ETV Bharat / sports

ಪಿಚ್ ಬದಲಾವಣೆ ವಿವಾದ ತಳ್ಳಿಹಾಕಿದ ಕಿವೀಸ್​ ನಾಯಕ; ಭಾರತ ತಂಡಕ್ಕೆ ಅಭಿನಂದಿಸಿದ ಕೇನ್ ವಿಲಿಯಮ್ಸನ್ - ಕಳೆದ ಏಳು ವಾರಗಳಲ್ಲಿ ನಾವು ಅದ್ಭುತ ಪ್ರಯಾಣ

ODI World Cup 2023: ಮುಂಬೈನ ವಾಂಖೆಡೆ ಮೈದಾನದಲ್ಲಿ ಏಕದಿನ ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಆಂಗ್ಲ ಮಾಧ್ಯಮಗಳಲ್ಲಿ ಪಿಚ್​ ವಿವಾದ ಸೃಷ್ಟಿಯಾಗಿತ್ತು.

New Zealand skipper Kane Williamson  Williamson Shuts Down Pitch Swap Controversy  India vs New Zealand 1st Semi Final  Wankhede Stadium Mumbai  ICC Cricket World Cup 2023  ಮುಂಬೈನ ವಾಂಖೆಡೆ ಮೈದಾನ  ಪಿಚ್ ಬದಲಾವಣೆ ವಿವಾದ ತಳ್ಳಿಹಾಕಿದ ಕಿವೀಸ್​ ನಾಯಕ  ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಕೇನ್ ವಿಲಿಯಮ್ಸನ್  ವಿಶ್ವಕಪ್​ನ ಮೊದಲ ಸೆಮಿಫೈನಲ್  ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ  ಬಿಸಿಸಿಐ ಕೊನೆಯ ಕ್ಷಣದಲ್ಲಿ ಪಿಚ್ ಬದಲಾಯಿಸಿದೆ  ಆಂಗ್ಲ ಮಾಧ್ಯಮಗಳಲ್ಲಿ ಆರೋಪ  ಪಿಚ್‌ನಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ  ಕಳೆದ ಏಳು ವಾರಗಳಲ್ಲಿ ನಾವು ಅದ್ಭುತ ಪ್ರಯಾಣ
ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಕೇನ್ ವಿಲಿಯಮ್ಸನ್
author img

By ETV Bharat Karnataka Team

Published : Nov 16, 2023, 11:59 AM IST

ಮುಂಬೈ(ಮಹಾರಾಷ್ಟ್ರ): ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದ ವೇಳೆ ಬಿಸಿಸಿಐ ಕೊನೆಯ ಕ್ಷಣದಲ್ಲಿ ಪಿಚ್ ಬದಲಾಯಿಸಿದೆ ಎಂದು ಕೆಲ ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಐಸಿಸಿ ಈಗಾಗಲೇ ವಿವರಣೆ ನೀಡಿದೆ. ಇತ್ತೀಚೆಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ಭಾರತ ಮತ್ತು ಕಿವೀಸ್ ನಡುವೆ ಮೊದಲ ಸೆಮಿಫೈನಲ್ ನಡೆಯಿತು. ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ 'ಪಿಚ್ ವಿವಾದ'ವನ್ನು ತಳ್ಳಿಹಾಕಿದ್ದಾರೆ.

ಈ ಪಿಚ್‌ನಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಈ ಪಿಚ್ ಅನ್ನು ಪಂದ್ಯಗಳಿಗೆ ಬಳಸಲಾಗುತ್ತದೆ. ಇನ್ನೂ ತುಂಬಾ ಚೆನ್ನಾಗಿದೆ. ಎರಡೂ ತಂಡಗಳಿಗೆ ಅನುಕೂಲವಾಗಿಯೇ ಈ ಪಿಚ್​ ಕಾರ್ಯನಿರ್ವಹಿಸಿದೆ. ಮೊದಲಾರ್ಧದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ರನ್ ಗಳಿಸಿದರು. ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಂಡಂತಿದೆ. ಆದರೆ, ನಾಕೌಟ್ ಹಂತದಲ್ಲಿ ಈ ರೀತಿ ಮನೆಗೆ ಹೋಗ್ತಿರುವುದು ಬೇಸರ ತಂದಿದೆ ಎಂದರು.

ಕಳೆದ ಏಳು ವಾರಗಳಲ್ಲಿ ನಾವು ಅದ್ಭುತ ಪ್ರಯಾಣ ಮಾಡಿದ್ದೇವೆ. ಸಣ್ಣ ಪುಟ್ಟ ನೆನಪುಗಳು ಅಳಿಸಿ ಹೋಗದಂತೆ ಉಳಿಯುತ್ತವೆ. ಮೇಲಾಗಿ ಅತ್ಯುತ್ತಮ ತಂಡದ ಎದುರು ಸೋತು ಟೂರ್ನಿಯಿಂದ ನಿರ್ಗಮಿಸುತ್ತಿದ್ದೇವೆ. ಸದ್ಯ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ ಎಂದರು.

ಪ್ರಸಕ್ತ ಏಕದಿನ ವಿಶ್ವಕಪ್​ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿಗೆ ಸಿದ್ಧತೆ ನಡೆಸಿದೆ. ಹಿಂದಿನ ಸೋಲುಗಳಿಂದ ಪಾಠ ಕಲಿತು ಮುನ್ನಡೆಯಬೇಕು. ಈಗ ಟೀಂ ಇಂಡಿಯಾ ಅದನ್ನೇ ಮಾಡುತ್ತಿದೆ. ಒಂದೇ ಒಂದು ಪಂದ್ಯದಲ್ಲಿ ಸೋಲದೆ ಮುನ್ನಡೆಯುತ್ತಿದೆ. ಸೆಮೀಸ್ ತಲುಪಿದ ತಂಡವನ್ನು ಅವಿರೋಧವಾಗಿ ಸೋಲಿಸುವುದು ಸವಾಲಾಗಿದೆ. ಆದರೆ, ನಮ್ಮ ಆಟಗಾರರು ಕೊನೆಯವರೆಗೂ ಶ್ರಮಿಸಿದರು. ಸತತ ಗೆಲುವು ಸಾಧಿಸಿರುವ ಭಾರತ ಫೈನಲ್​ನಲ್ಲೂ ಅದೇ ಆತ್ಮವಿಶ್ವಾಸದೊಂದಿಗೆ ಕಣಕ್ಕೆ ಇಳಿಯುವುದರಲ್ಲಿ ಅನುಮಾನವಿಲ್ಲ ಎಂದು ಕೇನ್ ವಿಲಿಯಮ್ಸನ್ ಪ್ರತಿಕ್ರಿಯಿಸಿದ್ದಾರೆ.

ಭಾರತಕ್ಕೆ ಅಭಿನಂದನೆಗಳು: ಮೊದಲು ಟೀಮ್ ಇಂಡಿಯಾಗೆ ಅಭಿನಂದನೆಗಳು. ಈ ಪಂದ್ಯದಲ್ಲಿ ಅವರ ಅತ್ಯುತ್ತಮ ಪ್ರದರ್ಶನ ಶ್ಲಾಘನೀಯ. ನಮ್ಮ ಆಟಗಾರರು ಅದ್ಭುತವಾಗಿ ಹೋರಾಡಿದರು. ಆದರೆ, ನಾಕೌಟ್ ಹಂತದಲ್ಲಿ ಸೋತಿರುವುದು ನೋವಿನ ಸಂಗತಿ. ಭಾರತ ತಂಡವು ವಿಶ್ವದ ಅತ್ಯುನ್ನತ ಮಟ್ಟದ ಬ್ಯಾಟರ್​ಗಳನ್ನು ಹೊಂದಿದೆ. ನಮಗೆ ಸುಮಾರು 400 ರನ್‌ಗಳ ಗುರಿಯನ್ನು ನಿಗದಿಪಡಿಸಲಾಗಿತ್ತು. ಆದರೆ ನಾವು ಕಷ್ಟಪಟ್ಟು ಹೋರಾಡಿದೆವು. ಅಪಾರ ಪ್ರೇಕ್ಷಕರಿಗೆ ಧನ್ಯವಾದಗಳು. ಭಾರತದ ಆತಿಥ್ಯ ಉತ್ತಮವಾಗಿದೆ. ಪಂದ್ಯಾವಳಿಯಲ್ಲಿ ರಚಿನ್ ಮತ್ತು ಮಿಚೆಲ್ ಉತ್ತಮ ಪ್ರದರ್ಶನ ನೀಡಿದರು. ಬೌಲರ್‌ಗಳು ಕೊಂಚ ಸಂಕಷ್ಟಕ್ಕೆ ಸಿಲುಕಿದ್ದರು. ತಂಡವಾಗಿ ಇದನ್ನೆಲ್ಲ ಮೆಟ್ಟಿನಿಂತು ಮುನ್ನಡೆಯುತ್ತೇವೆ ಎಂದು ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ. ಕಿವೀಸ್​ ವಿರುದ್ಧ ಟೀಂ ಇಂಡಿಯಾ 70 ರನ್‌ಗಳ ಜಯ ಸಾಧಿಸಿದೆ. ಮೊದಲು ಭಾರತ 397/4 ಸ್ಕೋರ್ ಕಲೆ ಹಾಕಿತು. ನಂತರ ನ್ಯೂಜಿಲೆಂಡ್ 327 ರನ್‌ಗಳಿಗೆ ಆಲೌಟ್ ಆಯಿತು.

ಓದಿ: ಶಮಿ ಬೌಲಿಂಗ್​ ಬ್ರಿಲಿಯಂಟ್​, ಕೊಹ್ಲಿ ಬ್ಯಾಟಿಂಗ್​ ಸೂಪರ್​: ರೋಹಿತ್ ಶರ್ಮಾ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.