ETV Bharat / sports

ವಿಶ್ವಕಪ್‌ ಕ್ರಿಕೆಟ್: ಸೆಮಿ ಫೈನಲ್‌ಗೆ ಇನ್ನೊಂದೇ ಹೆಜ್ಜೆ! ಶ್ರೇಯಸ್​ಗಿದು ಕೊನೆಯ ಅವಕಾಶವೇ? - ಬಹುತೇಕವಾಗಿ ನಾವು ಈಗಾಗಲೇ ಸೆಮಿಗೆ ತಲುಪಿದಂತಿದೆ

Shreyas Iyer gets last chance in Team India: ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಗೆಲುವಿನ ನಾಗಾಲೋಟದಲ್ಲಿರುವ ಭಾರತಕ್ಕೆ ಸೆಮಿಫೈನಲ್‌ ಹಂತ ತಲುಪಲು ಇನ್ನು ಒಂದೇ ಹೆಜ್ಜೆ ಬಾಕಿ ಇದೆ. ಇನ್ನೊಂದೆಡೆ, ಶ್ರೇಯಸ್ ಅಯ್ಯರ್‌ಗೆ​ ತಮ್ಮ ಫಾರ್ಮ್​ ಅನ್ನು ಮರಳಿ ಪಡೆಯಲು ಇಂದಿನ ಪಂದ್ಯವೇ ಕೊನೆಯ ಅವಕಾಶ ಎಂಬುದು ವಿಶ್ಲೇಷಕರ ಮಾತು.

ICC Cricket World Cup 2023  Only one more step left for Semi  Shreyas Iyer getting last chance  ಶ್ರೇಯಸ್​ಗೆ ಇದು ಕೊನೆಯ ಅವಕಾಶ  ಸೆಮಿಗೆ ಇನ್ನು ಒಂದೇ ಹೆಜ್ಜೆ ಬಾಕಿ  Wankhede Stadium Mumbai  India vs Sri Lanka 33rd Match  ಭಾರತ ಆಡಿರುವ ಆರು ಪಂದ್ಯಗಳಲ್ಲಿ ಆರು ಗೆಲುವು  ಏಕದಿನ ವಿಶ್ವಕಪ್‌ನಲ್ಲಿ ಭಾರತ ಮಾತ್ರ ಅಜೇಯ ತಂಡ  ಬಹುತೇಕವಾಗಿ ನಾವು ಈಗಾಗಲೇ ಸೆಮಿಗೆ ತಲುಪಿದಂತಿದೆ  ಅಧಿಕೃತವಾಗಿ ಸೆಮಿಗೆ ತಲುಪಲು ಇನ್ನೂ ಒಂದು ಹೆಜ್ಜೆ
ಸೆಮಿಗೆ ಇನ್ನು ಒಂದೇ ಹೆಜ್ಜೆ ಬಾಕಿ
author img

By ETV Bharat Karnataka Team

Published : Nov 2, 2023, 2:18 PM IST

ಮುಂಬೈ (ಮಹಾರಾಷ್ಟ್ರ): ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡ ತಾನು ಆಡಿರುವ 6 ಪಂದ್ಯಗಳಲ್ಲಿ ಆರನ್ನೂ ಗೆದ್ದುಕೊಂಡಿದೆ. ತಂಡ ಬಹುತೇಕ ಸೆಮಿಫೈನಲ್‌ ಹಂತ ಬಂದು ತಲುಪಿದೆ. ಆದರೆ ಅಧಿಕೃತವಾಗಿ ಸೆಮಿಗೆ ತಲುಪಲು ಇನ್ನೂ ಒಂದು ಗೆಲುವು ಬೇಕಿದೆ. ಆ ಹೆಜ್ಜೆ ತುಂಬಾ ಕಷ್ಟವಾಗದೇ ಇರಬಹುದು. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಗಳು ಎಸೆದ ಸವಾಲುಗಳ ವಿರುದ್ಧವೂ ಗೆದ್ದ ಟೀಂ ಇಂಡಿಯಾ ಇಂದು ಶ್ರೀಲಂಕಾ ವಿರುದ್ಧ ಮೈದಾನಕ್ಕಿಳಿದಿದೆ.

ವಿಶ್ವಕಪ್‌ನಲ್ಲಿ ಆಡಿದ ಆರು ಏಕದಿನ ಪಂದ್ಯಗಳಲ್ಲಿ ಒಂದೂ ಪಂದ್ಯವನ್ನೂ ಸೋಲದೆ ಸೆಮೀಸ್‌ನ ಸಮೀಪ ಬಂದಿರುವ ಟೀಂ ಇಂಡಿಯಾ ಅಧಿಕೃತವಾಗಿ ನಾಕೌಟ್ ಸ್ಥಾನ ಪಡೆಯುವತ್ತ ಗಮನಹರಿಸಿದೆ. ಲಂಕಾ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದ್ದು, ಸೆಮೀಸ್‌ ರೇಸ್‌ನಲ್ಲಿ ತೀರಾ ಹಿಂದುಳಿದಿದೆ. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲನು ಕಂಡಿರುವುದು ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿದೆ.

ಶ್ರೇಯಸ್​ ಮತ್ತೊಂದು ಅವಕಾಶ: ಟೂರ್ನಿ ಮುಂದುವರಿದಂತೆ ಟೀಂ ಇಂಡಿಯಾ ಬಲಿಷ್ಠವಾಗುತ್ತಿದೆ. ಎಲ್ಲಾ ಪ್ರಮುಖ ಆಟಗಾರರು ತಮ್ಮ ಪ್ರದರ್ಶನವನ್ನು ಉತ್ತಮವಾಗಿಯೇ ನೀಡುತ್ತಿದ್ದಾರೆ. ತಂಡದಲ್ಲಿ ಅವಕಾಶ ಪಡೆದ ವೇಗಿ ಮೊಹಮ್ಮದ್ ಶಮಿ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಫಾರ್ಮ್ ಮಾತ್ರ ಚಿಂತಾಜನಕವಾಗಿದೆ.

ಟೂರ್ನಿಯಲ್ಲಿ ಶ್ರೇಯಸ್ ಆರು ಪಂದ್ಯಗಳಲ್ಲಿ 134 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧ ಶತಕವಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಶ್ರೇಯಸ್ ಅನವಶ್ಯಕ ಶಾಟ್ ಮೂಲಕ ವಿಕೆಟ್‌ ಕೈಚೆಲ್ಲಿದ್ದು ಭಾರಿ ಟೀಕೆಗೆ ಗುರಿಯಾಗಿತ್ತು. ಇಂದಿನ ಪಂದ್ಯದಲ್ಲಿ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದ್ದು, ಫಾರ್ಮ್​ ಕಂಡುಕೊಳ್ಳುವುದು ಶ್ರೇಯಸ್​ಗೆ ಅತ್ಯವಶ್ಯಕ.

ಓಪನರ್ ಶುಭ್‌ಮನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಅವರಿಗೂ ದೊಡ್ಡ ಇನ್ನಿಂಗ್ಸ್ ಬಾಕಿ ಇದೆ. ನಾಯಕ ರೋಹಿತ್ ಶರ್ಮಾ ಸೂಪರ್ ಫಾರ್ಮ್‌ನಲ್ಲಿ ತಂಡ ಮುನ್ನಡೆಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ಕೊಹ್ಲಿ ಡಕ್​ ಆದ್ರೂ ಸಹಿತ ಟೂರ್ನಿಯಲ್ಲಿ ಅವರ ಫಾರ್ಮ್ ಉತ್ತಮವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬ್ಯಾಟಿಂಗ್‌ಸ್ನೇಹಿ ವಾಂಖೆಡೆ ಪಿಚ್‌ನಲ್ಲಿ ಭಾರತಕ್ಕೆ ದೊಡ್ಡ ಮೊತ್ತ ಗಳಿಸಲು ಇದು ಉತ್ತಮ ಅವಕಾಶ. ಬೌಲಿಂಗ್‌ನಲ್ಲಿ ಭಾರತಕ್ಕೆ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ. ತಡವಾಗಿ ತಂಡಕ್ಕೆ ಬಂದ ಶಮಿ ಅಬ್ಬರಿಸುತ್ತಿದ್ದರೆ, ಬುಮ್ರಾ, ಕುಲದೀಪ್ ಮತ್ತು ಜಡೇಜಾ ಸ್ಥಿರ ಪ್ರದರ್ಶನ ಮುಂದುವರಿಸಿದ್ದಾರೆ.

ಲಂಕಾಗೆ ಹಿನ್ನಡೆ: ಲಂಕಾ ಆರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದು ಬಿಟ್ಟರೆ ತಂಡದ ಪ್ರದರ್ಶನ ಕಳಪೆ. ಕ್ಯಾಪ್ಟನ್ ಶನಕ, ಪತಿರಾನ ಮತ್ತು ಕುಮಾರ್ ಗಾಯದ ಸಮಸ್ಯೆಯಿಂದ ತಂಡಕ್ಕೆ ಹೊಡೆತ ಬಿದ್ದಿದೆ. ಇತರ ಆಟಗಾರರಿಗೆ ಸ್ಥಿರತೆಯ ಕೊರತೆಯಿದೆ. ಆರಂಭದಲ್ಲಿ ವಿಫಲರಾದ ಕುಶಾಲ್ ಮೆಂಡಿಸ್ ಅವರು ಶನಕ ಬದಲಿಗೆ ತಂಡದ ಸಾರಥ್ಯ ವಹಿಸಿಕೊಂಡ ನಂತರ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.

ತಂಡದಲ್ಲಿ ನಿಶಾಂಕ ಚೆನ್ನಾಗಿಯೇ ಆಡುತ್ತಿದ್ದಾರೆ. ಆಲ್‌ರೌಂಡ್ ಪಾತ್ರದಲ್ಲಿ ಧನಂಜಯ ಡಿಸಿಲ್ವ ಮಿಂಚಿದ್ದಾರೆ. ಬೌಲಿಂಗ್​ನಲ್ಲಿ ತೀಕ್ಷಣ ನಿರಾಸೆ ಮೂಡಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕು. ಟೂರ್ನಿಯಲ್ಲಿ ತನ್ನ ಶಕ್ತಿ ಪ್ರದರ್ಶಿಸುತ್ತಿರುವ ವೇಗಿ ಮಧುಶಂಕ ಜತೆಗೆ ತಡವಾಗಿ ತಂಡಕ್ಕೆ ಸೇರ್ಪಡೆಗೊಂಡ ಮ್ಯಾಥ್ಯೂಸ್ ಮೇಲೆ ಶ್ರೀಲಂಕಾ ತಂಡ ಹೆಚ್ಚು ನಿರೀಕ್ಷೆ ಹೊಂದಿದೆ.

ಇದನ್ನೂ ಓದಿ: ರೋಚಕ ಘಟ್ಟದಲ್ಲಿ ವಿಶ್ವಕಪ್ ಕ್ರಿಕೆಟ್‌: ಭಾರತದ ವಿರುದ್ಧ ಟಾಸ್​ ಗೆದ್ದ ಶ್ರೀಲಂಕಾ ಬೌಲಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.