ಬೆಂಗಳೂರು: ಕಿವೀಸನ್ ವಿರುದ್ಧ ಫಖರ್ ಜಮಾನ್ ಮತ್ತು ವರುಣನ ಕೊಡುಗೆಯಿಂದ ಪಂದ್ಯವನ್ನು ಗೆದ್ದ ಪಾಕಿಸ್ತಾನ ದಂಡಕ್ಕೆ ಒಳಪಟ್ಟಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿದ ಪಾಕಿಸ್ತಾನ ನಿಧಾನ ಗತಿಯ ಬೌಲಿಂಗ್ಗಾಗಿ ದಂಡಕ್ಕೆ ಗುರಿಯಾಗಿದೆ. ಬೆಂಗಳೂರಿನಲ್ಲಿ ನ್ಯೂಜಿಲೆಂಡ್‌ನ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನವು ಎರಡು ಓವರ್‌ಗಳಷ್ಟು ಹೆಚ್ಚು ಸಮಯವನ್ನು ತೆಗೆದುಕೊಂಡಿದೆ. ಅದಕ್ಕಾಗಿ ಪಾಕ್ ತಂಡ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡವನ್ನು ನೀಡಲಾಯಿತು.
ಆನ್-ಫೀಲ್ಡ್ ಅಂಪೈರ್‌ಗಳಾದ ಪಾಲ್ ವಿಲ್ಸನ್ ಮತ್ತು ರಿಚರ್ಡ್ ಕೆಟಲ್‌ಬರೋ, ಮೂರನೇ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ನಾಲ್ಕನೇ ಅಂಪೈರ್ ಜೋಯಲ್ ವಿಲ್ಸನ್ ಆರೋಪಿಸಿದ್ದಾರೆ. ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ರಿಚಿ ರಿಚರ್ಡ್‌ಸನ್ ಅವರು ದಂಡವನ್ನು ವಿಧಿಸಿದ್ದಾರೆ.
-
Pakistan's emphatic win in Bengaluru has been soured after the side was sanctioned for slow over-rate.
— ICC Cricket World Cup (@cricketworldcup) November 5, 2023 " class="align-text-top noRightClick twitterSection" data="
Details 👇#CWC23https://t.co/0Opke1903M
">Pakistan's emphatic win in Bengaluru has been soured after the side was sanctioned for slow over-rate.
— ICC Cricket World Cup (@cricketworldcup) November 5, 2023
Details 👇#CWC23https://t.co/0Opke1903MPakistan's emphatic win in Bengaluru has been soured after the side was sanctioned for slow over-rate.
— ICC Cricket World Cup (@cricketworldcup) November 5, 2023
Details 👇#CWC23https://t.co/0Opke1903M
ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ಆಟಗಾರರು ತಮ್ಮ ತಂಡವು ನಿಗದಿತ ಸಮಯದಲ್ಲಿ ಬೌಲ್ ಮಾಡಲು ವಿಫಲರಾದ ಪ್ರತಿ ಓವರ್‌ಗೆ ಅವರ ಪಂದ್ಯದ ಶುಲ್ಕದ ಐದು ಶೇಕಡಾ ದಂಡವನ್ನು ವಿಧಿಸಲಾಗುತ್ತದೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರು ಅಪರಾಧವನ್ನು ಒಪ್ಪಿಕೊಂಡಿದ್ದಲ್ಲದೇ ದಂಡಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಔಪಚಾರಿಕ ವಿಚಾರಣೆ ಇಲ್ಲದೇ ಜುಲ್ಮಾನೆ ವಿಧಿಸಲಾಗಿದೆ.
ನಡೆಯುತ್ತಿರುವ ವಿಶ್ವಕಪ್ನಲ್ಲಿ ಮಳೆಗೆ ಗುರಿಯಾದ ಮೊದಲ ಪಂದ್ಯ ಇದಾಯಿತು. ಶನಿವಾರ ಬೆಂಗಳೂರಿನಲ್ಲಿ ಬಹುತೇಕ ಮಳೆಯ ಮುನ್ಸೂಚನೆ ಇತ್ತು ಇದರಿಂದ ಮೊದಲು ಟಾಸ್ ಗೆದ್ದ ತಂಡ ಎರಡನೇ ಬ್ಯಾಟಿಂಗ್ ಆಯ್ಕೆಯನ್ನು ಮಾಡುವುದು ಸೂಕ್ತ ಎಂದು ಮೊದಲೇ ಅಂದಾಜಿಸಲಾಗಿತ್ತು. ಅದರಂತೆ ಪಾಕಿಸ್ತಾನ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟಿಂಗ್ ಸ್ನೇಹಿ ಆಗಿದ್ದರಿಂದ ಕಿವೀಸ್ ಪಡೆ ಭರ್ಜರಿ ಬ್ಯಾಟಿಂಗ್ ಮಾಡಿತ್ತು. ರಚಿನ್ ರವೀಂದ್ರ ವಿಶ್ವಕಪ್ನ ಮೂರನೇ ಶತಕವನ್ನು ಪೂರೈಸಿದರೆ ಮತ್ತು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕೇನ್ ವಿಲಿಯಮ್ಸನ್ (95) 5 ರನ್ನಿಂದ ಶತಕ ವಂಚಿತರಾದರು. ಇವರಲ್ಲದೇ ಕೊನೆಯಲ್ಲಿ ಬಂದ ಕಿವೀಸ್ ಆಟಗಾರರು ಚರುಕಿನ ಚುಟುಕು ಇನ್ನಿಂಗ್ಸ್ ಕಟ್ಟಿದ್ದರಿಂದ ತಂಡ 402 ರನ್ನ ಬೃಹತ್ ಗುರಿಯನ್ನೇ ನೀಡಿತ್ತು.
ಮೊದಲ ಇನ್ನಿಂಗ್ಸ್ ಮುಗಿದ ಬೆನ್ನಲ್ಲೇ ಮಳೆ ಬಂದು ಮ್ಯಾಚ್ ನಿಂತಿತ್ತು. ಇದು ಪಾಕ್ ಬ್ಯಾಟಿಂಗ್ಗೆ ಸಹಕಾರ ಆಯಿತು ಎಂದೇ ಹೇಳಬಹುದು. ಪಾಕಿಸ್ತಾನ ಮೊದಲ ವಿಕೆಟ್ನ್ನು ಬೇಗ ಕಳೆದುಕೊಂಡರೂ, ಫಖರ್ ಜಮಾನ್ ಮತ್ತು ಬಾಬರ್ ಅಜಮ್ ಉತ್ತಮ ಜೊತೆಯಾಟ ಆಡಿದರು. 25ನೇ ಓವರ್‌ಗೆ ಮಳೆ ಜೋರಾದ ಹಿನ್ನೆಲೆ ಪಂದ್ಯವನ್ನು ಡಿಎಲ್ಎಸ್ ನಿಯಮದನ್ವಯ ವಿಜೇತರನ್ನು ಪ್ರಕಟಿಸಲಾಯಿತು. ಫಖರ್ ಕೇವಲ 81 ಎಸೆತಗಳಲ್ಲಿ ಅಜೇಯ 126* ರನ್ ಮತ್ತು ಬಾಬರ್ ಅಜಮ್ ಅರ್ಧಶತಕದ ನೆರವಿನಿಂದ ಪಾಕ್ 21 ರನ್ಗಳ ಗೆಲುವು ದಾಖಲಿಸಿತು. ಅಲ್ಲದೇ ವಿಶ್ವಕಪ್ ಸೆಮೀಸ್ ರೇಸ್ನಲ್ಲಿ ಉಳಿದುಕೊಂಡಿತು.
ಇದನ್ನೂ ಓದಿ: 49ನೇ ಏಕದಿನ ಶತಕ ಗಳಿಸಿದ ವಿರಾಟ್.. ಸಚಿನ್ ಸಾಧನೆ ಸರಿಗಟ್ಟಿದ ಕಿಂಗ್ ಕೊಹ್ಲಿ