ETV Bharat / sports

World Cup 2023: ಕಳೆದ ವರ್ಷದಿಂದ ಟೀಮ್ ಇಂಡಿಯಾದ ಆಟಗಾರರ ಫಾರ್ಮ್​ ಹೇಗಿದೆ ಗೊತ್ತಾ!?

author img

By ETV Bharat Karnataka Team

Published : Oct 11, 2023, 10:10 AM IST

ICC Cricket World Cup 2023: ನವದೆಹಲಿಯಲ್ಲಿ ಇಂದು ಮಧ್ಯಾಹ್ನ ಭಾರತ ಮತ್ತು ಅಫ್ಘಾನಿಸ್ತಾನ ಮಧ್ಯೆ ಪಂದ್ಯ ನಡೆಯಲಿದೆ. ಭಾರತ ತಂಡದ ಎಲ್ಲ ಆಟಗಾರರು ಉತ್ತಮವಾಗಿಯೇ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ವರ್ಷದಿಂದ ಟೀಮ್ ಇಂಡಿಯಾದ ಆಟಗಾರರ ಫಾರ್ಮ್​ ಹೇಗಿದೆ ಎಂಬುದು ತಿಳಿಯೋಣಾ ಬನ್ನಿ..

ICC Cricket World Cup 2023  How was the performance of Team India  performance of Team India players from last year  ಟೀಮ್ ಇಂಡಿಯಾದ ಆಟಗಾರರ ಫಾರ್ಮ್  ಕಳೆದ ವರ್ಷದಿಂದ ಟೀಮ್ ಇಂಡಿಯಾದ ಆಟಗಾರರ ಫಾರ್ಮ್​ ಹೇಗಿದೆ  ಭಾರತ ಮತ್ತು ಅಫ್ಘಾನಿಸ್ತಾನ ಮಧ್ಯೆ ಪಂದ್ಯ  ಭಾರತ ತಂಡದ ಎಲ್ಲ ಆಟಗಾರರು ಉತ್ತಮ  ಏಕದಿನ ವಿಶ್ವಕಪ್​ನಲ್ಲಿ ಭಾರತ ಶುಭಾರಂಭ  ಮೊದಲ ಪಂದ್ಯದಲ್ಲಿ ಆಸೀಸ್ ತಂಡವನ್ನು ಎದುರಿಸಿದ ಭಾರತ  ಭಾರತ ಮೊದಲ ಪಂದ್ಯದಲ್ಲಿ ಗೆಲುವು  ತಂಡದಲ್ಲಿರುವ ಆಟಗಾರರ ODI ಫಾರ್ಮ್
ಕಳೆದ ವರ್ಷದಿಂದ ಟೀಮ್ ಇಂಡಿಯಾದ ಆಟಗಾರರ ಫಾರ್ಮ್​ ಹೇಗಿದೆ ಗೊತ್ತಾ!?

ನವದೆಹಲಿ: ಏಕದಿನ ವಿಶ್ವಕಪ್​ನಲ್ಲಿ ಭಾರತ ಶುಭಾರಂಭ ಮಾಡಿರುವುದು ಗೊತ್ತಿರುವ ಸಂಗತಿ. ತನ್ನ ಮೊದಲ ಪಂದ್ಯದಲ್ಲಿ ಆಸೀಸ್ ತಂಡವನ್ನು ಎದುರಿಸಿದ ಭಾರತ ಆರಂಭಿಕ ಮ್ಯಾಚ್​​ನ ಶುರುವಿನಲ್ಲೇ ಕೊಂಚ ಎಡವಿತ್ತು. ಬಳಿಕ ಜವಾಬ್ದಾರಿಯುತ ಆಟದಿಂದ ಭಾರತ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿತು. ಕಳೆದ ವರ್ಷದಿಂದ ಪ್ರಸ್ತುತ ಘೋಷಿಸಲಾದ ತಂಡದಲ್ಲಿರುವ ಆಟಗಾರರ ODI ಫಾರ್ಮ್ ಹೇಗಿದೆ ಎಂಬುದು ನೋಡುವುದಾದರೆ,

  1. ರೋಹಿತ್ ಶರ್ಮಾ (ನಾಯಕ): ರೋಹಿತ್ ಶರ್ಮಾ ಇತ್ತೀಚೆಗೆ ಏಷ್ಯಾಕಪ್‌ನಲ್ಲಿ ನೇಪಾಳ ವಿರುದ್ಧ ಅರ್ಧಶತಕ ಗಳಿಸಿದ್ದರು. ಕಳೆದ ವರ್ಷ ರೋಹಿತ್​ ಬ್ಯಾಟಿಂಗ್ ಪ್ರದರ್ಶನವು ಅದ್ಭುತವಾಗಿತ್ತು. ಅವರ ಮಟ್ಟಕ್ಕೆ ತಕ್ಕಂತೆ ಆಟ ಆಡಲಿಲ್ಲ. ಕಳೆದ ವರ್ಷದಿಂದ ವಿಶ್ವಕಪ್​ ಆರಂಭಕ್ಕೂ ಮುನ್ನ ಅವರು ಒಟ್ಟು 12 ODI ಪಂದ್ಯಗಳನ್ನು ಆಡಿದ್ದು, 472 ರನ್ ಗಳಿಸಿದ್ದರು. ಅದರಲ್ಲಿ ಒಂದು ಶತಕ ಸೇರಿದೆ. ಕಳೆದ ವಿಶ್ವಕಪ್‌ನಲ್ಲಿ ರೋಹಿತ್ 648 ರನ್ ಗಳಿಸಿ ಅಗ್ರ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.
  2. ಶುಭಮನ್ ಗಿಲ್: ಇತ್ತೀಚೆಗೆ ಅವರು ಸ್ವಲ್ಪ ಒತ್ತಡದಲ್ಲಿದ್ದಾರೆ. ಆದರೆ.. ಕಳೆದ ವರ್ಷ ಗಿಲ್ ಅವರ ಪ್ರದರ್ಶನ ಉತ್ತಮವಾಗಿದೆ. ಇತ್ತೀಚೆಗೆ ನೇಪಾಳ ವಿರುದ್ಧ ಅರ್ಧಶತಕ ಬಾರಿಸಿದ್ದರು. ಆದರೆ ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧ ನಿರಾಸೆ ಮೂಡಿಸಿದ್ದರು. ವಿಶ್ವಕಪ್​ ಆರಂಭದ ಪಂದ್ಯದವರೆಗೂ ಗಿಲ್ 21 ಏಕದಿನ ಪಂದ್ಯಗಳನ್ನು ಆಡಿದ್ದು, ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ಕಿವೀಸ್ ವಿರುದ್ಧದ ದ್ವಿಶತಕವೂ ಸೇರಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಎರಡೂ ಪಂದ್ಯಗಳಲ್ಲಿ ಬೌಲ್ಡ್ ಆಗಿದ್ದರು. ಇದರಿಂದ ಎದುರಾಳಿಗಳಿಗೆ ವಿಶ್ವಕಪ್‌ನಲ್ಲಿ ಅವರನ್ನು ತಡೆಯುವುದು ಕಷ್ಟಕರವಾಗಿದೆ. ಸದ್ಯ ಗಿಲ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.
  3. ವಿರಾಟ್ ಕೊಹ್ಲಿ: ಫಾರ್ಮ್ ತಾತ್ಕಾಲಿಕ.. ವರ್ಗ ಶಾಶ್ವತ.. ಈ ಪದ ವಿರಾಟ್ ಕೊಹ್ಲಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಕಳೆದೊಂದು ವರ್ಷದಿಂದ ತಮ್ಮ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ಎದುರಾಳಿಗೆ ನಡುಕ ಹುಟ್ಟಿಸಿದ್ದಾರೆ. ಕೊಹ್ಲಿ ಇತ್ತೀಚೆಗೆ 14 ಪಂದ್ಯಗಳಲ್ಲಿ 46.50 ಸರಾಸರಿಯಲ್ಲಿ 558 ರನ್ ಗಳಿಸಿದ್ದಾರೆ. ಇದು ಸಾಮಾನ್ಯವಾಗಿ ಯಾವುದೇ ಕ್ರಿಕೆಟಿಗನಿಗೆ ಉತ್ತಮ ಅಂಕಿ - ಅಂಶಗಳಾಗಿವೆ. ಆದರೆ, ಇವು ವಿರಾಟ್ ಮಟ್ಟಕ್ಕಿಂತ ಕಡಿಮೆ. ಇದೇ ಕೊನೆಯ ವಿಶ್ವಕಪ್ ಎಂದು ಕ್ರಿಕೆಟ್ ವಿಶ್ಲೇಷಕರು ಭಾವಿಸಿರುವಾಗ ಅದರಗೊಟ್ಟಿಗೆ ತಂಡವನ್ನು ವಿಶ್ವ ಚಾಂಪಿಯನ್ ಮಾಡುವ ಜವಾಬ್ದಾರಿ ಅವರ ಮೇಲಿದೆ.
  4. ಇಶಾನ್ ಕಿಶನ್: ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಬಂದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವೇಗದ ದ್ವಿಶತಕ ದಾಂಡಿಗ ಎನಿಸಿಕೊಂಡಿರುವ ಇಶಾನ್ ಕಳೆದ ವರ್ಷದಿಂದ 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇತ್ತೀಚೆಗೆ ಅವರು ಏಷ್ಯಾಕಪ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧ ಅರ್ಧಶತಕಗಳನ್ನು ಗಳಿಸಿದ್ದರು. ಸತತ ನಾಲ್ಕು ಅರ್ಧಶತಕಗಳನ್ನು ಗಳಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಅವರು ಧೋನಿ ಮೀರಿಸಿದರು. ಎಡಗೈ ಬ್ಯಾಟ್ಸ್‌ಮನ್ ಆಗಿರುವುದು ಇಶಾನ್‌ಗೆ ಹೆಚ್ಚುವರಿ ಪ್ರಯೋಜನವಾಗಿದೆ. ಅವರು ಕೇವಲ 12 ಪಂದ್ಯಗಳಲ್ಲಿ 57.45 ಸರಾಸರಿಯಲ್ಲಿ 632 ರನ್ ಗಳಿಸಿದ್ದಾರೆ. ಆದರೆ ಈ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಡಕ್​ ಆಗಿ ನಿರಾಸೆ ಮೂಡಿಸಿದ್ದಾರೆ. ಒಂದು ವೇಳೆ ಅವರು ಫಾರ್ಮ್ ಕಂಡುಕೊಂಡರೇ ಕೆಲ ಹಿರಿಯರು ತಂಡದಲ್ಲಿ ಶಾಶ್ವತವಾಗಿ ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ.
  5. ಕೆಎಲ್ ರಾಹುಲ್: ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಿರುವುದು ಅಚ್ಚರಿ ಮೂಡಿಸಿರುವುದು ಗೊತ್ತಿರುವ ಸಂಗತಿ. ಅವರು ಹೆಚ್ಚು ಫಾರ್ಮ್‌ನಲ್ಲಿಲ್ಲ ದಿದ್ದರೂ ಗಾಯದಿಂದ ಚೇತರಿಸಿಕೊಂಡ ಬಳಿಕ ಆಡಳಿತ ಮಂಡಳಿಗೆ ಅವರ ಮೇಲೆ ನಂಬಿಕೆ ಇದೆ. ಏಷ್ಯಾಕಪ್​ನಲ್ಲೂ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿರುವುದು ಗೊತ್ತೇ ಇದೆ. ಸೂಪರ್-4 ಹಂತಕ್ಕೆ ಭಾರತ ಪ್ರವೇಶಿಸಿತು. ಆಗ ಅವರು ಪಾಕಿಸ್ತಾನದ ವಿರುದ್ಧ ಶತಕದೊಂದಿಗೆ ಪುನರಾಗಮನ ಮಾಡಿ ಎಲ್ಲರ ಗಮನ ಸೆಳೆದರು. ನಂತರ ಆಸೀಸ್ ವಿರುದ್ಧದ ODI ಸರಣಿಯಲ್ಲಿ ಅವರು ಎರಡು ಅರ್ಧಶತಕಗಳನ್ನು ಗಳಿಸಿ ಮಿಂಚಿದರು.
  6. ಸೂರ್ಯಕುಮಾರ್: ಟಿ20ಯಲ್ಲಿ ಸೂಪರ್‌ಸ್ಟಾರ್. ಅವರು ಏಕದಿನ ಪಂದ್ಯಗಳನ್ನು ಪ್ರವೇಶಿಸಿದಾಗ ಎಲ್ಲರಿಗೂ ನಿರಾಸೆ ಮೂಡಿಸಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಅವರು ಆಕ್ರಮಣಕಾರಿ ಆಟವಾಡಬೇಕು ಎಂದು ಟೀಮ್ ಮ್ಯಾನೇಜ್‌ಮೆಂಟ್ ಭಾವಿಸಿದೆ. ಆದರೆ, ಸೂರ್ಯ ಅವರಿಗೆ ಅವಕಾಶ ಸಿಕ್ಕಿತು. WTC ಫೈನಲ್‌ಗೆ ಮೊದಲು ಆಸೀಸ್ ವಿರುದ್ಧ ಸತತ ಮೂರು ಡಕೌಟ್‌ಗಳ ಇನ್ನಿಂಗ್ಸ್ ಕೂಡ ಇತ್ತು. ಇತ್ತೀಚೆಗೆ ಅವರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅಮೂಲ್ಯ ರನ್ ಗಳಿಸಿದ ನಂತರ ಫಾರ್ಮ್‌ಗೆ ಮರಳಿದರು. ಮತ್ತೆ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಅರ್ಧಶತಕಗಳ ಮೂಲಕ ತಮ್ಮ ಫಾರ್ಮ್ ತೋರಿದರು.
  7. ಶ್ರೇಯಸ್ ಅಯ್ಯರ್: ಗಾಯಗಳಿಂದ ಬಳಲುತ್ತಿದ್ದ ಶ್ರೇಯಸ್ ಫಿಟ್ನೆಸ್ ಸಾಬೀತುಪಡಿಸಿದ ನಂತರ ತಂಡಕ್ಕೆ ವಾಪಸ್​ ಆದರು. ಅವರು ಏಷ್ಯಾಕಪ್‌ಗೆ ಆಯ್ಕೆಯಾಗಿರುವುದು ದೊಡ್ಡ ವಿಷಯ ಎಂದು ಎಲ್ಲರೂ ಭಾವಿಸಿದ್ದರು. ಏಕೆಂದರೆ ಫಿಟ್ನೆಸ್ ಬಗ್ಗೆ ಇನ್ನೂ ಅನುಮಾನಗಳಿವೆ. ಏಷ್ಯಾಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಕ್ರೀಸ್​ಗೆ ಬಂದ ಶ್ರೇಯಸ್ ಮುಕ್ತವಾಗಿ ಬ್ಯಾಟ್ ಬೀಸಿದರು. ಸ್ವಲ್ಪ ಸಮಯದವರೆಗೆ ಯಾವುದೇ ತೊಂದರೆ ಇರಲಿಲ್ಲ. ಇತ್ತೀಚೆಗಷ್ಟೇ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಫಾರ್ಮ್ ಕುರಿತ ಅನುಮಾನಗಳಿಗೆ ತೆರೆ ಎಳೆದಿದ್ದರು. ಇದು ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ನಿರ್ಣಾಯಕವಾಗಲಿದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
  8. ಹಾರ್ದಿಕ್ ಪಾಂಡ್ಯ: ಒಬ್ಬ ಪೇಸ್ ಆಲ್‌ರೌಂಡರ್ ಆಗಿ ಪಾಕಿಸ್ತಾನ ವಿರುದ್ಧದ ಅತ್ಯುತ್ತಮ ಪ್ರದರ್ಶನದ ನಂತರ ಹಾರ್ದಿಕ್ ಮೇಲಿನ ನಿರೀಕ್ಷೆಗಳು ಅಪಾರವಾಗಿ ಹೆಚ್ಚಿವೆ. T20I ನಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗದ ಹಾರ್ದಿಕ್ ODIಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಕಳೆದ ವರ್ಷ ಸೆಪ್ಟೆಂಬರ್​ನಿಂದ ಪಾಂಡ್ಯ 12 ಪಂದ್ಯಗಳಲ್ಲಿ 367 ರನ್ ಗಳಿಸಿದ್ದಾರೆ. ಬೌಲಿಂಗ್​ನಲ್ಲೂ ಹತ್ತು ವಿಕೆಟ್ ಕಬಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಅಂಕಿ - ಅಂಶಗಳನ್ನು (3/44) ದಾಖಲಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಕೆಲವು ಓವರ್ ಬೌಲಿಂಗ್ ಮಾಡಿದರೂ ಹಾರ್ದಿಕ್ ಪಾಂಡ್ಯ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ನಿಪುಣರಾಗಿದ್ದಾರೆ.
  9. ರವೀಂದ್ರ ಜಡೇಜಾ: ಸ್ಪಿನ್ ಆಲ್‌ರೌಂಡರ್ ಆಗಿ, ಮೈದಾನದಲ್ಲಿ ಸಕ್ರಿಯವಾಗಿ ಚಲಿಸುವ ರವೀಂದ್ರ ಜಡೇಜಾ ಈ ಬಾರಿ ಭಾರಿ ನಿರೀಕ್ಷೆಯನ್ನು ಹೊಂದಿದ್ದಾರೆ. 2011ರ ಏಕದಿನ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ನಿರ್ವಹಿಸಿದ ಪಾತ್ರವನ್ನು ಈ ಬಾರಿ ಜಡೇಜಾ ನಿರ್ವಹಿಸಬೇಕಾಗಿದೆ. ಭಾರತದಲ್ಲಿ ಪಂದ್ಯಗಳು ನಡೆಯುವುದರಿಂದ ಸ್ಪಿನ್‌ಗೆ ಒಲವು ತೋರುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಬೌಲಿಂಗ್​ನಲ್ಲಿ ತಮ್ಮ ಕೋಟಾದ ಓವರ್​ಗಳನ್ನು ಪೂರ್ಣಗೊಳಿಸಿ ಕನಿಷ್ಠ ಎರಡು ಅಥವಾ ಮೂರು ವಿಕೆಟ್ ಪಡೆದರೆ ತಂಡಕ್ಕೆ ತುಂಬಾ ಉಪಯೋಗವಾಗುತ್ತದೆ. ಆದರೆ, ಕಳೆದ ವರ್ಷ ಅವರ ಸಾಧನೆ ಉತ್ತಮವಾಗಿರಲಿಲ್ಲ. ಅವರು ಏಳು ಪಂದ್ಯಗಳಲ್ಲಿ 127 ರನ್ ಗಳಿಸಿದರು ಮತ್ತು ಕೇವಲ ಐದು ವಿಕೆಟ್​ಗಳನ್ನು ಪಡೆದ್ದಾರೆ. ಆದ್ರೂ ಅವರು ಏಷ್ಯಾ ಕಪ್‌ನಲ್ಲಿ ಮೂರು ವಿಕೆಟ್‌ಗಳು ಪಡೆಯುವುದರೊಂದಿಗೆ ಫಾರ್ಮ್‌ಗೆ ಮರಳಿದರು.
  10. ರವಿಚಂದ್ರನ್ ಅಶ್ವಿನ್: ಹಿರಿಯ ಸ್ಪಿನ್ ಆಲ್ ರೌಂಡರ್. ಅವರು ಅನಿರೀಕ್ಷಿತವಾಗಿ ತಂಡಕ್ಕೆ ಸೇರಿಕೊಂಡಿದ್ದಾರೆ. ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಅಂತರಾಷ್ಟ್ರೀಯ ಏಕದಿನ ಮಾದರಿಯಿಂದ ದೂರವಿದ್ದರು. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದರು. ಅವರು ಎರಡೂ ಪಂದ್ಯಗಳಲ್ಲಿ ಗುಣಮಟ್ಟದ ಬೌಲಿಂಗ್ ಮಾಡಿ ನಾಲ್ಕು ವಿಕೆಟ್‌ಗಳನ್ನೂ ಕಬಳಿಸಿದರು. ಇದರಿಂದಾಗಿ ಗಾಯದ ಸಮಸ್ಯೆಯಿಂದ ಮೆಗಾ ಟೂರ್ನಿಯಿಂದ ಹೊರಗುಳಿದಿದ್ದ ಅಕ್ಷರ್ ಪಟೇಲ್ ಜಾಗದಲ್ಲಿ ಅಶ್ವಿನ್ ಸ್ಥಾನ ಪಡೆದರು. ಅನುಭವ, ಹಿರಿತನ, ಸ್ಪಿನ್, ಬ್ಯಾಟಿಂಗ್ ವಿಷಯದಲ್ಲಿ ಉತ್ತಮ ಆಟಗಾರ.. ಭಾರತದ ಪಿಚ್‌ಗಳು ಹೆಚ್ಚು ಸ್ಫೋಟಗೊಳ್ಳುವ ನಿರೀಕ್ಷೆಯಿದೆ.
  11. ಶಾರ್ದೂಲ್ ಠಾಕೂರ್: ಈ ಬಾರಿ ಭಾರತ ನಾಲ್ವರು ಆಲ್ ರೌಂಡರ್​ಗಳೊಂದಿಗೆ ಕಣಕ್ಕೆ ಇಳಿಯುತ್ತಿದೆ. ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಕೂಡ ಪೇಸ್ ಆಲ್ ರೌಂಡರ್ ಆಗಿ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ, ಬ್ಯಾಟಿಂಗ್​ನಲ್ಲಿ ಹೆಚ್ಚಿನ ಅವಕಾಶಗಳು ಸಿಗದಿದ್ದರೂ ಬೌಲಿಂಗ್​ನಲ್ಲಿ ತಮ್ಮ ಸಾಮರ್ಥ್ಯ ತೋರಿದ್ದಾರೆ ಶಾರ್ದೂಲ್​. ಕಳೆದ ವರ್ಷ ಒಟ್ಟು 15 ಏಕದಿನ ಪಂದ್ಯಗಳನ್ನಾಡಿದ್ದ ಶಾರ್ದೂಲ್ 94 ರನ್ ಮಾತ್ರ ಗಳಿಸಿದ್ದರು. ಆದರೆ, ಅವರು ಒಟ್ಟು 22 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಅವರು ನಾಲ್ಕು ವಿಕೆಟ್‌ಗಳನ್ನು ಒಮ್ಮೆ ಮತ್ತು ಎರಡು ಬಾರಿ ಮೂರು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
  12. ಕುಲದೀಪ್ ಯಾದವ್: ಬಿಸಿಸಿಐ ಯುಜ್ವೇಂದ್ರ ಚಹಾಲ್ ಬದಲಿಗೆ ಕುಲದೀಪ್ ಅವರನ್ನು ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಆಯ್ಕೆ ಮಾಡಿರುವುದು ಗೊತ್ತಿರುವ ವಿಚಾರ. ಅವರ ಅದ್ಭುತ ಪ್ರದರ್ಶನವೂ ಆಯ್ಕೆಗೆ ಕಾರಣವಾಗಿರಬಹುದು. ಏಕೆಂದರೆ ಕಳೆದ ವರ್ಷ ಅವರು 16 ಪಂದ್ಯಗಳಲ್ಲಿ 29 ವಿಕೆಟ್ ಪಡೆದಿದ್ದರು. ವಿಂಡೀಸ್ ವಿರುದ್ಧದ 4/6 ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಅವರು ಎರಡು ಬಾರಿ ನಾಲ್ಕು ವಿಕೆಟ್ ಮತ್ತು ಮೂರು ಬಾರಿ ಮೂರು ವಿಕೆಟ್ ಪಡೆದ್ದಾರೆ. ಭಾರತದಲ್ಲಿ ಪಂದ್ಯಗಳು ನಡೆಯುವುದರಿಂದ ಅವರ ಎಡಗೈ ಲೆಗ್‌ಸ್ಪಿನ್ ಹೆಚ್ಚು ವೈವಿಧ್ಯಮಯವಾಗುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ಅವರು ಆಸ್ಟ್ರೇಲಿಯಾ ಪಂದ್ಯದ ವಿರುದ್ಧ ಸಾಬೀತು ಪಡಿಸಿದ್ದಾರೆ.
  13. ಮೊಹಮ್ಮದ್ ಶಮಿ: ಶಮಿಗೆ ಇಲ್ಲಿ ಅನುಭವ ಉಪಯೋಗವಾಗುತ್ತೆ. ಏಕೆಂದರೆ ಕಳೆದ ವರ್ಷ ಅವರು 8 ODI ಪಂದ್ಯಗಳನ್ನು ಆಡಿದ್ದು, 10 ವಿಕೆಟ್​ಗಳನ್ನು ಪಡೆದ್ದಾರೆ. ಆದರೆ, ಅವರು ಆಸೀಸ್ ಸರಣಿಯ ಪಂದ್ಯವೊಂದರಲ್ಲಿ 3/17 ಅಂಕಿಗಳನ್ನು ದಾಖಲಿಸಿದ್ದಾರೆ. ಬುಮ್ರಾ ಜೊತೆಗೆ ಮೆಗಾ ಟೂರ್ನಿಗಳಲ್ಲಿ ವೇಗದ ಬೌಲಿಂಗ್ ಅನ್ನು ಮುನ್ನಡೆಸುವ ಸಾಮರ್ಥ್ಯ ಶಮಿಗಿದೆ. ಕಳೆದ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪೈಕಿ ಶಮಿ ಕೂಡ ಸೇರಿರುವುದು ಅವರ ಸಾಮರ್ಥ್ಯ ಎಂಥದ್ದು ಎಂಬುದನ್ನು ತೋರಿಸುತ್ತದೆ.
  14. ಮೊಹಮ್ಮದ್ ಸಿರಾಜ್: ಸಿರಾಜ್ ಅವರು ಬುಮ್ರಾ ಅವರ ಒಂದು ವರ್ಷದ ಕೊರತೆಯನ್ನು ತುಂಬಿದ ಬೌಲರ್. ಹಿರಿಯರ ಅನುಪಸ್ಥಿತಿಯಲ್ಲಿ ಅವರು ತಮ್ಮ ಹೆಗಲ ಮೇಲೆ ಪೇಸ್ ದಾಳಿಯನ್ನು ಮುನ್ನಡೆಸಿದರು. ಸಿರಾಜ್ ಕಳೆದ ಸೆಪ್ಟೆಂಬರ್‌ನಿಂದ ವಿಶ್ವಕಪ್​ ಪಂದ್ಯದವರೆಗೆ 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 30 ವಿಕೆಟ್ ಪಡೆದಿರುವುದು ಅವರ ಫಾರ್ಮ್ ಮಟ್ಟವನ್ನು ತೋರಿಸುತ್ತದೆ. ಅವರು ಏಷ್ಯಾಕಪ್​ನಲ್ಲಿ ಶ್ರೀಲಂಕಾ ವಿರುದ್ಧ 4/32 ಅವರ ಅತ್ಯುತ್ತಮ ಅಂಕಿ - ಅಂಶಗಳನ್ನು ಹೊಂದಿದ್ದಾರೆ.
  15. ಜಸ್ಪ್ರೀತ್ ಬುಮ್ರಾ: ವಿಶ್ವದ ಅತ್ಯುತ್ತಮ ವೇಗಿ ಎಂದು ಕರೆಯಲ್ಪಡುವ ಬುಮ್ರಾ ಕಳೆದ ವರ್ಷ ಕೇವಲ ಒಂದು ಏಕದಿನ ಪಂದ್ಯವನ್ನು ಆಡಿದ್ದರು. ಈ ಬಾರಿಯ ಏಷ್ಯಾಕಪ್‌ನಲ್ಲಿರುವುದು ವಿಶೇಷ. ಆದರೆ, ಬೌಲಿಂಗ್ ಮಾಡಲು ಅವಕಾಶ ಸಿಗದಂತೆ ವರುಣ ತಡೆದರು. ಗಾಯದ ಸಮಸ್ಯೆಯಿಂದ ವಿಶ್ರಾಂತಿಗೆ ಸೀಮಿತವಾಗಿರುವ ಬುಮ್ರಾ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರು. ಅವರು ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದರು ಮತ್ತು ಏಷ್ಯಾ ಕಪ್ ಜೊತೆಗೆ ODI ವಿಶ್ವಕಪ್ ಪ್ರವೇಶಿಸಿದ್ದಾರೆ. ಆದರೆ, ಏಷ್ಯಾಕಪ್​ನಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಬುಮ್ರಾ ಮೊದಲ ಬಾರಿಗೆ ತಂದೆಯಾದ ನಂತರ ಭಾರತಕ್ಕೆ ತೆರಳಿದ್ದರು. ಏಷ್ಯಾಕಪ್ ಸೂಪರ್-4 ಮತ್ತು ಆಸೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅವರು ತಮ್ಮ ಫಿಟ್ನೆಸ್ ಮತ್ತು ಫಾರ್ಮ್ ಅನ್ನು ಸಾಬೀತುಪಡಿಸಿದರು.

ಓದಿ: ICC Cricket World Cup 2023: ಈ ಬಾರಿಯೂ ವಿಶ್ವ ಸಮರದಲ್ಲಿ ಸ್ಪಿನ್ನರ್​ಗಳದ್ದೇ ಅಧಿಪತ್ಯ.. ಅವರ ಆಕ್ರಮಣಕಾರಿ ಆಟ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.