ಬೆಂಗಳೂರು: ವಿಶ್ವಕಪ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾದ ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಐವರ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಿಗದಿತ ಓವರ್ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 410 ರನ್ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಿರ್ಧಾರ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭವನ್ನು ಪಡೆದುಕೊಂಡಿತು. ಡಚ್ಚರ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಸೆಮೀಸ್ಗೂ ಮುನ್ನ ಆತ್ಮವಿಶ್ವಾಸವನ್ನು ಇನ್ನಷ್ಟೂ ಹೆಚ್ಚಿಸಿಕೊಳ್ಳಲು ರೋಹಿತ್ ಶರ್ಮಾ ಲೆಕ್ಕಾಚಾರ ಹಾಕಿದ್ದರು. ಅದಕ್ಕೆ ತಕ್ಕಂತೆ ತಂಡ ಆರಂಭವನ್ನು ಪಡೆದುಕೊಂಡಿತು. ಶುಭಮನ್ ಗಿಲ್ ಎಂದಿನಂತೆ ಬಿರುಸಿನ ಆರಂಭವನ್ನು ಪಡೆದುಕೊಂಡರು. ಆರಂಭಿಕರಿಬ್ಬರು ಈ ವರ್ಷದ 5ನೇ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. 4 ಸಿಕ್ಸ್ ಮತ್ತು 3 ಬೌಂಡರಿಯ ಸಹಾಯದಿಂದ 51 ರನ್ ಗಳಿಸಿದ ಗಿಲ್ ಔಟ್ ಆದರು.
-
📸📸 HUNDRED off just 62 deliveries 👏👏
— BCCI (@BCCI) November 12, 2023 " class="align-text-top noRightClick twitterSection" data="
A marvellous knock that from KL Rahul 🔝#TeamIndia | #CWC23 | #MenInBlue | #INDvNED pic.twitter.com/D6dwgfYE1n
">📸📸 HUNDRED off just 62 deliveries 👏👏
— BCCI (@BCCI) November 12, 2023
A marvellous knock that from KL Rahul 🔝#TeamIndia | #CWC23 | #MenInBlue | #INDvNED pic.twitter.com/D6dwgfYE1n📸📸 HUNDRED off just 62 deliveries 👏👏
— BCCI (@BCCI) November 12, 2023
A marvellous knock that from KL Rahul 🔝#TeamIndia | #CWC23 | #MenInBlue | #INDvNED pic.twitter.com/D6dwgfYE1n
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 29 ರನ್ಗಳ ಜೊತೆಯಾಟವನ್ನು ಮಾಡಿದರು. ಈ ವೇಳೆ ರೋಹಿತ್ ಶರ್ಮಾ ತಮ್ಮ ಅರ್ಧಶತಕವನ್ನು ಪೂರೈಸಿಕೊಂಡರು. ಆದರೆ ಇನ್ನಿಂಗ್ಸ್ ಮತ್ತು ಜೊತೆಯಾಟ ಮುಂದುವರೆಸುವಲ್ಲಿ ವಿಫಲರಾದರು. 61 ರನ್ ಗಳಿಸಿ ರೋಹಿತ್ ಸಹ ವಿಕೆಟ್ ಒಪ್ಪಿಸಿದರು. ಇದರಿಂದ 100 ಅಂತಾರಾಷ್ಟ್ರೀಯ ಅರ್ಧಶತಕ ಗಳಿಸಿದ ದಾಖಲೆಯನ್ನು ಮಾಡಿದರು. ಇನ್ನಿಂಗ್ಸ್ನಲ್ಲಿ ರೋಹಿತ್ 8 ಬೌಂಡರಿ ಮತ್ತು 2 ಸಿಕ್ಸ್ ಗಳಿಸಿದ್ದರು.
-
The local lad wows Chinnaswamy! 💯
— BCCI (@BCCI) November 12, 2023 " class="align-text-top noRightClick twitterSection" data="
A magnificent CENTURY that from KL Rahul 👏👏#TeamIndia | #CWC23 | #MenInBlue | #INDvNED pic.twitter.com/u47WSKzrXG
">The local lad wows Chinnaswamy! 💯
— BCCI (@BCCI) November 12, 2023
A magnificent CENTURY that from KL Rahul 👏👏#TeamIndia | #CWC23 | #MenInBlue | #INDvNED pic.twitter.com/u47WSKzrXGThe local lad wows Chinnaswamy! 💯
— BCCI (@BCCI) November 12, 2023
A magnificent CENTURY that from KL Rahul 👏👏#TeamIndia | #CWC23 | #MenInBlue | #INDvNED pic.twitter.com/u47WSKzrXG
50ನೇ ಶತಕ ಮಿಸ್: ಮೂರನೇ ವಿಕೆಟ್ಗೆ ಒಂದಾದ ಅಯ್ಯರ್ ಮತ್ತು ವಿರಾಟ್ ಕೊಹ್ಲಿ 71 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ವಿರಾಟ್ ತಮ್ಮ ಎರಡನೇ ತವರು ಮನೆಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧಶತಕ ಪೂರೈಸಿಕೊಂಡರು. ಇಂದು ಅವರ ಬ್ಯಾಟ್ನಿಂದ 50ನೇ ಏಕದಿನ ಶತಕ ದಾಖಲಾಗುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. 56 ಬಾಲ್ ಆಡಿ 5 ಬೌಂಡರಿ ಮತ್ತು 1 ಸಿಕ್ಸ್ನಿಂದ 51 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೊದಲ ಮೂವರು ಬ್ಯಾಟರ್ಗಳು ಅರ್ಧಶತಕಕ್ಕೆ ವಿಕೆಟ್ ಒಪ್ಪಿಸಿದರು. ದೊಡ್ಡ ಇನ್ನಿಂಗ್ಸ್ ನಿರೀಕ್ಷೆ ಮೂವರಿಂದಲೂ ಹುಸಿಯಾಯಿತು.
-
𝘾𝙀𝙉𝙏𝙐𝙍𝙔 for Shreyas Iyer in Bengaluru! 💯
— BCCI (@BCCI) November 12, 2023 " class="align-text-top noRightClick twitterSection" data="
A memorable maiden World Cup HUNDRED for him 👏👏#TeamIndia | #CWC23 | #MenInBlue | #INDvNED pic.twitter.com/D2sYE1Xjr4
">𝘾𝙀𝙉𝙏𝙐𝙍𝙔 for Shreyas Iyer in Bengaluru! 💯
— BCCI (@BCCI) November 12, 2023
A memorable maiden World Cup HUNDRED for him 👏👏#TeamIndia | #CWC23 | #MenInBlue | #INDvNED pic.twitter.com/D2sYE1Xjr4𝘾𝙀𝙉𝙏𝙐𝙍𝙔 for Shreyas Iyer in Bengaluru! 💯
— BCCI (@BCCI) November 12, 2023
A memorable maiden World Cup HUNDRED for him 👏👏#TeamIndia | #CWC23 | #MenInBlue | #INDvNED pic.twitter.com/D2sYE1Xjr4
ರಾಹುಲ್- ಅಯ್ಯರ್ ಶತಕ: ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಶತಕ ಗಳಿಸಿ ಸಂಭ್ರಮಿಸಿದರು. 4ನೇ ವಿಕೆಟ್ಗೆ ಈ ಜೋಡಿ 208 ರನ್ಗಳ ಪಾಲುದಾರಿಕೆ ಹಂಚಿಕೊಂಡಿತು. 64 ಬಾಲ್ ಎದುರಿಸಿದ ಕೆ ಎಲ್ ರಾಹುಲ್ 11 ಬೌಂಡರಿ ಮತ್ತು 4 ಸಿಕ್ಸ್ನಿಂದ 102 ರನ್ ಗಳಿಸಿ ಕೊನೆಯಲ್ಲಿ ಔಟ್ ಆದರು. ಅಯ್ಯರ್ ಅಜೇಯವಾಗಿ 128 ರನ್ ಕಲೆಹಾಕಿದರು. ಇನ್ನಿಂಗ್ಸ್ನಲ್ಲಿ ಅವರು 94 ಬಾಲ್ ಆಡಿ 10 ಬೌಂಡರಿ ಮತ್ತು 5 ಸಿಕ್ಸರ್ ಗಳಿಸಿದರು. ಇವರ ಈ ಆಟದ ನೆರವಿನಿಂದ ಟೀಮ್ ಇಂಡಿಯಾ 50 ಓವರ್ಗೆ 4 ವಿಕೆಟ್ ನಷ್ಟದೊಂದಿಗೆ 410 ರನ್ ಕಲೆಹಾಕಿದೆ.
ಇದನ್ನೂ ಓದಿ: ಈ ಬಾರಿ ಭಾರತ ಗೆಲ್ಲದಿದ್ರೆ ಇನ್ನು ಮೂರು ವಿಶ್ವಕಪ್ಗಳವರೆಗೆ ಸಾಧ್ಯವಿಲ್ಲ; ರವಿಶಾಸ್ತ್ರಿ