ETV Bharat / sports

ವಿರಾಟ್​ ವಿಕೆಟ್​ ಪಡೆದಾಗ ಲಕ್ಷಾಂತರ ಅಭಿಮಾನಿಗಳ ಮೌನ ಬಹಳ ತೃಪ್ತಿ ನೀಡಿತು: ಆಸ್ಟ್ರೇಲಿಯಾ ನಾಯಕ ಕಮಿನ್ಸ್‌ - ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ

Pat Cummins: ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿದ ನಂತರ ಮಾತನಾಡಿದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, ವಿರಾಟ್ ವಿಕೆಟ್ ಪತನದ ಕ್ಷಣ ಪಂದ್ಯದುದ್ದಕ್ಕೂ ನನಗೆ ಹೆಚ್ಚು ತೃಪ್ತಿ ನೀಡಿತು ಎಂದರು.

Silence of crowd  crowd when Virat got out was most satisfying  pat Cummins  ಲಕ್ಷಾಂತರ ಅಭಿಮಾನಿಗಳ ಮೌನ ನನಗೆ ಬಹಳ ತೃಪ್ತಿ ನೀಡಿತು  ವಿರಾಟ್​ ವಿಕೆಟ್​ ಪಡೆದಾಗ ಲಕ್ಷಾಂತರ ಅಭಿಮಾನಿಗಳ ಮೌನ  ಆಸ್ಟ್ರೇಲಿಯಾ ನಾಯಕ  ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌  ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌  ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ  ಆಸೀಸ್ ವಿಶ್ವಕಪ್ ಗೆದ್ದುಕೊಂಡಿತು
ಆಸ್ಟ್ರೇಲಿಯಾ ನಾಯಕ
author img

By PTI

Published : Nov 21, 2023, 7:24 AM IST

ಅಹಮದಾಬಾದ್​(ಗುಜರಾತ್)​: ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತವನ್ನು ಮಣಿಸಿ ವಿಶ್ವಕಪ್ ಗೆದ್ದುಕೊಂಡಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಮಿನ್ಸ್ ಬಳಗ ಎಲ್ಲಾ ವಿಭಾಗಗಳಲ್ಲೂ ಆತಿಥೇಯರನ್ನು ಸೋಲಿಸಿತು. ಗೆಲುವಿನ ನಂತರ ಮಾತನಾಡಿದ ಕಮಿನ್ಸ್​, "ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡುವ ಮೂಲಕ ತಮ್ಮ ತಂಡವು ಒಂದು ಸೆಕೆಂಡಿನಲ್ಲಿ ಲಕ್ಷಾಂತರ ಪ್ರೇಕ್ಷಕರನ್ನು ಮೌನಗೊಳಿಸಿತು. ಈ ಕ್ಷಣ ನನಗೆ ಅತ್ಯಂತ ತೃಪ್ತಿಕರವಾಗಿತ್ತು" ಎಂದು ಹೇಳಿದ್ದಾರೆ.

"ಕೊಹ್ಲಿ ತಮ್ಮ ಶತಕ ಪೂರ್ಣಗೊಳಿಸುವ ರೀತಿಯಲ್ಲಿ ಕಂಡುಬಂದರು. ಆದರೆ ಆ ಸಮಯದಲ್ಲಿ ಅವರ ವಿಕೆಟ್ ಬೀಳುತ್ತಿದ್ದಂತೆ, ಇಡೀ ಮೈದಾನ ಇದ್ದಕ್ಕಿದ್ದಂತೆ ಮೌನಕ್ಕೆ ಜಾರಿತು. ಇದು ನನಗೆ ತುಂಬಾ ಸಂತೃಪ್ತಿ ನೀಡಿತು" ಎಂದು ತಿಳಿಸಿದರು.

"ಈ ವಿಶ್ವಕಪ್ ಗೆಲುವಿನೊಂದಿಗೆ ನಾನು ಮತ್ತೊಮ್ಮೆ ಏಕದಿನ ಮಾದರಿಯ ಕ್ರಿಕೆಟ್‌ ಪ್ರೀತಿಯಲ್ಲಿ ಬಿದ್ದಿದ್ದೇನೆ. ಈ ಮಾದರಿಯಲ್ಲಿ ಪ್ರತಿಯೊಂದು ಹಂತವೂ ನಿರ್ಣಾಯಕ. ಇದು ದ್ವಿಪಕ್ಷೀಯ ಸರಣಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿರುತ್ತದೆ. ವಿಶ್ವಕಪ್‌ಗೆ ಅದ್ಭುತ ಇತಿಹಾಸವಿದೆ. ಈ ಸಾಧನೆಯ ಸವಿ ನೆನಪು ದೀರ್ಘಕಾಲ ಉಳಿಯುತ್ತದೆ. ಕಳೆದ ಎರಡು ತಿಂಗಳಲ್ಲಿ ಅದ್ಭುತ ಪಂದ್ಯಗಳು ನಡೆದಿವೆ. ಈ ವರ್ಷ ನನಗೆ ಅತ್ಯಂತ ಮಹತ್ವದ್ದಾಗಿದೆ'' ಎಂದು ಕಮಿನ್ಸ್ ಹರ್ಷ ವ್ಯಕ್ತಪಡಿಸಿದರು.

ಇದೇ ವೇಳೆ ಆಸಿಸ್ ಆಟಗಾರರು ಮತ್ತು ಅವರ ಕುಟುಂಬ ಕ್ರಿಕೆಟ್‌ಗಾಗಿ ಮಾಡಿದ ತ್ಯಾಗವನ್ನು ಸ್ಮರಿಸಿದರು. "ನನ್ನ ಕುಟುಂಬ ಈ ಪಂದ್ಯವನ್ನು ಮನೆಯಲ್ಲಿ ವೀಕ್ಷಿಸಿದ್ದಾರೆ. ಈಗಷ್ಟೇ ಅಪ್ಪನಿಂದ ಮೆಸೇಜ್ ಬಂತು. ಅವರು ಎಲ್ಲರಿಗಿಂತ ಹೆಚ್ಚು ಉತ್ಸಾಹಿ. ಈ ಕ್ಷಣಗಳಿಗಾಗಿ ಆಟಗಾರರು ತಮ್ಮ ಪ್ರೀತಿಯ ಕುಟುಂಬಗಳಿಂದ ದೂರವಿರುತ್ತಾರೆ. ನಾನು ಶಾಂತವಾಗಿದ್ದೇನೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಆದರೆ, ಇಂದು ಬೆಳಿಗ್ಗೆ ನಾನು ಸ್ವಲ್ಪ ಒತ್ತಡ ಅನುಭವಿಸಿದೆ. ಹೋಟೆಲ್‌ನಿಂದ ಸಮುದ್ರದಂತೆ ನೀಲಿ ಜೆರ್ಸಿಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಮೈದಾನದ ಕಡೆಗೆ ಬರುತ್ತಿರುವುದನ್ನು ನಾನು ನೋಡಿದೆ. ನಾನು ಟಾಸ್‌ಗೆ ಹೋದಾಗ 1.30 ಲಕ್ಷ ನೀಲಿ ಜೆರ್ಸಿಗಳನ್ನು ನೋಡಿದೆ. ಆ ಅನುಭವವನ್ನು ನಾನು ಎಂದಿಗೂ ಮರೆಯಲಾರೆ. ಒಳ್ಳೆಯ ವಿಷಯವೆಂದರೆ ಅವರು ಇಂದು ಹೆಚ್ಚು ಶಬ್ದ ಸೃಷ್ಟಿಸಲಿಲ್ಲ" ಎಂದು ನಸುನಕ್ಕರು.

ಹೆಡ್​ ಆಯ್ಕೆಯೇ ಸಾಹಸ: ಟ್ರಾವಿಸ್ ಹೆಡ್ ಆಯ್ಕೆ ತಮ್ಮ ಪಾಲಿನ ಸಾಹಸ ಎಂದು ಕಮಿನ್ಸ್ ವಿವರಿಸಿದರು. "ಈ ನಿಟ್ಟಿನಲ್ಲಿ, ಆಯ್ಕೆಗಾರರಾದ ಆಂಡ್ರ್ಯೂ ಮ್ಯಾಕ್‌ಡೊನಾಲ್ಡ್ ಮತ್ತು ಜಾರ್ಜ್ ಬೈಲಿ ಅವರು ಒಂದು ರೀತಿಯ ಜೂಜಾಟವನ್ನೇ ಆಡಿದ್ದಾರೆ. ಪಂದ್ಯಾವಳಿಯಲ್ಲಿ ಅರ್ಧದಷ್ಟು ಪಂದ್ಯಗಳು ಆಡುವವರೆಗೂ ಹೆಡ್​ ಗಾಯದಿಂದಲೇ ಬಳಲುತ್ತಿದ್ದರು. ಆದರೂ ಸಹ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದೇವೆ. ನಮ್ಮ ವೈದ್ಯಕೀಯ ತಂಡ ಅದ್ಭುತ ಕೆಲಸ ಮಾಡಿದೆ. ಆ ನಿರ್ಧಾರ ಸಫಲವಾಗದೇ ಇದ್ದಿದ್ದರೆ ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ ಪಂದ್ಯಾವಳಿಗಳನ್ನು ಗೆಲ್ಲಲು ನಾವು ರಿಸ್ಕ್​ ತೆಗೆದುಕೊಳ್ಳಬೇಕಾಗುತ್ತದೆ" ಎಂದರು

ಇದನ್ನೂ ಓದಿ: ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ 5.9 ಕೋಟಿ ಜನರಿಂದ ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ ವೀಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.