಡಿದರು.

ವಿಶೇಷವೆಂದರೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ರಿಚರ್ಡ್ ಕೆಟಲ್‌ಬರೋ ಫೀಲ್ಡ್ ಅಂಪೈರ್ ಆಗಿರುವುದಿಲ್ಲ. ರಿಚರ್ಡ್ ಕೆಟಲ್‌ಬರೋ ಅವರು 2015 ಮತ್ತು 2019ರಲ್ಲಿ ಭಾರತದ ಸೆಮಿಫೈನಲ್ ಪಂದ್ಯಗಳಲ್ಲಿ ಅಂಪೈರ್ ಆಗಿದ್ದರು. 2019ರ ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ರನೌಟ್ ಆಗಿದ್ದರು. ನಾಕೌಟ್ ಪಂದ್ಯಗಳಲ್ಲಿ ಕೆಟಲ್‌ಬೊರೊ ಭಾರತಕ್ಕೆ ದುರದೃಷ್ಟ ಎಂದು ಭಾರತೀಯ ಅಭಿಮಾನಿಗಳು ಪರಿಗಣಿಸುತ್ತಾರೆ. ಆದರೆ, ಈಗ ಕೆಟಲ್‌ಬರೋ ಭಾರತದ ಪಂದ್ಯದಲ್ಲಿ ಅಂಪೈರಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಆದ್ರೆ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ರಿಚರ್ಡ್ ಕೆಟಲ್‌ಬರೋ ಆನ್-ಫೀಲ್ಡ್ ಅಂಪೈರ್ ಆಗಿರುತ್ತಾರೆ. ಕೆಟಲ್‌ಬರೋ ಅವರು, ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ಅಂಪೈರ್​ ಮಾಡುವ ಮೂಲಕ ತಮ್ಮ 100ನೇ ಪಂದ್ಯವನ್ನು ಪೂರ್ಣಗೊಳಿಸಲಿದ್ದಾರೆ. ಕೆಟಲ್‌ಬರೋ ಅವರಿಗೆ ಇದು ಸತತ ಮೂರನೇ ವಿಶ್ವಕಪ್ ಆಗಿದ್ದು, ಸೆಮಿಫೈನಲ್ ಪಂದ್ಯದಲ್ಲಿ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಭಾರತದ ನಿತಿನ್ ಮೆನನ್ ಅವರು ಆನ್-ಫೀಲ್ಡ್ ಅಂಪೈರ್‌ ಆಗಲಿದ್ದಾರೆ. ಕ್ರಿಸ್ ಗಫ್ನಿ ಥರ್ಡ್​ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಐಸಿಸಿ ಅಭಿನಂದನೆ: ''ವಿಶ್ವಕಪ್ ಸೆಮಿಫೈನಲ್ ಪಂದ್ಯದ ಅಂಪೈರ್​ಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಸೆಮಿಫೈನಲ್ ತಲುಪಿರುವ ತಂಡಗಳು ಇಲ್ಲಿಯವರೆಗೆ ಉನ್ನತ ಮಟ್ಟದ ಪ್ರದರ್ಶನ ನೀಡಿವೆ. ನಾಕೌಟ್ ತಲುಪಿದ ತಂಡಗಳಿಗೆ ನಾನು ಶುಭ ಹಾರೈಸುತ್ತೇವೆ. ಈ ವಿಶ್ವಕಪ್‌ನಲ್ಲಿ ತಮ್ಮ 100ನೇ ಪಂದ್ಯಕ್ಕಾಗಿ ರಾಡ್ ಮತ್ತು ರಿಚರ್ಡ್ ಅವರನ್ನು ಅಭಿನಂದಿಸುತ್ತೇವೆ. ಈ ರೀತಿಯ ಸಾಧನೆಗಳನ್ನು ಸತತವಾಗಿ ಬಲವಾದ ಪ್ರದರ್ಶನಗಳ ಮೂಲಕ ಮಾತ್ರ ಗಳಿಸಲಾಗುತ್ತದೆ'' ಎಂದು ಐಸಿಸಿ ಅಭಿನಂದಿಸಿದೆ.

ಎರಡೂ ಸೆಮಿಫೈನಲ್‌ಗಳ ಅಂಪೈರ್‌ಗಳು:-

ಮೊದಲನೇ ಸೆಮಿ-ಫೈನಲ್: ಭಾರತ- ನ್ಯೂಜಿಲೆಂಡ್, ಬುಧವಾರ 15 ನವೆಂಬರ್, ಮುಂಬೈ

ಆನ್-ಫೀಲ್ಡ್ ಅಂಪೈರ್‌ಗಳು - ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ರಾಡ್ ಟಕರ್
ಥರ್ಡ್​ ಅಂಪೈರ್ - ಜೋಯಲ್ ವಿಲ್ಸನ್
ಫೋರ್ಥ್ ಅಂಪೈರ್ - ಆಡ್ರಿಯನ್ ಹೋಲ್ಡ್‌ಸ್ಟಾಕ್
ಮ್ಯಾಚ್ ರೆಫರಿ - ಆಂಡಿ ಪೈಕ್ರಾಫ್ಟ್

ಎರಡನೇ ಸೆಮಿಫೈನಲ್: ಆಸ್ಟ್ರೇಲಿಯಾ- ದಕ್ಷಿಣ ಆಫ್ರಿಕಾ, ಗುರುವಾರ 16 ನವೆಂಬರ್, ಕೋಲ್ಕತ್ತಾ

ಆನ್-ಫೀಲ್ಡ್ ಅಂಪೈರ್‌ಗಳು - ರಿಚರ್ಡ್ ಕೆಟಲ್‌ಬರೋ ಮತ್ತು ನಿತಿನ್ ಮೆನನ್
ಥರ್ಡ್​ ಅಂಪೈರ್ ಅಂಪೈರ್ - ಕ್ರಿಸ್ ಗಫ್ನಿ
ಫೋರ್ಥ್ ಅಂಪೈರ್ - ಮೈಕೆಲ್ ಗೌಫ್
ಮ್ಯಾಚ್ ರೆಫರಿ - ಜಾವಗಲ್ ಶ್ರೀನಾಥ್

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್: ಕಿವೀಸ್​ ವಿರುದ್ಧದ ಸೆಮೀಸ್​ ಫೈಟ್​ಗೆ ಮುಂಬೈ ತಲುಪಿದ ಟೀಮ್​ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.