ಲಖನೌ: ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ, ಇಂದಿನ ಪಂದ್ಯದಲ್ಲಿ ಬ್ಯಾಟರ್ಗಳು 30 ರನ್ಗಳ ಕೊರತೆ ಅನುಭವಿಸಿದ್ದಾರೆ ಎಂದು ಹೇಳಿದರು.
ಏಕನಾ ಕ್ರಿಕೆಟ್ ಮೈದಾನದಲ್ಲಿ ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 100 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 87 ರನ್ಗಳ ಇನ್ನಿಂಗ್ಸ್ ಆಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ವೇಳೆ ಮಾತನಾಡಿದ ಅವರು, ಪಂದ್ಯದಲ್ಲಿ ಭಾರತದ ಬೌಲರ್ಗಳು ಉತ್ತಮ ಪ್ರದರ್ಶನ ತೋರಿದರೆ, ಬ್ಯಾಟರ್ಗಳು 30 ರನ್ಗಳ ಹಿನ್ನಡೆ ಸಾಧಿಸಿದ್ದಾರೆ ಎಂದು ಹೇಳಿದರು.
"ಇದೊಂದು ಅದ್ಭುತ ಪಂದ್ಯವಾಗಿತ್ತು. ಟಾಸ್ ಗೆದ್ದ ಆಂಗ್ಲರ ಪಡೆ ಮೊದಲಿಗೆ ಬ್ಯಾಟಿಂಗ್ ಮಾಡಲು ನಮ್ಮ ತಂಡವನ್ನು ಆಹ್ವಾನಿಸಿತು. ನಾವು ದೊಡ್ಡ ಮೊತ್ತವನ್ನು ಕಲೆ ಹಾಕಲು ಯೋಜನೆ ರೂಪಿಸಿದ್ದೆವು. ಆದರೆ, ಇಂಗ್ಲೆಂಡ್ ಉತ್ತಮವಾಗಿ ಬೌಲಿಂಗ್ ಮಾಡಿ ಆರಂಭಿಕ ಮೂರು ವಿಕೆಟ್‌ಗಳನ್ನು ಬಹು ಬೇಗ ಪಡೆಯಿತು. ಒಟ್ಟಾರೆ ಪಂದ್ಯವನ್ನು ನೋಡಿದಾಗ ನಾವು 30 ರನ್ಗಳ ಹಿನ್ನಡೆ ಸಾಧಿಸಿದ್ದೆವು. ಇನ್ನಿಂಗ್ಸ್ ಆರಂಭಗೊಂಡಾಗ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಪಂದ್ಯ ಆರಂಭದಲ್ಲೇ ಒಂದೆರಡು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕು. ಅದನ್ನು ನಮ್ಮ ತಂಡದ ಬೌಲರ್ಗಳ ಇಂಗ್ಲೆಂಡ್ ವಿರುದ್ದ ಮಾಡಿದರು. ಲೈನ್ ಅಂಡ್ ಲೆಂತ್ನಲ್ಲಿ ಬೌಲಿಂಗ್ ಮಾಡಿ ಇಂಗ್ಲೆಂಡ್ ವಿರುದ್ದ ತಂಡವನ್ನು ಗೆಲವಿನ ದಡ ಸೇರಿಸಿದರು ಎಂದು ಹೇಳಿದರು.
ನಿನ್ನೆಯ ಪಂದ್ಯದಲ್ಲಿ ಭಾರತ ನೀಡಿದ್ದ 230 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಸಿಲುಕಿ 129ಕ್ಕೆ ಸರ್ವ ಪತನ ಕಂಡಿತು. ಇದರಿಂದ ಭಾರತ 100 ರನ್ಗಳ ಅಂತರ ಬೃಹತ್ ಗೆಲುವು ದಾಖಲಿಸಿತು. ಭಾರತದ ಪರ ವೇಗಿ ಶಮಿ 4 ವಿಕೆಟ್ ಉರುಳಿಸಿದರೆ, ಬುಮ್ರಾ 3 ಮತ್ತು ಕುಲ್ದೀಪ್ 2 ವಿಕೆಟ್ ಪಡೆದು ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಹಾಲಿ ಚಾಂಪಿಯನ್ ಇಂಗ್ಲೆಂಡ್ 6 ಪಂದ್ಯದಲ್ಲಿ ಸತತ ಐದು ಸೋಲು ಕಂಡು ವಿಶ್ವಕಪ್ನಿಂದ ಹೊರಬಿದ್ದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತದ ಪರ ರೋಹಿತ್ ಶರ್ಮಾ (87) ಮತ್ತು ಸೂರ್ಯಕುಮಾರ್ ಯಾದವ್ (49) ಅವರ ಇನ್ನಿಂಗ್ಸ್ನ ನೆರವಿನಿಂದ ಭಾರತ 50 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 230 ರನ್ ಗಳಿಸಿತ್ತು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಆಂಗ್ಲರ ವಿರುದ್ಧ ಭಾರತಕ್ಕೆ 100 ರನ್ಗಳ ಭರ್ಜರಿ ಗೆಲುವು.. ಸೆಮಿಸ್ಗೆ ರೋಹಿತ್ ಪಡೆ