ETV Bharat / sports

ಡಿಆರ್‌ಎಸ್‌ಗೆ ಕೆ.ಎಲ್.ರಾಹುಲ್ ಬಿಗಿಪಟ್ಟು: ಕ್ಯಾಪ್ಟನ್‌ಗೆ ಕೊಂಚ ಇರಿಸುಮುರಿಸು, ದೊಡ್ಡ ಪರದೆಯಲ್ಲಿ OUT ಪ್ರಕಟವಾದಾಗ ಎಲ್ಲರೂ ಫುಲ್‌ಖುಷ್‌! - ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡ

ಶ್ರೀಲಂಕಾ ಬಗ್ಗುಬಡಿದು ವಿಶ್ವಕಪ್‌ ಕ್ರಿಕೆಟ್‌ ಸೆಮಿಫೈನಲ್ ತಲುಪಿದ ಮೊದಲ ತಂಡವೆಂಬ ಹಿರಿಮೆಗೆ ಟೀಂ ಇಂಡಿಯಾ ಪಾತ್ರವಾಗಿದೆ. ಇನ್ನೆರಡು ಪಂದ್ಯಗಳು ಬಾಕಿ ಇರುವಾಗಲೇ ರೋಹಿತ್​ ಬಳಗ ಈ ಅರ್ಹತೆ ಗಿಟ್ಟಿಸಿಕೊಂಡಿತು. ಈ ಪಂದ್ಯದಲ್ಲಿ ಕೆ.ಎಲ್.ರಾಹುಲ್​ ಪಡೆದ ಡಿಆರ್​ಎಸ್​ ರಿವ್ಯೂ ಕುತೂಹಲಕ್ಕೆ ಕಾರಣವಾಗಿತ್ತು.

Cricket World Cup  ICC Cricket World Cup 2023  KL Rahul stubborn call for DRS  embarrassing Rohit while earning India wicket  ಧೋನಿಯನ್ನು ನೆನಪಿಸಿದ ಕೆಎಲ್​ ರಾಹುಲ್​ ಪಡೆದ ಡಿಆರ್​ಎಸ್  2023ರ ವಿಶ್ವಕಪ್‌ನ 33ನೇ ಪಂದ್ಯ  ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ  ಅಂಪೈರ್​ ನಿರ್ಣಯದ ವಿರುದ್ಧ ರಾಹುಲ್​ ತೀವ್ರವಾಗಿ ಆಕ್ಷೇಪ  ನಾಯಕ ರೋಹಿತ್​ ಅವರ ಜೊತೆ ಚರ್ಚಿಸದೇ ಡಿಆರ್​ಎಸ್​ ರಿವಿವ್​ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡ  ಕೆಎಲ್​ ರಾಹುಲ್​ ಪಡೆದ ಡಿಆರ್​ಎಸ್​ ರಿವಿವ್
ಧೋನಿಯನ್ನು ನೆನಪಿಸಿದ ಕೆಎಲ್​ ರಾಹುಲ್​ ಪಡೆದ ಡಿಆರ್​ಎಸ್
author img

By ETV Bharat Karnataka Team

Published : Nov 3, 2023, 11:43 AM IST

ಮುಂಬೈ(ಮಹಾರಾಷ್ಟ್ರ): 2023ರ ವಿಶ್ವಕಪ್‌ ಕ್ರಿಕೆಟ್‌ನ 33ನೇ ಪಂದ್ಯ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ- ಶ್ರೀಲಂಕಾ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಭಾರತ ಬೃಹತ್ ಗೆಲುವು ದಾಖಲಿಸುವುದರೊಂದಿಗೆ ಸೆಮೀಸ್‌ ಪ್ರವೇಶಿಸಿತು. ಮೊಹಮ್ಮದ್ ಶಮಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ನಂತರ ಮತ್ತೊಂದು ಹೈಲೆಟ್​ ಅಂದ್ರೆ ಅದು ಕೆ.ಎಲ್.ರಾಹುಲ್​ ಪಡೆದ ಡಿಆರ್​ಎಸ್​ ರಿವ್ಯೂ.

ಟಾಸ್​ ಗೆದ್ದು ಸೆಕೆಂಡ್​ ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ತಂಡಕ್ಕೆ ಭಾರತದ ವೇಗಿಗಳು ಇನ್ನಿಲ್ಲದಂತೆ ಕಾಡಿದರು. ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಮೊದಲ​ ವಿಕೆಟ್ ಪಡೆದು ಯಾರ್ಕರ್​ ಕಿಂಗ್​ ಬುಮ್ರಾ ಮಿಂಚಿದರು. ನಂತರ ಕ್ರೀಸಿಗೆ ಬಂದ ಬ್ಯಾಟರ್‌​ಗಳು ಹೆಚ್ಚು ಹೊತ್ತು ನಿಲ್ಲದೇ ಒಬ್ಬರ ಹಿಂದೊಬ್ಬರಂತೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಹಾದಿ ಹಿಡಿದರು.

11ನೇ ಓವರ್​ನಲ್ಲಿ ದುಷ್ಮಂತ ಚಮೀರಾ ಬ್ಯಾಟಿಂಗ್​ ಮಾಡುತ್ತಿದ್ದರು. ಆಗ ಶಮಿ ಬೌಲಿಂಗ್​ ಜವಾಬ್ದಾರಿ ನಿಭಾಯಿಸುತ್ತಿದ್ದರು. ಈ ಓವರ್​ನ 3ನೇ ಎಸೆತವನ್ನು ಶಮಿ ಚಮೀರಾ ಅವರ ಲೆಗ್ ಸೈಡ್‌ಗೆ ಬೌನ್ಸರ್ ಮಾಡಿದರು. ಈ ಎಸೆತವನ್ನು ಚಮೀರಾ ವೈಲ್ಡ್ ಪುಲ್ ಮಾಡಲು ಪ್ರಯತ್ನಿಸಿದ್ದಾರೆ. ಚೆಂಡು​ ಗ್ಲೌಸ್​ಗೆ ತಾಗಿ ವಿಕೆಟ್​ ಕೀಪರ್​ ಕೆ.ಎಲ್.ರಾಹುಲ್​ ಕೈ ಸೇರಿತ್ತು. ಆದರೆ ಅಂಪೈರ್​ ಇದನ್ನು ವೈಡ್​ ನಿರ್ಧಾರ ನೀಡಿದರು. ಅಂಪೈರ್​ ನಿರ್ಣಯದಿಂದ ಸಮಾಧಾನವಾಗದೇ ರಾಹುಲ್​ ನಾಯಕ ರೋಹಿತ್​ ಅವರ ಜೊತೆ ಚರ್ಚಿಸದೇ ಡಿಆರ್​ಎಸ್​ ರಿವ್ಯೂ​ ಪಡೆದರು.

ಡಿಆರ್​ಎಸ್​ ಪಡೆದ ವಿಷಯದಲ್ಲಿ ರೋಹಿತ್​ಗೆ ಕೊಂಚ ಮುಜುಗರ ಉಂಟಾದಂತೆ ಕಂಡುಬಂತು. ಬಳಿಕ ರೋಹಿತ್​ ಮನವೊಲಿಸಿ ರಾಹುಲ್​ ಡಿಆರ್​ಎಸ್​ ರಿವ್ಯೂ​ ಪಡೆದರು. ಅಲ್ಟ್ರಾಎಡ್ಜ್​ನಲ್ಲಿ ಬಾಲ್​ ಗ್ಲೌಸ್‌ಗೆ ತಗುಲಿರುವುದು ಸ್ಪಷ್ಟವಾಗಿ ಕಂಡುಬಂತು. ಇದು ರಾಹುಲ್‌ ಅವರ ಅನುಮಾನವನ್ನು ದೃಢಪಡಿಸಿತು. ಅಂಪೈರ್​ ತನ್ನ ನಿರ್ಧಾರವನ್ನು ರದ್ದುಗೊಳಿಸಿದಾಗ ಎಲ್ಲರೂ ಅರೆಕ್ಷಣ ಅಚ್ಚರಿಯಾದರು. ಬಳಿಕ ಎಲ್ಲರೂ ಸಂತಸ ವ್ಯಕ್ತಪಡಿಸಿದರು. ಮೈದಾನದಲ್ಲಿ ರಾಹುಲ್​ ಸಹ ಕೊಂಚ ತಮಾಷೆ ಮಾಡುವ ಮೂಲಕ ಗಮನ ಸೆಳೆದರು. ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್​ ಅಭಿಮಾನಿಗಳು, ಈ ರಿವ್ಯೂ​ನಿಂದ ಧೋನಿ ನೆನಪಾದರು ಎಂದು ಬರೆದುಕೊಂಡಿದ್ದಾರೆ.

ಡಿಆರ್​ಎಸ್​ ನಿರ್ಣಯ- ರೋಹಿತ್​ ಮಾತು: ಶಮಿ ಬೌಲಿಂಗ್‌ನಲ್ಲಿ ಡಿಆರ್​ಎಸ್​ ಪಡೆದ ವಿಷಯದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, "ನಮ್ಮ ಬೌಲರ್‌ಗಳ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಡಿಆರ್​ಎಸ್​​ ನಿರ್ಧಾರವನ್ನು ಬೌಲರ್ ಮತ್ತು ವಿಕೆಟ್ ಕೀಪರ್‌ಗೆ ಬಿಡಲಾಗಿದೆ. ಇಬ್ಬರಿಗೂ ಬಾಲ್​ ಎಸೆತದ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ವೈಯಕ್ತಿಕವಾಗಿ ಪ್ರತಿಯೊಬ್ಬರ ಮೇಲೂ ನನಗೆ ನಂಬಿಕೆ ಇದೆ" ಎಂದರು.

ಇದನ್ನೂ ಓದಿ: ಫಸ್ಟ್​ ಬಾಲ್​, ಫಸ್ಟ್​ ವಿಕೆಟ್! 48 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬುಮ್ರಾ ಸಾಧನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.