ETV Bharat / sports

2003 & 2023ರ ಫೈನಲ್ ಪಂದ್ಯಗಳಲ್ಲಿನ ಸಾಮ್ಯತೆಗಳೇನು? ಕುತೂಹಲಕಾರಿ ಮಾಹಿತಿ ಹಂಚಿಕೊಂಡ ಗೂಗಲ್! - ಗೂಗಲ್ ಎಕ್ಸ್ ನಲ್ಲಿ ಒಂದು ಲಿಸ್ಟ್​ ಶೇರ್

2003 ಮತ್ತು 2023ರ ವಿಶ್ವಕಪ್ ಫೈನಲ್ ಪಂದ್ಯಗಳ ನಡುವಿನ ಕೆಲ ಕುತೂಹಲಕಾರಿ ಸಾಮ್ಯತೆಗಳನ್ನು ಗೂಗಲ್ ಇಂಡಿಯಾ ಶೇರ್ ಮಾಡಿದೆ.

Google India shares similarities between 2003 and 2023 World Cup finals

author img

By ETV Bharat Karnataka Team

Published : Nov 19, 2023, 5:16 PM IST

ನವದೆಹಲಿ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್​ ಪಂದ್ಯದಲ್ಲಿ ಸೆಣಸಾಡುತ್ತಿರುವ ಮಧ್ಯೆ ಗೂಗಲ್ ಇಂಡಿಯಾ ಭಾನುವಾರ 2003 ಮತ್ತು 2023 ರ ನಡುವಿನ ವಿಶ್ವಕಪ್ ಫೈನಲ್​ಗಳ ನಡುವಿನ ಹೋಲಿಕೆಗಳನ್ನು ತೋರಿಸುವ ಕುತೂಹಲಕಾರಿ ಮಾಹಿತಿಗಳ ಪಟ್ಟಿಯನ್ನು ಹಂಚಿಕೊಂಡಿದೆ.

ಗೂಗಲ್ ಎಕ್ಸ್ ನಲ್ಲಿ ಒಂದು ಲಿಸ್ಟ್​ ಶೇರ್ ಮಾಡಿದ್ದು, "ನಾವು ಮತ್ತೆ ಭೇಟಿಯಾಗುತ್ತಿದ್ದೇವೆ, 20 ವರ್ಷಗಳ ನಂತರ #INDvsAUS" ಎಂದು ಇದಕ್ಕೆ ಕ್ಯಾಪ್ಷನ್ ನೀಡಿದೆ. ಗೂಗಲ್ 2023 ಮತ್ತು 2003ರಲ್ಲಿ ವಿಶ್ವಕಪ್ ತಂಡವನ್ನು ಮುನ್ನಡೆಸಲು ರೋಹಿತ್ ಶರ್ಮಾ ಮತ್ತು ಸೌರವ್ ಗಂಗೂಲಿ ಅವರನ್ನು ಮೊದಲ ಬಾರಿಯ ನಾಯಕರು ಎಂದು ಪಟ್ಟಿ ಮಾಡಿದೆ.

2003 ಮತ್ತು 2023ರ ಫೈನಲ್ ಪಂದ್ಯಗಳನ್ನು ನೋಡಿದರೆ ಆಗ ಸಚಿನ್ ತೆಂಡೂಲ್ಕರ್ ಅತ್ಯಧಿಕ ರನ್ ಮಾಡಿದ್ದರೆ ಈ ಬಾರಿ ವಿರಾಟ್​ ಕೊಹ್ಲಿ ಆ ಸ್ಥಾನದಲ್ಲಿದ್ದಾರೆ ಎಂದು ಹೇಳಿದೆ. ಹಾಗೆಯೇ ಆಗ ಸೌರವ್ ಗಂಗೂಲಿ ಮೊದಲ ಬಾರಿಗೆ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದರೆ, ಈ ಬಾರಿ ಆ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ ಎಂದು ಗೂಗಲ್ ಹೇಳಿದೆ.

ಎರಡೂ ಫೈನಲ್ ಪಂದ್ಯಗಳಲ್ಲಿ ರಾಹುಲ್ ಹೆಸರಿನವರು ನಾನ್-ಸೀಸನಲ್ ವಿಕೆಟ್ ಕೀಪರ್ ಆಗಿರುವುದನ್ನು ಗೂಗಲ್ ವಿಶೇಷವಾಗಿ ಗುರುತಿಸಿದೆ. 2003ರಲ್ಲಿ ರಾಹುಲ್ ದ್ರಾವಿಡ್ ಕೀಪಿಂಗ್ ಮಾಡಿದ್ದರು ಹಾಗೂ ಈ ಬಾರಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿದ್ದಾರೆ. ಆಸ್ಟ್ರೇಲಿಯಾ 2003 ರಲ್ಲಿ ಎಲ್ಲಾ ಗ್ರೂಪ್ ಹಂತದ ಪಂದ್ಯಗಳಲ್ಲಿ ಅಜೇಯವಾಗಿತ್ತು ಮತ್ತು ಈ ಬಾರಿ ಅದೇ ರೀತಿಯ ಅನುಕೂಲವನ್ನು ಭಾರತ ಹೊಂದಿದೆ ಎಂದು ಅದು ಹೇಳಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ವಿಶ್ವಕಪ್ 2023 ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ಕ್ರಮವಾಗಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಸೆಮಿಫೈನಲ್ ಪಂದ್ಯಗಳನ್ನು ಆಡಿದ ತಂಡಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಫೈನಲ್ ಆಡುತ್ತಿವೆ.

ಇದನ್ನೂ ಓದಿ : ಸಚಿನ್​ ದಾಖಲೆ ಮುರಿದ ವಿರಾಟ್​; ವಿಶ್ವಕಪ್​ನಲ್ಲಿ ಕೊಹ್ಲಿ ಹೆಸರಿನಲ್ಲಿ ಹೊಸ ಮೈಲಿಗಲ್ಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.