ETV Bharat / sports

ಈ ಬಾರಿ ಭಾರತ ಗೆಲ್ಲದಿದ್ರೆ ಇನ್ನು ಮೂರು ವಿಶ್ವಕಪ್​ಗಳವರೆಗೆ ಸಾಧ್ಯವಿಲ್ಲ; ರವಿಶಾಸ್ತ್ರಿ - ಭಾರತ ಕೊನೆಯ ಬಾರಿಗೆ ವಿಶ್ವಕಪ್

ಈ ಬಾರಿಯ ವಿಶ್ವಕಪ್ ಗೆಲ್ಲಲು ಭಾರತ ಅತ್ಯತ್ತಮ ತಂಡವಾಗಿದೆ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

India will have to wait for another three World Cups if they don't win it this time: Shastri

author img

By PTI

Published : Nov 12, 2023, 2:00 PM IST

ನವದೆಹಲಿ: ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಗೆಲ್ಲದಿದ್ದರೆ ಭಾರತವು ಪ್ರಶಸ್ತಿಯನ್ನು ಗೆಲ್ಲಲು ಇನ್ನೂ ಮೂರು ವಿಶ್ವಕಪ್​ಗಳವರೆಗೆ ಕಾಯಬೇಕಾಗುತ್ತದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಕ್ಲಬ್ ಪ್ರೈರಿ ಫೈರ್ ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ಶಾಸ್ತ್ರಿ, ತಂಡದ ಹೆಚ್ಚಿನ ಸದಸ್ಯರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. ಹೀಗಾಗಿ ಇದು ವಿಶ್ವಕಪ್ ಪ್ರಶಸ್ತಿಯ ಬರವನ್ನು ಕೊನೆಗೊಳಿಸಲು ಭಾರತಕ್ಕೆ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು. ಆಡಮ್ ಗಿಲ್​ಕ್ರಿಸ್ಟ್ ಮತ್ತು ಮೈಕಲ್ ವಾನ್ ಕೂಡ ಪಾಡ್​ಕಾಸ್ಟ್​ನಲ್ಲಿ ಭಾಗವಹಿಸಿದ್ದರು.

"ದೇಶದಲ್ಲಿ ಕ್ರಿಕೆಟ್​ನ ಹುಚ್ಚು ಆವರಿಸಿದೆ. 12 ವರ್ಷಗಳ ಹಿಂದೆ ಭಾರತ ಕೊನೆಯ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಈ ಬಾರಿ ಮತ್ತೊಮ್ಮೆ ಗೆಲುವು ಸಾಧಿಸಲು ಭಾರತಕ್ಕೆ ಅವಕಾಶವಿದೆ. ಭಾರತ ತಂಡವು ಆಡುತ್ತಿರುವ ರೀತಿಯನ್ನು ನೋಡಿದರೆ ಬಹುಶಃ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ಇದು ಅತ್ಯುತ್ತಮ ಅವಕಾಶವಾಗಿದೆ. 7 ರಿಂದ 8 ಆಟಗಾರರು ಉತ್ತುಂಗದಲ್ಲಿದ್ದಾರೆ. ಈ ಬಾರಿ ಗೆಲುವು ತಪ್ಪಿಸಿಕೊಂಡರೆ ಮತ್ತೊಮ್ಮೆ ಅದರ ಬಗ್ಗೆ ಯೋಚಿಸಲು ಕೂಡ ಇನ್ನೂ ಮೂರು ವಿಶ್ವಕಪ್​ಗಳವರೆಗೆ ಕಾಯಬೇಕಾಗುತ್ತದೆ." ಎಂದು ಭಾರತದ ಮಾಜಿ ಮುಖ್ಯ ಕೋಚ್ ಶಾಸ್ತ್ರಿ ಹೇಳಿದರು.

ಭಾರತೀಯ ಬೌಲಿಂಗ್ ದಾಳಿಯು ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಬ್ಯಾಟ್ಸ್​ಮನ್​ಗಳನ್ನು ಕಟ್ಟಿ ಹಾಕಿದೆ. ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ವೇಗದ ಬೌಲರ್​ಗಳು ಅತ್ಯಂತ ಪರಿಣಾಮಕಾರಿಗಿದ್ದರೆ, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರ ಸ್ಪಿನ್ ಸಂಯೋಜನೆಯು ಮಧ್ಯ ಓವರ್​ಗಳಲ್ಲಿ ನಿಯಂತ್ರಣ ಸಾಧಿಸುತ್ತಿದೆ. ಪ್ರಸ್ತುತ ಬೌಲರ್​ಗಳು ಭಾರತ ಕಂಡ ಅತ್ಯುತ್ತಮ ಬೌಲರ್​ಗಳಾಗಿದ್ದಾರೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

"ಈ ಹಂತಕ್ಕೆ ತಲುಪಿರುವುದು ಅಸಾಧಾರಣವಾಗಿದೆ ಮತ್ತು ಇದು ರಾತ್ರೋರಾತ್ರಿ ಸಂಭವಿಸಿಲ್ಲ. ಇದಕ್ಕಾಗಿ ಸಾಕಷ್ಟು ಸಮಯ ಹಿಡಿದಿದೆ. ಎಲ್ಲರೂ ನಾಲ್ಕೈದು ವರ್ಷಗಳಿಂದ ಜೊತೆಗೆ ಆಡುತ್ತಿದ್ದಾರೆ." ಎಂದು ಶಾಸ್ತ್ರಿ ವಿಶ್ಲೇಷಣೆ ಮಾಡಿದರು.

"ಯಾವ ದಿಕ್ಕಿನಲ್ಲಿ ಬೌಲಿಂಗ್ ಮಾಡಬೇಕೆಂಬುದು ಅವರಿಗೆ ತಿಳಿದಿದೆ. ಬೌಲಿಂಗ್ ಮಾಡುವಾಗ ಹೊಳೆಯುವುದು ಮುಖ್ಯವಲ್ಲ, ಸ್ಥಿರತೆ ಮತ್ತು ಸರಿಯಾದ ದಿಕ್ಕಿನಲ್ಲಿ ಬೌಲಿಂಗ್ ಮಾಡುವುದು ಮುಖ್ಯ ಎಂಬುದು ಅವರಿಗೆ ತಿಳಿದಿದೆ. ತಮ್ಮ ಸೀಮ್ ಪೊಸಿಶನ್​ನಿಂದ ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ಇದು ಬ್ಯಾಟ್ಸ್​ಮನ್​ಗಳಿಗೆ ಸವಾಲು ಒಡ್ಡುತ್ತಿದೆ. ವೈಟ್ ಬಾಲ್ ಕ್ರಿಕೆಟ್​ನಲ್ಲಿ 50 ವರ್ಷಗಳಲ್ಲಿ ನಾನು ನೋಡಿದ ಅತ್ಯುತ್ತಮ ಬೌಲಿಂಗ್ ಅಟ್ಯಾಕ್ ಇದಾಗಿದೆ." ಎಂದು ರವಿ ಶಾಸ್ತ್ರಿ ಶ್ಲಾಘಿಸಿದರು.

ಇದನ್ನೂ ಓದಿ : ತಂಡದಲ್ಲಿ ಯಾರಿಗೂ ವಿಶ್ರಾಂತಿ ಇಲ್ಲ, ಅದೇ ತಂಡ ಮುಂದುವರೆಯಲಿದೆ: ಕೋಚ್​ ದ್ರಾವಿಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.